ಲೋಕಸಭೆ ಎಲೆಕ್ಷನ್‍ಗೆ ಹೊಸ ಟೀಂ ಕಟ್ಟಿದ ಬಿಜೆಪಿ – ಕಮಲಕ್ಕೆ ರವಿ ಸಾರಥಿ?

Public TV
2 Min Read

ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election) ಬಿಜೆಪಿ (BJP) ಭರ್ಜರಿ ತಯಾರಿ ನಡೆಸುತ್ತಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ಹೊಸ ತಂಡ ರಚಿಸಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ. ರವಿಗೆ (CT Ravi) ಕೊಕ್ ಕೊಡಲಾಗಿದೆ.

ಹೊಸ ಪದಾಧಿಕಾರಿಗಳ ಪಟ್ಟಿಯಲ್ಲಿ ಕರ್ನಾಟಕದ ನಾಯಕರಿಗೆ (Karnataka Leaders) ಹೈಕಮಾಂಡ್ ಮಾನ್ಯತೆ ನೀಡಿಲ್ಲ. ಸಿ.ಟಿ ರವಿ ಬಿಡುಗಡೆ ಬಳಿಕ ಹೊಸ ನಾಯಕರನ್ನು ಹೈಕಮಾಂಡ್ ಆಯ್ಕೆ ಮಾಡಿಲ್ಲ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santosh) ಹೊರತುಪಡಿಸಿ, ಬೇರೊಬ್ಬರಿಗೆ ದೆಹಲಿ ಹೈಕಮಾಂಡ್ ಮಣೆ ಹಾಕಿಲ್ಲ.

ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್‌ ಕುಮಾರ್‌ ಕಟೀಲ್ (Nalin Kumar kateel) ಬದಲಿಗೆ ಸಿ.ಟಿ. ರವಿ ಸಾರಥ್ಯ ವಹಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ. ಹಾಲಿ 25 ಸಂಸದರನ್ನು ಹೊಂದಿರುವ ಬಿಜೆಪಿಗೆ ಈ ಬಾರಿಯೂ ಹೆಚ್ಚಿನ ಸ್ಥಾನ ಗೆಲ್ಲಿಸುವ ಅವಶ್ಯಕತೆ ಇದ್ದು, ಆಗಸ್ಟ್ ಮೊದಲ ವಾರದಲ್ಲಿ ಸಿಟಿ ರವಿಯನ್ನು ಹೊಸ ಸಾರಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ.

ಕರ್ನಾಟಕದ ಮೂರು ಮುಖ್ಯ ಹುದ್ದೆಗಳ ಘೋಷಣೆಯ ನಿರೀಕ್ಷೆಯೂ ಇದ್ದು, ಕಾಂಗ್ರೆಸ್ ಗ್ಯಾರಂಟಿ ಅಸ್ತ್ರಕ್ಕೆ ಹಿಂದುತ್ವ ಅಸ್ತ್ರ ಪ್ರಯೋಗಿಸಲು ಹೈಕಮಾಂಡ್ ಭಾರೀ ಲೆಕ್ಕಾಚಾರ ಮಾಡುತ್ತಿರುವ ವಿಚಾರ ತಿಳಿದು ಬಂದಿದೆ.  ಇದನ್ನೂ ಓದಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್‌ಗೆ ಬಿಜೆಪಿ ಉಪಾಧ್ಯಕ್ಷ ಪಟ್ಟ

ಜಾತಿ ಲೆಕ್ಕಾಚಾರದ ಅಸ್ತ್ರ
ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ವಿಪಕ್ಷ ನಾಯಕ ಸ್ಥಾನದಂತಹ ಪ್ರಮುಖ 3 ಹುದ್ದೆಗಳನ್ನು ಜಾತಿ ಸಮಿಕರಣ ಮಾಡಿ ಆಯ್ಕೆ ಮಾಡಲು ಹೈಕಮಾಂಡ್‌ ಮುಂದಾಗಿದೆ. ಸಿದ್ದರಾಮಯ್ಯ ಎದುರಿಸಲು ಒಬಿಸಿ + ದಲಿತ + ಲಿಂಗಾಯತ ಅಸ್ತ್ರ ಪ್ರಯೋಗ, ಡಿಕೆ ಶಿವಕುಮಾರ್‌ ಎದುರಿಸಲು ಒಕ್ಕಲಿಗ + ಲಿಂಗಾಯತ ಅಸ್ತ್ರ ಪ್ರಯೋಗವಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಗ್ಯಾರಂಟಿಗಳನ್ನ ಎದುರಿಸಲು ಹಿಂದುತ್ವ ಫೈರ್ ಬ್ರ್ಯಾಂಡ್ ಅಸ್ತ್ರ ಬಳಕೆಯಾಗುವ ಸಾಧ್ಯತೆಯಿದೆ.  ಇದನ್ನೂ ಓದಿ: ಸುಧಾಕರ್ ನಮ್ಮೂರ ಹುಡ್ಗ, ಬೇರೆ ಕ್ಷೇತ್ರ ನೋಡಿಕೊಂಡ್ರೆ ಮುಂದಿನ ಸಲ ವಿಧಾನಸೌಧಕ್ಕೆ ಬರ್ತಾರೆ: ಪ್ರದೀಪ್ ಈಶ್ವರ್ ಟಾಂಗ್

ಒಕ್ಕಲಿಗ ಸಮುದಾಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಯಿದ್ದು, ಸಿಟಿ ರವಿ, ಶೋಭಾ ಕರಂದ್ಲಾಜೆ , ಅಶ್ವಥ್ ನಾರಾಯಣ್ ಮಧ್ಯೆ ಸ್ಪರ್ಧೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಲಿಂಗಾಯತ, ಹಿಂದುಳಿದ, ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದರೆ ಲಿಂಗಾಯತ ಸಮುದಾಯಕ್ಕೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುವ ಸಾಧ್ಯತೆಯಿದೆ.

 

ವಿಧಾನಸಭೆ ವಿಪಕ್ಷ ನಾಯಕನ ರೇಸ್‍ನಲ್ಲಿ ಬೊಮ್ಮಾಯಿ ಹಾಗೂ ಯತ್ನಾಳ್ ಇದ್ದರೆ ಮೇಲ್ಮನೆ ವಿಪಕ್ಷ ಸ್ಥಾನಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಅಥವಾ ರವಿಕುಮಾರ್ ಇಬ್ಬರಲ್ಲಿ ಒಬ್ಬರು ಆಯ್ಕೆಯಾಗುವ ಸಾಧ್ಯತೆಯಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್