ಬೆಂಗಳೂರು: ಮತಾಂತರಕ್ಕೆ ನನ್ನ ಬೆಂಬಲ ಇಲ್ಲ. ಆದರೆ, ಮತಾಂತರ ಅವರ ಹಕ್ಕು. ಅದನ್ನು ತಪ್ಪಿಸಲು ಆಗಲ್ಲ. ಹಿಂದೂ ಧರ್ಮದಲ್ಲಿನ ಅಸಮಾನತೆಯಿಂದ ಕೆಲವರು ಮತಾಂತರ ಆಗ್ತಾರೆ ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ಸಂಚಲನ ಮೂಡಿಸಿದೆ. ಬಿಜೆಪಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇದೆ. ಆದರೂ ಮತಾಂತರ ಅವರ ಹಕ್ಕು ಎಂದು ಸಿಎಂ ಹೇಳಿದ್ದಾರೆ. ಸಿಎಂ ಹೇಳಿಕೆ ಕಾನೂನು ಬಾಹಿರ, ಸಂವಿಧಾನ ಬಾಹಿರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ, ಜಾತಿಗಣತಿ ವೇಳೆ 47 ಜಾತಿಗಳಿಗೆ ಮತಾಂತರ ಕಾಲಂನಲ್ಲಿ ಮತಾಂತರ ಒಳಗೊಂಡ ಜಾತಿ ಬರೆಸಲು ಅವಕಾಶಕ್ಕೂ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನೂ ಓದಿ: ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಅಸ್ತು – ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ಕ್ರಿಶ್ಚಿಯನ್‌ಗೆ ಮತಾಂತರವಾದ ಹಿಂದುಳಿದ ವರ್ಗದವರಿಗೆ ಪ್ರತ್ಯೇಕ ಕಾಲಂ ನೀಡಲಾಗಿದೆ. 47 ಜಾತಿ ಹೆಸರಿನ ಬಗ್ಗೆ ಆಕ್ಷೇಪ ಇದೆ. ಆಕ್ಷೇಪಾರ್ಹ ಜಾತಿಗಳ ಹೆಸರು ಕೈಬಿಟ್ಟು ಸಮೀಕ್ಷೆ ನಡೆಸಬೇಕೆಂದು ಒತ್ತಾಯ ಕೇಳಿಬಂದಿದೆ.
ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಮರಾಠ ಕ್ರಿಶ್ಚಿಯನ್, ಬಲಿಜ ಕ್ರಿಶ್ಚಿಯನ್. ಮಾದಾರ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬೋವಿ ಕ್ರಿಶ್ಚಿಯನ್ ಹೀಗೆ 47 ಜಾತಿಗಳಿಗೆ ಮತಾಂತರ ಹೊಂದಿದ ಜಾತಿಗಳ ಕಾಲಂ ಕೊಟ್ಟಿದ್ದಾರೆ. ಹಾಗಾಗಿ, ಮತಾಂತರ ಹೊಂದಿದ ಜಾತಿಗಳ ಕಾಲಂ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದು, ಇದೇ ಸೆ.16 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಮೂಲಕ ಮೊದಲ ಸಭೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಸ್ವಾಮೀಜಿಗಳು, ರಾಜಕೀಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಸಭೆ ಬಳಿಕ ರಾಜ್ಯದ 10 ಕಡೆಗಳಲ್ಲೂ ಸ್ವಾಮೀಜಿಗಳು, ರಾಜಕೀಯ, ಸಾಮಾಜಿಕ ನಾಯಕರ ಸಭೆಗೆ ಪ್ಲ್ಯಾನ್ ಮಾಡಿದ್ದಾರೆ.