ಬಿಜೆಪಿ ದೇಶದ ರಾಜಕೀಯವನ್ನು ಕಲುಷಿತಗೊಳಿಸುತ್ತಿದೆ: ಅಖಿಲೇಶ್ ಯಾದವ್

Public TV
1 Min Read

ಲಕ್ನೋ: ಆಡಳಿತ ಸರ್ಕಾರ ಬಿಜೆಪಿ ದೇಶದ ರಾಜಕೀಯವನ್ನು ಕಲುಷಿತಗೊಳಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ನರೇಂದ್ರ ಮೋದಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅಲೆ ಇದೆ ಎಂದು ಪ್ರತಿಪಕ್ಷದ ನಾಯಕರು ವಾದಿಸುತ್ತಾರೆ. ಆದರೆ ಇದು ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಪದೇ, ಪದೇ ಸುಳ್ಳು ಹೇಳುವ ಮೂಲಕ ಸುಳ್ಳನ್ನೇ ಸತ್ಯ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಇದು ನದಿಗಳನ್ನು ಮಾತ್ರವಲ್ಲದೇ ದೇಶದ ರಾಜಕೀಯವನ್ನೂ ಕಲುಷಿತಗೊಳಿಸಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ

ಈಗ ಬಿಜೆಪಿ ವಿರುದ್ಧದ ಅಲೆ ಎದ್ದಿದೆ. ಬಿಜೆಪಿ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದಾರೆ ಮತ್ತು ಅದನ್ನು ತೊಡೆದು ಹಾಕಲು ಮತ್ತು ಯುಪಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಅವಕಾಶ ನೀಡಲು ಕಾಯುತ್ತಿದ್ದಾರೆ. ವಿಧಾನಸಭಾ ಚುನಾವಣೆಯು ರಾಜ್ಯದ ಭವಿಷ್ಯವನ್ನು ಮಾತ್ರವಲ್ಲದೇ ಕೇಂದ್ರ ಸರ್ಕಾರದ ಭವಿಷ್ಯವನ್ನೂ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕರ ಮನೆಯ ಮೇಲೆ ಐಟಿ ದಾಳಿ ವಿಚಾರ ಕುರಿತಂತೆ ಮಾತನಾಡಿದ ಅವರು, ಸೋಲಿನ ಭಯದಿಂದ ಬಿಜೆಪಿ ಈಗ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕಲು ಮುಂದಾಗಿದೆ. ಆದರೆ ಈ ವಿಚಾರ ಬಿಜೆಪಿ ವಿರುದ್ಧ ಸಾರ್ವಜನಿಕ ಕೋಪವನ್ನು ಹೆಚ್ಚಿಸಿದೆ. ಜನರು ಇನ್ನು ಮುಂದೆ ಪ್ರಜಾಪ್ರಭುತ್ವ ವಿರೋಧಿ, ಜನ ವಿರೋಧಿ ಸರ್ಕಾರವನ್ನು ದೀರ್ಘಕಾಲ ಅಧಿಕಾರದಲ್ಲಿ ನೋಡಲು ಬಯಸುವುದಿಲ್ಲ ಎಂದಿದ್ದಾರೆ.  ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

ಸಮಾಜವಾದಿ ಪಕ್ಷವು ಸಮಾಜವಾದಿ ವಿಜಯ ಯಾತ್ರೆಯನ್ನು ಪ್ರಾರಂಭಿಸಿದೆ ಮತ್ತು ಬಿಜೆಪಿಯು ಆರು ರಥಯಾತ್ರೆಗಳ ಸರಣಿಯನ್ನು ಪ್ರಾರಂಭಿಸಿದೆ ಅದು ಈಗ ರಾಜ್ಯವನ್ನು ದಾಟುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *