ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? – BJPಯಿಂದ ಸೇ-ಸಿದ್ದು ಪೋಸ್ಟರ್ ರಿಲೀಸ್

Public TV
1 Min Read

ಬೆಂಗಳೂರು: ಕಾಂಗ್ರೆಸ್‌ನ (Congress) ಸೇ ಸಿಎಂ (SayCM) ಅಭಿಯಾನಕ್ಕೆ ಟಕ್ಕರ್ ಕೊಟ್ಟಿರುವ ಬಿಜೆಪಿ (BJP) ಇಂದು ಕಾಂಗ್ರೆಸ್ ಆಡಳಿತಾವಧಿಯ ಭ್ರಷ್ಟಾಚಾರ ಆರೋಪ ಮಾಡಿ ಸೇ-ಸಿದ್ದು (SaySiddu) ಪೋಸ್ಟರ್ ರಿಲೀಸ್ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರೇ, ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರದ ಬಗ್ಗೆ ಮೌನವೇಕೆ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಬೀದಿ ನಾಯಿಗಳಿಗೆ ತೊಂದರೆ ಕೊಡೋರ ವಿರುದ್ಧ ಕ್ರಮಕೈಗೊಳ್ಳಿ – ಪ್ರಧಾನಿಗೆ ಪತ್ರ ಬರೆದ ಕುಟುಂಬ

ಟ್ವೀಟ್‌ನಲ್ಲಿ ಏನಿದೆ?
ಮಾಜಿ ಸಿಎಂ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರದ ಬಗ್ಗೆ ಮೌನವೇಕೆ?

ಕಾಂಗ್ರೆಸ್: ಬಾಬಾ ಸಾಹೇಬರನ್ನು ಚುನಾವಣೆಯಲ್ಲಿ ಕುತಂತ್ರದಿಂದ ಸೋಲಿಸಿತು.
ಬಿಜೆಪಿ: ಅತೀ ಹೆಚ್ಚು ದಲಿತರನ್ನು ಗೆಲ್ಲಿಸಿಕೊಂಡು ಕೇಂದ್ರ ಸಂಪುಟದಲ್ಲಿ ಸಚಿವರನ್ನಾಗಿಸಿತು. ಇದನ್ನೂ ಓದಿ: ದಶಪಥ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಆರೋಪ – ನಿರಂತರ ಅಪಘಾತದಿಂದ ರೊಚ್ಚಿಗೆದ್ದ ಗ್ರಾಮಸ್ಥರು

ಕಾಂಗ್ರೆಸ್: ಅಂಬೇಡ್ಕರ್ (Ambedkar) ಅವರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ ಹಿಂದೆ ಮುಂದೆ ನೋಡಿತ್ತು, ಆದರೆ ಅದಾಗಲೇ ಇಂದಿರಾ ಗಾಂಧಿ ತಾನೇ ಭಾರತ ರತ್ನಕ್ಕೆ ಕೊರಳೊಡ್ಡಿದ್ದರು!
ಬಿಜೆಪಿ: ಅಂಬೇಡ್ಕರ್ ಅವರಿಗೆ ಭಾರತ ರತ್ನ ಎಂಬ ಪರಮೋಚ್ಛ ಗೌರವ ಲಭಿಸಬೇಕಾದರೆ ಬಿಜೆಪಿ ಬೆಂಬಲಿತ ಸರ್ಕಾರ ಬರಬೇಕಾಯಿತು.

ಕಾಂಗ್ರೆಸ್: ಅನೇಕ ದಶಕಗಳ ಪರಿಶಿಷ್ಟ ವರ್ಗದ ಮೀಸಲಾತಿ (SC-ST Reservation) ಹೆಚ್ಚಳದ ಬೇಡಿಕೆಯನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನಿರಾಕರಿಸುತ್ತಲೇ ಬಂದಿತ್ತು.
ಬಿಜೆಪಿ: ಅಧಿಕಾರ ಹಿಡಿದ ಕೇವಲ 3 ವರ್ಷದ ಒಳಗಾಗಿ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಿದೆ ಎಂದು ಹೇಳಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *