ರಾಹುಲ್ ಗಾಂಧಿಗೆ ರಾಹುಕಾಲ ಶುರು, ಇನ್ಮುಂದೆ ಸಿದ್ದರಾಮಯ್ಯ ಹೇಳಿದಂತೆ ಕೇಳ್ಬೇಕು: ಅಶೋಕ್‌

Public TV
2 Min Read

ಬೆಂಗಳೂರು: ವೋಟ್ ಚೋರಿ (Vote Theft) ಕಾಂಗ್ರೆಸ್‌ನವರ ಬ್ರ್ಯಾಂಡ್‌ ಆಗಿತ್ತು, ಆದರೆ ಜನ ಈ ಡೈಲಾಗ್‌ನ್ನು ನಂಬಲ್ಲ, ಇನ್ಮುಂದೆ ರಾಹುಲ್ ಗಾಂಧಿಗೆ ರಾಹುಕಾಲ ಶುರು, ಹೀಗಾಗಿ ಸಿದ್ದರಾಮಯ್ಯ ಹೇಳಿದಂತೆ ಕೇಳಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಲೇವಡಿ ಮಾಡಿದ್ದಾರೆ.

ಟನಲ್ ರೋಡ್ ವಿರೋಧಿಸಿ ಸ್ಯಾಂಕಿ ಟ್ಯಾಂಕ್ ಪಾರ್ಕ್‌ನಲ್ಲಿ ಬಿಜೆಪಿ (BJP) ನಾಯಕರು ಅಭಿಯಾನ ನಡೆಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೋಟ್ ಚೋರಿ ಕಾಂಗ್ರೆಸ್‌ನ (Congress) ಬ್ರ‍್ಯಾಂಡ್ ಆಗಿತ್ತು. ಆದರೆ ಈಗ ಆ ಬ್ರ‍್ಯಾಂಡ್ ಫೇಲ್ ಆಗಿದೆ. ವೋಟ್ ಚೋರಿ ಬೋಗಸ್ ಅಂತ ಬಿಹಾರದ ಜನತೆ ತಿರಸ್ಕರಿಸಿದ್ದಾರೆ. ಸೋತ ಮೇಲೆ ಮತಚೋರಿ ಅಂತ ಕಾಂಗ್ರೆಸ್ ನಾಯಕರು ಡೈಲಾಗ್ ಹೊಡೆಯುತ್ತಾರೆ. ಈಗ ಈ ಡೈಲಾಗ್ ಅನ್ನು ಜನ ನಂಬಲ್ಲ. ಇನ್ಮುಂದೆ ರಾಹುಲ್ ಗಾಂಧಿಗೆ ರಾಹುಕಾಲ ಶುರುವಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಫರಿದಾಬಾದ್‌ನಲ್ಲಿ ಜಪ್ತಿ ಮಾಡಿದ್ದ ಸ್ಫೋಟಕ ಶ್ರೀನಗರ ಠಾಣೆಯಲ್ಲಿ ಸ್ಫೋಟ – ಇದು ಆಕಸ್ಮಿಕ ಘಟನೆ; ಗೃಹಸಚಿವಾಲಯ, ಡಿಜಿಪಿ ಸ್ಪಷ್ಟನೆ

ಬಿಹಾರ ಫಲಿತಾಂಶದಿಂದ ಕಾಂಗ್ರೆಸ್ ಹೈಕಮಾಂಡ್ ಮಂಕಾಗಿದೆ. ಆದರೆ ಇತ್ತ ಬಿಹಾರ ಫಲಿತಾಂಶದಿಂದ ಸಿದ್ದರಾಮಯ್ಯ ಸ್ಟ್ರಾಂಗ್ ಆಗಿದ್ದಾರೆ. ಇಷ್ಟು ದಿನ ರಾಹುಲ್ ಗಾಂಧಿ ಮಾತನ್ನು ಸಿದ್ದರಾಮಯ್ಯ ಕೇಳುತ್ತಿದ್ದರು. ಈಗ ಸಿದ್ದರಾಮಯ್ಯ ಮಾತನ್ನು ರಾಹುಲ್ ಗಾಂಧಿ ಕೇಳಬೇಕು. ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ ಹಾವಾಡಿಗರ ರೀತಿ ಆಡಿಸ್ತಾರೆ. ಆದರೆ ಈ ಫಲಿತಾಂಶ ಕಾಂಗ್ರೆಸ್ ಹೈಕಮಾಂಡ್‌ಗೆ ಶಾಕ್ ಕೊಟ್ಟಿದೆ. ರಾಹುಲ್ ಗಾಂಧಿಗೆ ರಾಹುಕಾಲ ಶುರುವಾಗಿದೆ, ಸಿದ್ದರಾಮಯ್ಯಗೆ ಶುಕ್ರದೆಸೆ ಶುರುವಾಗಿದೆ. ಅದಲ್ಲದೇ ಸಿದ್ದರಾಮಯ್ಯಗೆ ಡಿಕೆಶಿ ಮನೆಗೆ ಹೋಗುವ ಕಾಲ ಬಂದಿದೆ. ಆದರೆ ರಾಜ್ಯದಲ್ಲಿ ಡಿಕೆಶಿ ಅಂದುಕೊಂಡ ಬದಲಾವಣೆ ಆಗಲ್ಲ ಎಂದಿದ್ದಾರೆ.

ಕಾಂಗ್ರೆಸ್‌ಗೆ ರಾಜ್ಯದಲ್ಲೂ ಎರಡೇ ವರ್ಷ ಇರೋದು. ಅಲ್ಲೀವರೆಗೂ ಏನೇನು ಮಾಡ್ತೀರೋ ಮಾಡಿ. ವೋಟ್ ಚೋರಿ ಆರೋಪಕ್ಕೆ ಜನರಿಗೆ ಕ್ಷಮೆ ಕೇಳಲಿ ಎಂದು ತಿಳಿಸಿದ್ದಾರೆ. ಅಭಿಯಾನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಅಶ್ವಥ್ ನಾರಾಯಣ, ಕೆ ಗೋಪಾಲಯ್ಯ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.ಇದನ್ನೂ ಓದಿ: ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ಆರೋಪ – ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಬಂಧನ

Share This Article