ನಾಯಕರ ಹಠಮಾರಿತನ- ಬಿಜೆಪಿ ಕಾರ್ಯಕರ್ತರ ನಡುವೆಯೇ ಡಿಶುಂ ಡಿಶುಂ!

Public TV
1 Min Read

ಚಿಕ್ಕಮಗಳೂರು: ಚುನಾವಣೆ (Election) ಸಂದರ್ಭದಲ್ಲಿ ವಿವಿಧ ಪಕ್ಷಗಳ ಮಧ್ಯೆ ವಾರ್ ನಡೆಯೋದು ಕಾಮನ್. ಆದರೆ ಕಾಫಿನಾಡ ಮೂಡಿಗೆರೆಯಲ್ಲಿ ಬಿಜೆಪಿ ವರ್ಸಸ್ ಬಿಜೆಪಿಯ ಮಧ್ಯೆ ನಾನಾ-ನೀನಾ ವಾರ್ ಏರ್ಪಟ್ಟಿದೆ. ಇಬ್ಬರು ಲೀಡರ್ ಗಳ ಮಧ್ಯೆ ವರ್ಷಗಳಿಂದ ಇದ್ದ ಆ ಅಸಮಾಧಾನ ಜಗಜ್ಜಾಹೀರಾಗಿದೆ.

ಹೌದು. ಮೂಡಿಗೆರೆ ಪೊಲೀಸ್ ಸ್ಟೇಷನ್ (Mudigere Police Station) ಪಕ್ಕದಲ್ಲಿ ಆಟೋ ನಿಲ್ದಾಣವಿದೆ. ಅಲ್ಲಿ ಆಟೋ ನಿಲ್ಲೋದಕ್ಕೆ ಜಾಗವಿಲ್ಲವೆಂದು ಎಂ.ಎಲ್.ಸಿ. ಪ್ರಾಣೇಶ್ ತಮ್ಮ ಅನುದಾನದಲ್ಲಿ ಆಟೋ ನಿಲ್ದಾಣಕ್ಕೆ 5 ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಿಕೊಟ್ಟಿದ್ರು. ಆದರೆ ಪಟ್ಟಣ ಪಂಚಾಯಿತಿಯ ಕುಮಾರಸ್ವಾಮಿ ಬೆಂಬಲಿಗರು ಆಟೋ ನಿಲ್ದಾಣಕ್ಕೆ ಅನುಮತಿ ಇಲ್ಲ. ಎಂಜಿನಿಯರ್ ಜಾಗ ಫೈನಲ್ ಮಾಡ್ಬೇಕು ಅಂತ ಆಟೋ ನಿಲ್ದಾಣದ ಬಗ್ಗೆ ಕಿರಿಕ್ ಮಾಡಿದ್ದಾರೆ. ಈ ವೇಳೆ ಇಬ್ಬರು ಬೆಂಬಲಿಗರ ಮಧ್ಯೆ ಮಾತಿಗೆ ಮಾತು ಬೆಳೆದು ಪೊಲೀಸ್ ಸ್ಟೇಷನ್ ಆವರಣದಲ್ಲಿ ನಾನಾ-ನೀನಾ ಅಂತ ಡಿಶುಂ… ಡಿಶುಂ…. ನಡೆಸಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ ಶಾಸಕ ಸ್ಥಾನಕ್ಕೆ ಗುಬ್ಬಿ ಶ್ರೀನಿವಾಸ್ ರಾಜೀನಾಮೆ – ಕಾಂಗ್ರೆಸ್ ಸೇರಲು ರೆಡಿ

ಈಗಾಗಲೇ ಮೂಡಿಗೆರೆ ಶಾಸಕ ಕುಮಾರಸ್ವಾಮಿ (Kumaraswamy) ವಿರುದ್ಧ ಕಾರ್ಯಕರ್ತರು ಆಕ್ರೋಶಕ್ಕೀಡಾಗಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ಬೇಡವೇ ಬೇಡ ಅಂತ ದುಂಬಾಲು ಬಿದ್ದಿದ್ದಾರೆ. ಸಿ.ಟಿ.ರವಿ (CT Ravi), ಎಂ.ಕೆ.ಪ್ರಾಣೇಶ್ ಮನೆಗೆ ಸಾವಿರಾರು ಕಾರ್ಯಕರ್ತರು ಭೇಟಿ ನೀಡಿ ಅವರಿಗೆ ಟಿಕೆಟ್ ಕೊಟ್ರೆ ಬಿಜೆಪಿ ಸೋಲುತ್ತೆ. ನಮ್ಮ ದಾರಿ ನಮಗೆ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಇದು ಕುಮಾರಸ್ವಾಮಿ ಬೆಂಬಲಿಗರು ಕೂಡ ತಿವಿದಂತಾಗಿದೆ.

ಒಂದೇ ಪಕ್ಷದ ಎರಡೂ ಗುಂಪಿನ ಕಾರ್ಯಕರ್ತರು ಹೊಡೆದಾಡ್ತಿರೋದು ವಿರೋಧ ಪಕ್ಷದವರಿಗೆ ಹಾಲು ಅನ್ನ ಊಟ ಮಾಡಿದಂತೆ ಆಗ್ತಿದೆ. ಮೂಡಿಗೆರೆಯಲ್ಲಿ ಇಬ್ಬರು ನಾಯಕರ ಅಂತರ್ಯುದ್ಧ ಪಕ್ಷಕ್ಕೆ ಡ್ಯಾಮೇಜ್ ಮಾಡ್ತಿರೋದಂತೂ ಸತ್ಯ.

Share This Article