ಏ.30 ಕ್ಕೆ ಶಿವಮೊಗ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ

Public TV
1 Min Read

ಶಿವಮೊಗ್ಗ: ಏಪ್ರಿಲ್‌ 30 ರಂದು ಶಿವಮೊಗ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P.Nadda) ಭೇಟಿ‌ ನೀಡುತ್ತಿದ್ದು, ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ (B.Y.Raghavendra) ತಿಳಿಸಿದರು.

ಶಿವಮೊಗ್ಗದಲ್ಲಿ ‌ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ದಿನಾಂಕ ಹತ್ತಿರ ಬರುತ್ತಿದೆ. ಗ್ಯಾರಂಟಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದಿಂದ ತಾಯಂದಿರಿಗೆ ವರ್ಷಕ್ಕೆ ಒಂದು ಲಕ್ಷ ರೂ. ಕೊಡುವ ಬಗ್ಗೆ ಹೇಳಿದ್ದಾರೆ. ಇದು ಅಸಾಧ್ಯವಾದ ಮಾತಾಗಿದ್ದು, ಕಾಂಗ್ರೆಸ್ ‌ಜನತೆಗೆ ಸುಳ್ಳು ಭರವಸೆ ‌ನೀಡುತ್ತಿದೆ ಎಂದು‌ ಟಾಂಗ್‌ ಕೊಟ್ಟರು. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ನಾಡದ್ರೋಹಿ: ಡಿಕೆಶಿ ವಾಗ್ದಾಳಿ

ದೇಶದ ಬಜೆಟ್ 45 ಲಕ್ಷ ರೂ. ಕೋಟಿ ಇದೆ. ದೇಶದಲ್ಲಿ 68 ಲಕ್ಷ ಕೋಟಿ ಮಹಿಳೆಯರಿದ್ದಾರೆ. ಪ್ರತಿ ಕುಟುಂಬಕ್ಕೆ ಓರ್ವ ಮಹಿಳೆಗೆ ಅಂದರೂ 38 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಆದರೆ ಗ್ಯಾರಂಟಿ ಮೂಲಕ ಕಾಂಗ್ರೆಸ್ ‌ಮಹಿಳೆಯರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದು ದೇಶಕ್ಕೆ ಅಥವಾ ರಾಜ್ಯಕ್ಕೆ ಸೀಮಿತವಾದ ಪ್ರಣಾಳಿಕೆಯೇ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.

ಜನ ಒಂದು ಬಾರಿ ಮೋಸ ಹೋಗಬಹುದು. ಪದೇ ಪದೇ ಮೋಸ ಹೋಗಲ್ಲ. ನಮ್ಮದು‌‌ ಮೋದಿ‌ ಗ್ಯಾರಂಟಿ. ಮೋದಿ ಗ್ಯಾರಂಟಿ ಮುಂದೆ ಬೇರೆ ಗ್ಯಾರಂಟಿ ನಡೆಯುವುದಿಲ್ಲ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆ: ಹನೂರು ಭಾಗದ ಒಂದು ಮತಗಟ್ಟೆಗೆ ಏ.29 ರಂದು ಮರು ಮತದಾನ

Share This Article