ಬಿಹಾರ ಎಲೆಕ್ಷನ್‌ಗೆ ಕರ್ನಾಟಕದಲ್ಲಿ ವಸೂಲಿ – ಜಿಎಸ್‌ಟಿ ನೋಟಿಸ್‌ಗೆ ಕೇಸರಿ ಬಿಗ್ ಟ್ವಿಸ್ಟ್

Public TV
1 Min Read

ಬೆಂಗಳೂರು: ರಾಜ್ಯದ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಕೊಟ್ಟಿರೋ ಜಿಎಸ್‌ಟಿ ನೊಟೀಸ್‌ಗೆ ಬಿಜೆಪಿ (BJP) ಬಿಹಾರ ಎಲೆಕ್ಷನ್ (Bihar Election) ಲಿಂಕ್ ಕೊಟ್ಟಿದೆ.

ಬಿಹಾರ ಎಲೆಕ್ಷನ್‌ಗಾಗಿ ಹಣ ಸಂಗ್ರಹಕ್ಕೆ ಸುರ್ಜೇವಾಲಾ ರಾಜ್ಯಕ್ಕೆ ಬಂದಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಸರ್ಕಾರ ಹೂವು, ತರಕಾರಿ, ಟೀ ಅಂಗಡಿ, ಬೇಕರಿಗಳಿಗೆಲ್ಲಾ ನೋಟಿಸ್‌ ಕೊಟ್ಟು ಹಗಲು ದರೋಡೆ ಮಾಡ್ತಿದೆ ಅಂತ ಎಕ್ಸ್‌ನಲ್ಲಿ ಗಂಭೀರ ಆರೋಪ ಮಾಡಿದೆ. ಅಲ್ಲದೆ, ಸಹಾಯವಾಣಿಯನ್ನೂ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಅಬ್ದುಲ್ ಕಲಾಂ ಅರೆಸ್ಟ್‌

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B Y Vijayendra) ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲು ತೆರಿಗೆ ಇಲಾಖೆ ಮೂಲಕ ನೋಟಿಸ್ ಕೊಡ್ತಿದ್ದಾರೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಈ ಬಗ್ಗೆ ಚರ್ಚೆ ಆಗ್ಬೇಕು. ಹಣಕಾಸು ಸಚಿವರು ಉತ್ತರ ಕೊಡ್ತಾರೆ ಅಂತ ಎಂದಿದ್ದಾರೆ. ಆದರೆ, ನೋಟಿಸ್ ಕೊಡೋದೇ ಕೇಂದ್ರ ಸರ್ಕಾರ ಅಂತ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ

ಈ ಮಧ್ಯೆ, ವ್ಯಾಪಾರಿಗಳಿಗೆ ಜಿಎಸ್‌ಟಿ ಜಂಜಾಟ ಮುಂದುವರಿದಿದೆ. ಯುಪಿಐ ಬೇಡ, ಕ್ಯಾಶ್ ಕೊಡಿ ಅನ್ನೋ ವ್ಯಾಪಾರಿಗಳ ಸಂಖ್ಯೆ ದ್ವಿಗುಣ ಆಗ್ತಿದೆ. ಆದರೆ, ಗ್ರಾಹಕರು ಕ್ಯಾಶ್ ಇಲ್ಲ ಅಂತ ಪರದಾಡ್ತಿದ್ದಾರೆ.

Share This Article