ಗೂಂಡಾಗಿರಿ ಕಾಂಗ್ರೆಸ್ ನಾಯಕರಿಗೆ ವಂಶಪಾರಂಪರ್ಯವಾಗಿ ಬಂದ ಉಡುಗೊರೆ- ಬಿಜೆಪಿ

Public TV
2 Min Read

ಬೆಂಗಳೂರು: ಗೂಂಡಾಗಿರಿ ಎಂಬುದು ಕಾಂಗ್ರೆಸ್ ನಾಯಕರಿಗೆ ವಂಶ ಪಾರಂಪರ್ಯವಾಗಿ ಬಂದ ಉಡುಗೊರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ಸರಣಿ ಟ್ವೀಟ್ ಮೂಲಕ ಬಿಜೆಪಿ ಕಿಡಿಕಾರಿದೆ.

ಬೆಂಗಳೂರಿನಲ್ಲಿ ನಗರ ಯುವ ಕಾಂಗ್ರೆಸ್‌ ಮಾಜಿ ಕಾರ್ಯದರ್ಶಿ ಕುಡಿದ ಅಮಲಿನಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಿಸಿದ ಬಿಜೆಪಿ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದೆ.

dkshivakumar

ಟ್ವೀಟ್‍ನಲ್ಲಿ ಏನಿದೆ?:
ಗೂಂಡಾಗಿರಿ ಎಂಬುದು ಕಾಂಗ್ರೆಸ್ ನಾಯಕರಿಗೆ ವಂಶ ಪಾರಂಪರ್ಯವಾಗಿ ಬಂದ ಉಡುಗೊರೆ. ಇಂದಿರಾ ಗಾಂಧಿ ಕಾಲದಿಂದಲೇ ಗೂಂಡಾರಾಜ್ ವ್ಯವಸ್ಥೆ ಅಸ್ತಿತ್ವದಲ್ಲಿ ಇತ್ತು. ಅದೀಗ ಕರ್ನಾಟಕದಲ್ಲಿ ಮುಂದುವರಿಯುತ್ತಿದೆ.

ದೆಹಲಿಯಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಬಂಧನಕ್ಕೆ ಒಳಗಾದ ಶಾಸಕ, ಸಂಸದರಿಗೂ ಗೂಂಡಾಗಿರಿಯ ಘನ ಇತಿಹಾಸ ಇದೆ. ಒಬ್ಬರು ಕನಕಪುರದ ಅಘೋಷಿತ ರೌಡಿ, ಇನ್ನೊಬ್ಬರು ಗೂಂಡಾರಾಯರು. ಯತಾರಾಜಾ ತಥಾ ಪ್ರಜಾ ಎಂಬುದು ಕಾಂಗ್ರೆಸ್ಸಿಗರಿಗೆ ಅನ್ವಯವಾಗುತ್ತದೆ. ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾದರೆ, ಗ್ಯಾಸ್ ಕಾಲೇಜಿನಲ್ಲಿ ಬ್ಲೇಡು, ಚಾಕು ಚೂರಿ ಹಿಡಿದು ಗೂಂಡಾಗಿರಿ ನಡೆಸುತ್ತಿದ್ದವರು ಮೇಲ್ಮನೆಯ ವಿಪಕ್ಷ ನಾಯಕ! ಇವರು ಜನರ ಪ್ರೀತಿಯಿಂದ ನಾಯಕರಾಗಿಲ್ಲ, ಜನರಿಗೆ ಭೀತಿ ಹುಟ್ಟಿಸಿ ನಾಯಕರಾಗಿದ್ದಾರೆ.

ಪಬ್‍ನಲ್ಲಿ ಸಿಕ್ಕ ಸಿಕ್ಕವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡುತ್ತಿದ್ದ ರೌಡಿ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ. ಗೊರಿಲ್ಲಾ ಶ್ರೀನಿವಾಸ ರಾಷ್ಟ್ರೀಯ ಅಧ್ಯಕ್ಷ. ಎಲ್ಲರೂ ಗೂಂಡಾಗಿರಿಯ ತುಣುಕುಗಳೇ. ಕೊತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತದೆ. ಬೀದಿ ರೌಡಿಗಳು, ಬಿಟ್ ಕಾಯಿನ್ ಆಸಾಮಿಗಳಿಗೆ ಮುಂಚೂಣಿ ಘಟಕದ ನಾಯಕತ್ವ ನೀಡಲಾಗಿದೆ. ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು ಎಂದು ಟೀಕಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಆತ್ಮಹತ್ಯೆ

ಕನಕಪುರದ ಬಂಡೆಮಕ್ಕಳ ಮೇಲಿರುವ ಐಪಿಸಿ ಸೆಕ್ಷನ್ ಬಗ್ಗೆ ಬರೆದರೆ, ಪುಸ್ತಕವೇ ಬರೆಯಬಹುದು. ಇವರ ಹಾದಿಯನ್ನೇ ಯುವಾಧ್ಯಕ್ಷರು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಪದಾಧಿಕಾರಿಗಳ ಪಟ್ಟಿಯಲ್ಲಿರುವವರಲ್ಲೂ ಐಪಿಸಿ ಸೆಕ್ಷನ್ ಬೋರ್ಡ್ ಹಾಕಿಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ! ಕೈ ನಾಯಕರು ಶ್ರಮಿಕರಿಗೆ, ದಲಿತರಿಗೆ, ಮಹಿಳೆಯರಿಗೆ ಸಹಾಯ ಹಸ್ತ ಚಾಚುವುದಿಲ್ಲ. ಅವರದ್ದೇನಿದ್ದರೂ ಕೈ ಕೈ ಮಿಲಾಯಿಸುವುದಷ್ಟೇ! ಅಣ್ಣಂನಂತೆ ತಮ್ಮ, ನಾಯಕರಂತೆ ಕಾರ್ಯಕರ್ತರು. ಕನಕಪುರವಿರಲಿ, ಬೆಂಗಳೂರಿರಲಿ ಅಥವಾ ದೆಹಲಿ ಇರಲಿ ಗೂಂಡಾಗಿರಿ ಮಾಡುವುದೇ ಇವರ ಪ್ರವೃತ್ತಿ ಎಂದು ಕಿಡಿಕಾರಿದೆ. ಇದನ್ನೂ ಓದಿ: ಅಣ್ಣನ ಹೆಸರಿಗೆ ಆಸ್ತಿ ಮಾಡಿಸ್ತಾನೆ ಅಂತ JDS ಕಾರ್ಯಕರ್ತನ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ

Live Tv

Share This Article
Leave a Comment

Leave a Reply

Your email address will not be published. Required fields are marked *