ಕೆಲವು ಸಮುದಾಯಗಳ ಮೇಲೆ ಬಿಜೆಪಿಗೆ ಅಲರ್ಜಿ ಇದೆ: ಪ್ರಿಯಾಂಕ್ ಖರ್ಗೆ

By
3 Min Read

ಬೆಂಗಳೂರು: ಬಿಜೆಪಿ ಮೈಕ್ರೋ ಲೆವೆಲ್‍ನಲ್ಲಿ ರಾಜಕಾರಣ ಮಾಡುತ್ತಿದೆ. ಕೆಲವು ಸಮುದಾಯಗಳ ಮೇಲೆ ಬಿಜೆಪಿಗೆ ಅಲರ್ಜಿ ಇದೆ. ಧೈರ್ಯ ಇದ್ರೆ ಮುಸ್ಲಿಂ ರಾಷ್ಟ್ರಗಳ ಜೊತೆ ವ್ಯಾಪಾರ ಸಂಬಂಧ ಮಾಡಲ್ಲ ಅಂತ ಹೇಳಲಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ಮೈಕ್ರೋ ಲೆವೆಲ್‍ನಲ್ಲಿ ರಾಜಕಾರಣ ಮಾಡುತ್ತಿದೆ. ಕೆಲವು ಸಮುದಾಯಗಳ ಮೇಲೆ ಬಿಜೆಪಿಗೆ ಅಲರ್ಜಿ ಇದೆ. ಧೈರ್ಯ ಇದ್ರೆ ಮುಸ್ಲಿಂ ರಾಷ್ಟ್ರಗಳ ಜೊತೆ ವ್ಯಾಪಾರ ಸಂಬಂಧ ಮಾಡಲ್ಲ ಅಂತ ಹೇಳಲಿ. ಈ ಮಾತು ಹೇಳಲು ಬಿಜೆಪಿ ನಾಯಕರಿಗೆ ಧೈರ್ಯ ಇಲ್ಲ. ಹಾಗೆ ಮಾಡಿದ್ರೆ ದೇಶದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುತ್ತೆ. ಪೆಟ್ರೋಲ್, ಡೀಸೆಲ್ ಯಾವ ರಾಷ್ಟ್ರಗಳಿಂದ ತರಿಸೋದು? ಇಸ್ಲಾಮಿಕ್ ರಾಷ್ಟ್ರಗಳಿಂದ ತರಿಸೋದು. ರಾಜ್ಯ ಸರ್ಕಾರ ಕೇಂದ್ರದ ಗುಲಾಮ ಆಗಿದೆ. ಕೇಂದ್ರ ಹೇಳಿದಂತೆ ರಾಜ್ಯ ಕೇಳ್ತಿದೆ. ಯುವಕರನ್ನು ಗೋರಕ್ಷಕರಾಗಿ ಮಾಡ್ತಿದೆ ಸರ್ಕಾರ. ಕೇಸರಿ ಶಾಲು ಹಾಕಿ ಗೋರಕ್ಷಣೆ ಮಾಡಿ ಅಂತಿದೆ ಸರ್ಕಾರ. ಇದು ಉದ್ಯೋಗ ಸೃಷ್ಟಿನಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಸಿದ್ದರಾಮಯ್ಯ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ:ಡಿಕೆಶಿ

371ಜೆ ಅಡಿ ಕಳೆದ ಮೂರು ವರ್ಷಗಳಿಂದ ಉತ್ತರ ಕರ್ನಾಟಕಕ್ಕೆ ಉದ್ಯೋಗ ಕೊಟ್ಟಿಲ್ಲ. ನಮ್ಮ ಭಾಗದವರೇ ಮಂತ್ರಿ ಆಗಿದ್ದಾರೆ ಅವರಿಗೆ ಕನ್ನಡ ಸರಿಯಾಗಿ ಬರಲ್ಲ. ಹಿಂದಿ, ಇಂಗ್ಲೀಷ್ ನೆಟ್ಟಗೆ ಬರುತ್ತಿಲ್ಲ. ಎಂಥವರನ್ನು ಮಂತ್ರಿ ಮಾಡಿದೆ ನೋಡಿ ಈ ಬಿಜೆಪಿ ಸರ್ಕಾರ ಎಂದು ಸಚಿವ ಪ್ರಭು ಚೌಹಾಣ್ ವಿರುದ್ಧ ಗುಡುಗಿದ್ದಾರೆ.

ಬಿಜೆಪಿ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ಏಳು ವರ್ಷಗಳಲ್ಲಿ ಕಳೆದ ಅರವತ್ತು ವರ್ಷಕ್ಕಿಂತ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದೆ. ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ಹೆಚ್ಚು ಹುದ್ದೆಗಳು ಖಾಲಿ ಇವೆ. 3,643 ಹುದ್ದೆಗಳು ಉದ್ಯೋಗ ಇಲಾಖೆಯಲ್ಲಿ ಖಾಲಿ ಇವೆ. ಉದ್ಯೋಗ ಕೊಡುವ ಇಲಾಖೆಯಲ್ಲೇ 50% ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಉತ್ತರ ಕರ್ನಾಟಕದಲ್ಲಿ 2020-21ರಲ್ಲಿ 180 ಗಾರ್ಮೆಂಟ್ಸ್‌ಗಳು ಮುಚ್ಚಿ ಹೋಗಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರ ಮಾನಸಿಕ ಸ್ಥಿತಿ ನ್ಯಾಯಾಲಯದ ತೀರ್ಪನ್ನು ಸಹ ಗೌರವಿಸುತ್ತಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಬಜೆಟ್‍ನಲ್ಲಿ ಯೋಜನೆಗಳ ಅನುಷ್ಠಾನ ಬಗ್ಗೆ ಸ್ಪಷ್ಟತೆ ಇಲ್ಲ. ಬಜೆಟ್‍ನಲ್ಲಿ ಘೋಷಣೆಗಳು ಬಹಳ ಇವೆ. ಇದೊಂದು ಸ್ಲೋಗನ್ ಬಜೆಟ್. ಶಿಕ್ಷಣ, ಉದ್ಯೋಗ  ಸಬಲೀಕರಣಗಳಿಗೆ ಯಾವುದೇ ನಿಲುವು ತೆಗೆದುಕೊಂಡಿಲ್ಲ. ಇವುಗಳ ಜಾರಿಗೆ ಸರಿಯಾದ ನೀಲನಕ್ಷೆ ಕೊಟ್ಟಿಲ್ಲ. ಡಬಲ್ ಇಂಜಿನ್ ಸರ್ಕಾರದಲ್ಲಿ ಡಬಲ್ ದೋಖಾ ಆಗುತ್ತಿದೆ. 2020-21ರಲ್ಲಿ ಸರ್ಕಾರ ಯಾವುದೇ ಉದ್ಯೋಗ ಮೇಳ ನಡೆಸಿಲ್ಲ. 2021-22ರಲ್ಲಿ 54 ಉದ್ಯೋಗ ಮೇಳಗಳು ನಡೆಸಲಾಗಿದೆ. ಇದರಲ್ಲಿ 12,822 ಜನ ಆಯ್ಕೆ ಆಗಿದ್ದಾರೆ. ಇನ್ನೊಂದು ಉದ್ಯೋಗ ಮೇಳವನ್ನೂ ನಡೆಸಲಾಗಿದೆ. ಎರಡರಿಂದಲೂ 19,460 ಜನರು ಆಯ್ಕೆ ಆಗಿದ್ದಾರೆ. ಇವರ ಪೈಕಿ 1,883 ಜನ ಮಾತ್ರ ಸದ್ಯ ಉದ್ಯೋಗ ಮಾಡ್ತಿದ್ದಾರೆ. ಉಳಿದವರ ಬಗ್ಗೆ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ. ಇದು ಸರ್ಕಾರದ ಉದ್ಯೋಗ ಮೇಳಗಳ ಹಣೆ ಬರಹ ಎಂದು ಆರೋಪಿಸಿದ್ದಾರೆ.

ಪ್ರಧಾನಿಗಳ ಕೌಶಲ್ಯ ತರಬೇತಿ ಸ್ಕೀಂನಡಿ 101 ಜನರಿಗೆ ಮಾತ್ರ ತರಬೇತಿ ಕೊಟ್ಟಿದ್ದಾರೆ. ಇದಕ್ಕೆ ಅಚ್ಛೇ ದಿನ್ ಅಂತಾರಾ? ಸರ್ಕಾರ ಉದ್ಯೋಗ ಸೃಷ್ಟಿ ಮಾಡ್ತಿಲ್ಲ. ರಾಜ್ಯ ಸರ್ಕಾರ ನಡಿಯುತ್ತಿರುವುದು ಮೋದಿಯಿಂದ ಅಂತ ಬಿಜೆಪಿ ಶಾಸಕರು ಹೇಳ್ಕೊಳ್ತಾರೆ. ಏನ್ ಮಾಡಿದೆ ಮೋದಿ ಸರ್ಕಾರ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ – ಹೆಸರು ಬದಲಾಯಿಸುವಂತೆ ಕೊಲ್ಲೂರು ದೇವಾಲಯಕ್ಕೆ ಮನವಿ

ದೇಶಕ್ಕೆ ರೇಷ್ಮೆ ಪರಿಚಯಿಸಿದವರು ಯಾರು?. ಟಿಪ್ಪು ಸುಲ್ತಾನ್ ಪರಿಚಯ ಮಾಡಿದ್ದು ಅಂತ ಸುಡಲು ಆಗುತ್ತಾ?. ಲಾಲ್ ಬಾಗ್ ಹೈದರಾಲಿ ಮಾಡಿದ್ದು ಅಂತ ಸುಡಲು ಆಗುತ್ತಾ? ಇದರಿಂದ ಎಷ್ಟೋ ಜನಕ್ಕೆ ಉದ್ಯೋಗ ಸಿಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *