ಬಿಜೆಪಿಯವರು ಅಧ್ಯಯನ ಮಾಡುವ ಬದಲು ಕೇಂದ್ರದಿಂದ ಬರ ಪರಿಹಾರ ಕೊಡಿಸಲಿ: ಪರಮೇಶ್ವರ್

By
2 Min Read

ಬೆಂಗಳೂರು: ಬಿಜೆಪಿಯವರು (BJP) ಬರ ಅಧ್ಯಯನ ಮಾಡುವ ಬದಲು ಕೇಂದ್ರದಿಂದ ಬರ (Drought) ಪರಿಹಾರ ಕೊಡಿಸಲಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Paramaeshwar) ಬಿಜೆಪಿ ಬರ ಅಧ್ಯಯನಕ್ಕೆ ಕಿಡಿಕಾರಿದ್ದಾರೆ.

ಬಿಜೆಪಿಯಿಂದ ಬರ ಅಧ್ಯಯನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಬರ ಅಧ್ಯಯನ ಮಾಡಲಿ. ಆದರೆ ಇಷ್ಟು ದಿನ ಏನು ಮಾಡುತ್ತಿದ್ದರು? ಬರ ಶುರುವಾಗಿ 3 ತಿಂಗಳು ಆಯಿತು. ಮಳೆ ನಿಂತು 3 ತಿಂಗಳು ಆಯಿತು. ನಾವು ಈಗಾಗಲೇ 200ಕ್ಕೂ ಹೆಚ್ಚು ತಾಲೂಕು ಬರ ಎಂದು ಘೋಷಣೆ ಮಾಡಿದ್ದೇವೆ. 37,000 ಕೋಟಿ ರೂ. ನಷ್ಟ ಆಗಿದೆ. ಕೇಂದ್ರಕ್ಕೆ 17,000 ಕೋಟಿ ರೂ. ಬರ ಪರಿಹಾರ ಕೊಡಿ ಎಂದು ಮನವಿ ಮಾಡಿದ್ದೇವೆ. ಈವರೆಗೂ ಒಂದೇ ಒಂದು ರೂಪಾಯಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಈಗ ಬರ ಅಧ್ಯಯನ ಮಾಡಿ ಏನು ಮಾಡುತ್ತಾರೆ? ಬಿಜೆಪಿ ಅವರು ಕೇಂದ್ರಕ್ಕೆ ಹೇಳಿ ಹಣ ಕೊಡಿಸಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜಕೀಯ ಪ್ರೇರಿತವಾಗಿ ನೀಡಿರುವ ನೋಟಿಸ್‌ ಹಿಂಪಡೆಯಿರಿ: EDಗೆ ಕೇಜ್ರಿವಾಲ್‌ ಪ್ರತಿಕ್ರಿಯೆ

ಕೇಂದ್ರದಿಂದ ಬರ ಅಧ್ಯಯನಕ್ಕೆ ತಂಡ ಬಂದಿತ್ತು. ಅವರು ಕಾಟಾಚಾರಕ್ಕೆ ಅಧ್ಯಯನ ಮಾಡಿಕೊಂಡು ಹೋಗಿದ್ದಾರೆ. ಕೇಂದ್ರದ ತಂಡ ಎಲ್ಲಾ ಹಸಿರು ಇದೆ ಎಂದು ಬರೆದುಕೊಂಡು ಹೋಗಿದೆ. ಅವರು ಬರೋಕೆ ಎರಡು ದಿನ ಮುಂಚೆ ಮಳೆ ಬಂದಿತ್ತು. ಅಲ್ಲಿ ಹಸಿರು ಕಾಣಿಸಿದೆ. ಅಷ್ಟಕ್ಕೆ ಬೆಳೆ ಆಗಿದೆ ಅಂತ ಅರ್ಥನಾ? ಇದೆಲ್ಲವನ್ನೂ ಅವರು ಕೂಲಂಕುಷವಾಗಿ ಚರ್ಚೆ ಮಾಡಿ, ಸಚಿವರು, ಅಧಿಕಾರಿಗಳ ಜೊತೆ ಕೂತು ಮಾತನಾಡಬೇಕಿತ್ತು. ನಿಜವಾಗಲೂ ನಮಗೆ ಹಣ ಕೊಡೋ ಆಸಕ್ತಿ ಇದ್ದಿದ್ದರೆ ಕೇಂದ್ರದವರು ಇದೆಲ್ಲ ಮಾಡುತ್ತಿದ್ದರು. ಅವರು ಏನು ಮಾಡಿಲ್ಲ. ಕಾಟಾಚಾರಕ್ಕೆ ಮಾಡಿದ್ದಾರೆ ಎಂದು ಕೇಂದ್ರದ ಬರ ಅಧ್ಯಯನ ತಂಡದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಿದ್ದು-ಡಿಕೆ ಇಬ್ಬರೇ ನಿರ್ಧಾರ ಮಾಡೋದು ಬೇಡ, ಸಮಿತಿ ರಚಿಸಿ; ಹಿರಿಯ ಪ್ರಭಾವಿ ನಾಯಕರು ಬಿಗಿ ಪಟ್ಟು

17,000 ಕೋಟಿ ರೂ. ಪರಿಹಾರ ಕೇಳಿದ್ದೇವೆ. ಒಂದು ರೂಪಾಯಿ ಕೊಟ್ಟಿಲ್ಲ. ಎನ್‌ಡಿಆರ್‌ಎಫ್‌ನಲ್ಲಿ ಅಡ್ವಾನ್ಸ್ ಅಂತ ಹಣ ಕೊಡಬೇಕು. ಅಲ್ಲದೇ ವಿಶೇಷ ಅನುದಾನ ಆದರೂ ಕೊಡಬೇಕು. ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ವಿಶೇಷ ಅನುದಾನ ಕೊಟ್ಟಿದ್ದಾರೆ. ಅದರಂತೆ ರಾಜ್ಯದ ಹಿತದೃಷ್ಟಿಯಿಂದ ವಿಶೇಷ ಅನುದಾನ ಕೇಂದ್ರ ಸರ್ಕಾರ ಕೊಡಬೇಕು ಎಂದರು. ಇದನ್ನೂ ಓದಿ: ಬಜರಂಗ ಬಲಿ ಗದೆಯೇ ತಾಲಿಬಾನ್‍ಗಳಿಗೆ ಪರಿಹಾರ: ಯೋಗಿ ಆದಿತ್ಯನಾಥ್

ಬರ ಪರಿಹಾರಕ್ಕೆ ಕೇಂದ್ರಕ್ಕೆ ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೊಗುವ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ. ಅವಶ್ಯಕತೆ ಇದ್ದರೆ ಸರ್ವ ಪಕ್ಷ ನಿಯೋಗ ಅಥವಾ ನಮ್ಮ ಸಚಿವರ ನಿಯೋಗವೇ ಹೋಗುತ್ತೇವೆ. ಸಿಎಂ ಅವರು ಈ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಬೆಂಗಳೂರಲ್ಲಿ ಅನಧಿಕೃತ ಬೋರ್‌ವೆಲ್ ಕೊರೆದ್ರೆ ಕಂಪ್ಲೆಂಟ್

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್