ಸಿದ್ದರಾಮಯ್ಯ ರಾಜ್ಯದ ಮರ್ಯಾದಾ ಪುರುಷೋತ್ತಮ- ಬಿಜೆಪಿ ವ್ಯಂಗ್ಯ

Public TV
2 Min Read

– ಬಿಜೆಪಿ ಕಾಲೆಳೆದು ತಿರುಗೇಟು ಕೊಟ್ಟ ನೆಟ್ಟಿಗರು

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಮರ್ಯಾದಾ ಪುರುಷೋತ್ತಮ ಎಂದು ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಹಾಕಿ ಅದರ ಮೇಲೆ ಪುರುಷೋತ್ತಮ ಎಂದು ದೊಡ್ಡ ಅಕ್ಷರದಲ್ಲಿ ಬರೆದು ಅದಕ್ಕೆ ಕಾರಣಗಳನ್ನು ಕೆಳಗೆ ಚಿಕ್ಕ ಅಕ್ಷರದಲ್ಲಿ ತಿಳಿಸಲಾಗಿದೆ. ಈ ಟ್ವೀಟ್ ನೋಡಿದ ಅನೇಕ ನೆಟ್ಟಿಗರು ಬಿಜೆಪಿ ವಿರುದ್ಧ ಕಿಡಿಕಾರಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ಸ್ವಂತ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲಿಸಿದ ಜೆಡಿಎಸ್‍ಗೆ ಬೆಂಬಲ ಕೊಟ್ಟ ಮರ್ಯಾದಸ್ಥರು. ಮುಖ್ಯಮಂತ್ರಿ ಪದವಿ ಕಳೆದುಕೊಂಡರೂ ಕಾವೇರಿ ಭವನ ಬಿಡದ ಮರಿಯಾದಸ್ಥರು. ಸಾಮಾನ್ಯ ಶಾಸಕರಾದರೂ ವಿಧಾನಸೌಧದಲ್ಲಿ ಕೊಠಡಿ ಪಡೆದ ಮರ್ಯಾದಸ್ಥರು. ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಅವರ ಮಗನನ್ನೇ ಸಿಎಂ ಮಾಡಿದ ಮರ್ಯಾದಸ್ಥರು. ತಮ್ಮ ಸರ್ಕಾರದಲ್ಲಿ ಮಾಡಿದ್ದ ಅಸಹ್ಯ ಕೆಲಸಗಳು ಹೊಸಗೆ ಬರಬಾರದೆಂದು ಜೆಡಿಎಸ್‍ಗೆ ಬೆಂಬಲ ಕೊಟ್ಟ ಮರ್ಯಾದಸ್ಥರು. ನೀಚ ಮುಖ್ಯಮಂತ್ರಿ ಎಂದವರ ಮಗನನ್ನೇ ಮುಖ್ಯಮಂತ್ರಿ ಮಾಡಿದ ಮರ್ಯಾದಸ್ಥರು. ಯಾವ ಮುಖ ಹೊತ್ತುಕೊಂಡು ಮಾತನಾಡುತ್ತೀರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ವಿರುದ್ಧ ನೆಟ್ಟಿಗರು ಕಿಡಿ:
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರುನಾಡಿಗೆ ಅನ್ನಭಾಗ್ಯದೊಂದಿಗೆ ಹಲವಾರು ಭಾಗ್ಯ ನೀಡಿದ ಭಾಗ್ಯದಾತ. ಕನ್ನಡಿಗರು ತಲೆ ತಗ್ಗಿಸುವಂತೆ ಮಾಡದ ಪುರುಷೋತ್ತಮ, ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯ ಮಾಡಿದ ಸರದಾರ, ಬಡವರ ಭಂದು, ರೈತ ಮಿತ್ರ ಕನ್ನಡಿಗರ ಹೃದಯ ಸಾಮ್ರಾಟ ನಮ್ಮ ಸಿದ್ದರಾಮಯ್ಯ ನಮ್ಮ ಹೆಮ್ಮೆ ಎಂದು ದೀಪಕ್ ಸಿಂಗ್ ಎಂಬವರು ಬಿಜೆಪಿ ಟಾಂಗ್ ಕೊಟ್ಟಿದ್ದಾರೆ.

ಹೌದು ನಮ್ಮ ಪಾಲಿಗೆ ಕನ್ನಡಿಗರ ಪಾಲಿಗೆ ಸಿದ್ದರಾಮಯ್ಯ ನವರು ಮರ್ಯಾದಾ ಪುರುಷೋತ್ತಮರು. ಏಕೆಂದರೆ ಅವರು ಹುಟ್ಟಿದಾರಭ್ಯ ತಮ್ಮ ಹೆಸರಿನ ಜೊತೆಗೆ ರಾಮನ ಹೆಸರು ಹೊಂದಿದ್ದಾರೆ. ಬೂಕನಕೆರೆ ಬಿಟ್ಟು ಇನ್ನೆಲ್ಲೋ ಬೀಡು ಬಿಟ್ಟವರಂತಲ್ಲ. ಸಿದ್ದರಾಮನ ಹುಂಡಿಯ ಮಣ್ಣಿನ ಮಗ ಕಣ ಕಣದಲ್ಲೂ ಮರ್ಯಾದಾ ಪುರುಷೋತ್ತಮನ ಛಾಪು ರಾಜಕೀಯ ಏರಿಳಿತ ಸಹಜ, ತಿಳಿಯಿರಿ ಎಂದು ರಾಜಶೇಖರ್ ತಳವಾರ್ ಹೇಳಿದ್ದಾರೆ.

ಮರ್ಯಾದಾ ಪುರುಷೋತ್ತಮ ಆ ಶ್ರೀ ರಾಮಚಂದ್ರನ ಹೆಸರಿನಿಂದ ರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದ ಪಕ್ಷ ನಿಮ್ಮದು. ಧರ್ಮದ ಹೆಸರಿನಲ್ಲಿ, ಜನಗಳನ್ನು ಒಡೆದು ಆಳುವ ಕುಲಗೇಡಿ ಪಕ್ಷ ನಿಮ್ಮದು. ಅಲ್ಲ ಸ್ವಾಮಿ, ಅಕಸ್ಮಾತ್ ಬಿಜೆಪಿ ಅಧಿಕಾರಕ್ಕೆ ಬಂದರೆ, ಅದು ಯಾವ ಮರ್ಯಾದಾ ಪುರುಷೋತ್ತಮ ಸಿಎಂ ಆಗುತ್ತಾರೆ? ಇರೋರೆಲ್ಲ ಮೂರು ಬಿಟ್ಟೋರೆ ಅಲ್ವಾ ಎಂದು ನವೀನ್ ಕುಮಾರ್ ಬಿ ವ್ಯಂಗ್ಯವಾಡಿದ್ದಾರೆ.

ಆಪರೇಷನ್ ಫೈಲ್ ಆಗಿದಕ್ಕೆ ಬ್ಲೂಜೇಪಿಗರಿಗೆ ಧಗ ಧಗ ಅಂತ ಕೆಳಗೆ ಉರಿತಿದೇ ಅನಿಸುತ್ತದೆ. ಬಿಜೆಪಿಯಲ್ಲಿ ಸಿದ್ದರಾಮಯ್ಯ ಅಥವಾ ಸಚಿವ ಡಿ.ಕೆ.ಶಿವಕುಮಾರ್ ಅಂಥವರು ಒಬ್ರು ಇದ್ದಿದ್ರೆ ಮೈತ್ರಿ ಸರ್ಕಾರ ಯಾವಾಗಲೋ ಬಿದ್ದೋಗಿರೋದು. ಆದರೆ ಏನ್ ಮಾಡೋದು ಬಿಜೆಪಿಯಲ್ಲಿ ಇರೋರೆಲ್ಲಾ ನಾಲಾಯಕ್‍ಗಳು. ಅದಕ್ಕೆ ಏನು ಕಿಸಿಯೋಕೆ ಆಗುತ್ತಿಲ್ಲ ಎಂದು ಶಿವು ಕೆ. ಟ್ವೀಟ್ ಮಾಡಿದ್ದಾರೆ.

https://twitter.com/NaveenMandian/status/1086271428591116288

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *