ಸಿಎಂ, ಹಿಂದಿ ಹಾಗೂ ಕನ್ನಡಿಗರ ನಡುವೆ ಜಗಳ ತಂದಿಡ್ತಿದ್ದಾರೆ: ಮುರುಳೀಧರ್ ರಾವ್

Public TV
2 Min Read

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಜೊತೆ ತಮಿಳು, ತೆಲುಗು ಭಾಷಿಕರು ಹೆಚ್ಚಿದ್ದಾರೆ. ಅದೇ ರೀತಿ ಹಿಂದಿ ಭಾಷಿಕರು ಮತ್ತು ಪೂರ್ವಾಂಚಲ ರಾಜ್ಯದ ಜನರು ಹಚ್ಚಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಹಿಂದಿ ಭಾಷಿಕರು ಹಾಗೂ ಕನ್ನಡಿಗರ ನಡುವೆ ಜಗಳ ತಂದು ಒಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಮುರುಳೀಧರ್ ರಾವ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಮ್ಯನ್ಫೋ ಕನ್ವೇಷನ್ ಸೆಂಟರ್ ನಲ್ಲಿ ಇಂದು ಬಿಜೆಪಿ ಯಿಂದ ಆಯೋಜಿಸಿದ್ದ ಪೂರ್ವಾಂಚಲ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಿಂದಿ ಭಾಷಿಕರು ಯಾವುದೇ ಗಲಾಟೆ ಮಾಡಿಕೊಂಡಿಲ್ಲ. ಇಲ್ಲಿಯವರೆಗೂ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಸಿಎಂ ಅವರಿಗೆ ಜನರಲ್ಲಿ ಜಗಳ ನಿರ್ಮಾಣ ಮಾಡದಿದ್ದಾರೆ ನಿದ್ದೆ ಬರುವುದಿಲ್ಲ. ಈಗಾಗಲೇ ಅವರು ಹಿಂದೂ, ಮುಸ್ಲಿಮರ ಜೊತೆ ಜಗಳ ತಂದಿಟ್ಟಿದ್ದಾರೆ. ಟಿಪ್ಪು ಸುಲ್ತಾನ್ ಜಪ ಮಾಡಿ ರಾಜ್ಯದ ಶಾಂತಿ ಕದಡಿದ್ದಾರೆ. ಹಿಂದೂ ಧರ್ಮದಲ್ಲಿ ಒಡಕು ಮೂಡಿಸುವ ಉದ್ದೇಶದಿಂದ ಲಿಂಗಾಯತ ಧರ್ಮವನ್ನು ಎರಡು ಭಾಗ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ನಾನು ಒಮ್ಮೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದೆ. ಸಿದ್ದರಾಮಯ್ಯ ಅಂದು ನನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದರು. ರಾಷ್ಟ್ರೀಯ ಪಕ್ಷದ ನಾಯಕರಾಗಿ ಹೇಗೆ ಈ ರೀತಿ ಹೇಳಿದ್ದಾರೆ? ಕರ್ನಾಟಕದ ಮುಖ್ಯಮಂತ್ರಿಗೆ ಹಿಂದಿಯಲ್ಲಿ ಮಾತನಾಡಲು, ಬರೆಯಲು ಕಷ್ಟವಾಗುತ್ತೆ. ಆದರೆ ಇಂಗ್ಲೀಷ್ ನಲ್ಲಿ ಮಾತನಾಡಲು ಬರೆಯಲು ಬರುತ್ತೆ ಎಂದರು.

ಭಾಷಣದ ಮಧ್ಯೆ, ರಾಜಧಾನಿಯಲ್ಲಿ ಹಿಂದಿ ಭಾಷಿಕರಿಂದ ಯಾವುದಾದರೂ ಸಮಸ್ಯೆ ಆಗಿದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಕಾರ್ಯಕ್ರಮದಲ್ಲಿದ್ದ ಎಲ್ಲರು ಇಲ್ಲ ಎಂದರು ಉತ್ತರಿಸಿದರು.

ಈ ವೇಳೆ ಮಾತನಾಡಿದ ಸಂಸದ ಪಿಸಿ ಮೋಹನ್, ಬೆಂಗಳೂರು ದೇಶದಲ್ಲೇ ದೊಡ್ಡ ಹೆಸರು ಮಾಡಿದೆ. ವಿವಿಧ ರಾಜ್ಯದಿಂದ ಬಂದಿರುವವರು ಬಹಳಷ್ಟು ಜನ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಪೂರ್ವಾಂಚಲ ಭಾಗದವರು ಕೂಡ ಹೆಚ್ಚಾಗಿದ್ದಾರೆ. ಮೇ 12 ರಂದು ಮತದಾನ ನಡೆಯುತ್ತದೆ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಕೇವಲ ಶ್ರೀಮಂತರ ಬಳಿ ಮಾತ್ರ ಡೆಬಿಟ್ ಕ್ರೆಡಿಟ್ ಕಾರ್ಡ್ ಇರಬೇಕು ಎನ್ನದೆ ಪ್ರಧಾನಿ ಮೋದಿ ಅವರ ಆಶಯದಂತೆ ಬಡವರ ಬಳಿಯೂ ಡೆಬಿಟ್ ಕಾರ್ಡ್ ಇರುವ ಹಾಗೇ ಮಾಡಲು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕರ್ನಾಟಕವನ್ನು ದೇಶದಲ್ಲಿ ಭ್ರಷ್ಟ ರಾಜ್ಯವಾಗಿ ಮಾಡಿದ್ದಾರೆ. ಯಾವುದೇ ರಾಜ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಆತ್ಮಹತ್ಯೆ ಮಾಡುಕೊಂಡಿಲ್ಲ, ಇದು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿರುವ ರಾಜ್ಯದಲ್ಲಿ ಮಾತ್ರ ನಡೆದಿದೆ ಎಂದು ಮೋಹನ್ ಆರೋಪಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *