ಟಿಪ್ಪು ಸುಲ್ತಾನ್ ವಿಚಾರವಾಗಿ ಬಿಜೆಪಿಯಿಂದ ದ್ವಂದ್ವ ನಿಲುವು..!

Public TV
2 Min Read

ಬೆಂಗಳೂರು: ಟಿಪ್ಪು ಸುಲ್ತಾನ್ ವಿಚಾರವಾಗಿ ಬಿಜೆಪಿಯಿಂದ ದ್ವಂದ್ವ ನಿಲುವು ವ್ಯಕ್ತವಾಗುತ್ತಿದ್ದು, ಈ ಹಿಂದೆ ಟಿಪ್ಪು ಸುಲ್ತಾನ್ ಅಂದ್ರೆ ಪ್ರೀತಿ ಇದ್ದ ಬಿಜೆಪಿ ಈಗ ವಿರೋಧಿಸುವುದು ಯಾಕೆ ಅನ್ನೋ ಪ್ರಶ್ನೆಯೊಂದು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.

ಹೌದು. ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಲು ಬಿಜೆಪಿಗೆ ಟಿಪ್ಪು ಹೆಸರು ಬೇಕಾಗಿತ್ತು. ಹೀಗಾಗಿ ಬಿಬಿಎಂಪಿಯಲ್ಲಿ ತಮ್ಮ ಆಡಳಿತಾವಧಿಯಲ್ಲಿ ಬಿಜೆಪಿ ಕಾರ್ಪೋರೇಟರ್ ಗಳ ಟಿಪ್ಪು ಪ್ರೇಮ ಪ್ರದರ್ಶನವಾಗಿತ್ತು. ಬಿಜೆಪಿ ಮೇಯರ್ ಶಾಂತಕುಮಾರಿ ಆಡಳಿತದ ಅವಧಿಯಲ್ಲಿ ರಸ್ತೆಗೆ ಟಿಪ್ಪು ಹೆಸರು ನಾಮಕರಣ ಮಾಡಲಾಗಿತ್ತು.

ಕಲಾಸಿಪಾಳ್ಯ ಬಸ್ ನಿಲ್ದಾಣ ರಸ್ತೆಯಿಂದ ಚಾಮರಾಜಪೇಟೆಯ ಮೈಸೂರು ರಸ್ತೆಗೆ ಟಿಪ್ಪು ಸುಲ್ತಾನ್ ಅರಮನೆ ಹೆಸರು ಇಡಲಾಗಿತ್ತು. ಟಿಪ್ಪುವಿಗಾಗಿ ಹಿಂದೂ ದೇವರು ವೆಂಕಟರಮಣ ಸ್ವಾಮಿ, ಮಹದೇಶ್ವರ ಸ್ವಾಮಿಯ ಹೆಸರೂ ಬೇಡ ಅಂದಿದ್ದರು. ಅಂದಿನ ಆಡಳಿತ ಪಕ್ಷದ ನಾಯಕ ಎನ್ ಆರ್ ರಮೇಶ್ ರಸ್ತೆಗೆ ಟಿಪ್ಪು ಹೆಸರಿಡಲು ವಿಷಯ ಮಂಡಿಸಿದ್ದರು. ಈಗಿನ ವಿರೋಧ ಪಕ್ಷದ ನಾಯಕರಾದ ಪದ್ಮನಾಭ ರೆಡ್ಡಿ ಅವರು ಅದನ್ನು ಅನುಮೋದಿಸಿದ್ದರು. ಆದ್ರೆ ಈಗ ಇವರೇ ಟಿಪ್ಪು ಪ್ರತಿಭಟನೆಗೆ ಜೈ ಅಂತ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ವಿಚಾರದಲ್ಲಿ ಬಿಜೆಪಿಯ ಈ ಇಬ್ಬಗೆ ನಡೆ ಏಕೆ ಅನ್ನೋ ಪ್ರಶ್ನೆ ಕಾಡುತ್ತಿದೆ.

ಬಾಪೂಜಿನಗರ ಕಾರ್ಪೋರೆಟರ್ ರಸ್ತೆಗೆ ಮುಸ್ಲಿಂ ಹೆಸರು ಪ್ರಸ್ತಾಪಿಸಿದಾಗ ವಿರೋಧ ವ್ಯಕ್ತವಾಗಿತ್ತು. ವಾರ್ಡ್ ನಂಬರ್ 144 ಮುಜಾಹುದ್ದೀನ್ ಪಾಷ ಎ ಮನವಿ ಮೇರೆಗೆ ಅಂದು ಟಿಪ್ಪು ಬೇಕಿತ್ತು. ಶಾಮಣ್ಣ ಗಾರ್ಡನ್ ರಸ್ತೆಗೆ ಮುಸ್ಮಿಂ ಹೆಸರು ಇಡಲು ಪ್ರಸ್ತಾಪಿಸಿ ವಿವಾದ ಮೈಮೇಲೆಳೆದುಕೊಂಡಿದ್ರು.

ಒಟ್ಟಿನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ್ರೆ ಪ್ರತಿಭಟನೆ, ರಕ್ತಪಾತ, ಮುಷ್ಕರ ಬೆದರಿಕೆ ಹಾಕುತ್ತಿರೋ ಬಿಜೆಪಿ ನಾಯಕರು 2016ರಲ್ಲಿ ಟಿಪ್ಪುವನ್ನ ಒಪ್ಪಿಕೊಂಡಿದ್ದರು. ಆದ್ರೆ ಇಂದು ಇವತ್ತು ರಾಜಕೀಯ ಮಾಡಲೆಂದೇ ಟಿಪ್ಪು ಜಯಂತಿ ವಿರೋಧಿಸುತ್ತಿದೆಯಾ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಎದ್ದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *