ಜೈಲಿಗೆ ಹೋಗಿಬಂದವ್ರಿಂದ ನೀತಿ ಪಾಠ ಕೇಳುವ ದರ್ದು ಬಿಜೆಪಿಗಿಲ್ಲ: ಕಾರಜೋಳ

Public TV
1 Min Read

ಬಾಗಲಕೋಟೆ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು. ಬಹುತೇಕ 60 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದವರು ಆಡಳಿತ ಮಾಡಿದರು. ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದಿದ್ದು, ಬೇಲ್‍ನಲ್ಲಿದ್ದಾರೆ. ಅಂತವರಿಂದ ನೀತಿ ಪಾಠವನ್ನು ಹೇಳಿಸಿಕೊಳ್ಳುವ ಪರಿಸ್ಥಿತಿ ಬಿಜೆಪಿ ಪಕ್ಷಕ್ಕಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷವನ್ನು ತೀಕ್ಷ್ಮವಾಗಿ ಝರಿದರು.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ರಾಜ್ಯ ಮತ್ತು ದೇಶದಲ್ಲಿ ಪಾರದರ್ಶಕವಾದ, ನಿಕ್ಷಪಕ್ಷವಾದ ಆಡಳಿತವನ್ನು ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಇಷ್ಟು ವರ್ಷದಲ್ಲಿ 60 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿತು. ಈ ವೇಳೆ ಅನೇಕ ಆರೋಪಗಳು ಬಂದವು. ಆಗ ಕಾಂಗ್ರೆಸ್ ಪಕ್ಷದವರು ನಿಕ್ಷಪಕ್ಷವಾಗಿ, ಪಾರದರ್ಶಕವಾದ ತನಿಖೆ ಮಾಡಿಸಿದ್ದರೇ ಜನರ ಮುಂದೆ ಇಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಮಲೆನಾಡಿಗರನ್ನು ಬಿಟ್ಟು ಬಿಡದೇ ಕಾಡುತ್ತಿರುವ ‘ಮಂಗನ ಕಾಯಿಲೆ’

ಈಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ ಬೆಳಕಿಗೆ ಬಂದ ತಕ್ಷಣ ನಮ್ಮ ಬಿಜೆಪಿ ಸರ್ಕಾರ ನಿಕ್ಷಪಕ್ಷವಾದ ತನಿಖೆಗೆ ಸೂಚಿಸಿತು. ಪೆÇಲೀಸ್ ಕಾನ್ಸಟೇಬಲ್‍ನಿಂದ ಹಿಡಿದು ಡಿಎಸ್‍ಪಿವರೆಗೂ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಕ್ರಮಕೈಗೊಳ್ಳಲಾಗಿದೆ. ಸರ್ಕಾರ ಯಾವುದೇ ಜಾತಿ, ಧರ್ಮ, ಪಕ್ಷ ನೋಡದೇ ಕಠಿಣ ನಿರ್ಣಯವನ್ನು ತೆಗೆದುಕೊಂಡಿದೆ.

ಇಂತಹ ಕಠಿಣ ಕ್ರಮನ್ನು ತೆಗೆದುಕೊಂಡಿದ್ದರೆ ಕಾಂಗ್ರೆಸ್ ಪಕ್ಷ ಹೇಳಲಿ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಪಾರದರ್ಶನಕವಾಗಿ ಆಡಳಿತ ಮಾಡುತ್ತಿದೆ. ಆದರೆ ಭಂಡತನದಿಂದ ಕಾಂಗ್ರೆಸ್ ಪಕ್ಷದವರು ಸುಳ್ಳು ಆರೋಪಗನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಂದ್ರವು ಧ್ವನಿವರ್ಧಕಗಳ ಬಗ್ಗೆ ನೀತಿಯನ್ನು ತರಬೇಕು: ಮಹಾರಾಷ್ಟ್ರ ಗೃಹ ಸಚಿವ

Share This Article
Leave a Comment

Leave a Reply

Your email address will not be published. Required fields are marked *