ಈ ಶತಮಾನದ ರಾಕ್ಷಸಿ ಕೃತ್ಯ ಎಸಗಿರೋ ತಾಲಿಬಾನ್ ಜೊತೆ RSS ಹೋಲಿಕೆ ಸರಿಯಲ್ಲ: ಶ್ರೀನಿವಾಸ್ ಪ್ರಸಾದ್

Public TV
1 Min Read

ಚಾಮರಾಜನಗರ: ಈ ಶತಮಾನದ ರಾಕ್ಷಸಿ ಕೃತ್ಯ ಎಸಗಿದವರು ತಾಲಿಬಾನ್ ಗಳು. ಹೀಗಾಗಿ ಈ ತಾಲಿಬಾನ್ ಜೊತೆ ಆರ್.ಎಸ್.ಎಸ್ ಹೋಲಿಕೆ ಸರಿಯಲ್ಲ ಎಂದು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯನ್ನು ತಾಲಿಬಾನ್ ಗೆ ಹೋಲಿಸಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಿಡಿಕಾರಿರುವ ಸಂಸದರು, ಪ್ರತಿ ಪಕ್ಷದ ನಾಯಕನ ಗಾಡಿ ಮಗುಚಿಕೊಳ್ಳುತ್ತಿದೆ. ಆವೇಷಭರಿತವಾಗಿ ಬಿಜೆಪಿಯನ್ನ ತಾಲಿಬಾನ್ ಹೋಲಿಸುತ್ತಿದ್ದಾರೆ. ಈ ಶತಮಾನದ ರಾಕ್ಷಿಸಿ ಕೃತ್ಯ ಎಸಗಿರುವವರು ತಾಲಿಬಾನಿಗಳು. ರಕ್ತದ ಕೋಡಿ ಹರಿಸಿದ್ದಾರೆ. ತಾಲಿಬಾನಿಗಳು ರಾಕ್ಷಸರ ರೀತಿ ವರ್ತಿಸುತ್ತಿದ್ದಾರೆ. ಅಂತಹವರೊಂದಿಗೆ ಬಿಜೆಪಿ ಹೋಲಿಸುತ್ತೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಾಕತ್ತಿದ್ರೆ ಮೈಸೂರಿಗೆ ಬಂದು ಪಕ್ಷ ಸಂಘಟನೆ ಮಾಡಿ ಗೆಲ್ಲಿ- ಸಿದ್ದುಗೆ ಶ್ರೀನಿವಾಸ್ ಪ್ರಸಾದ್ ಚಾಲೆಂಜ್

ಸಿದ್ದರಾಮಯ್ಯ ನೀವು ಈ ದೇಶದ ಪ್ರಜೆ, ಅತ್ಯಂತ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ದೇಶದ ಯಾವುದನ್ನ ಸಹ ತಾಲಿಬಾನ್ ಗೆ ಹೋಲಿಸಬಾರದು. ಸಿದ್ದರಾಮಯ್ಯಗೆ ಬುದ್ಧಿ ಸ್ಥಿಮಿತ ಇಲ್ಲಾ. ಅವರ ಹೇಳಿಕೆಯಿಂದ ನನ್ನ ಮನಸಿಗೆ ಬಹಳ ನೋವಾಗಿದೆ ಎಂದರು. ಇದನ್ನೂ ಓದಿ: RSS ಅನ್ನು ತಾಲಿಬಾನ್‍ಗೆ ಹೋಲಿಕೆ ಮಾಡಿದ್ರೆ ಕಾಂಗ್ರೆಸ್ ಐತಿಹಾಸವನ್ನು ತೆಗೆಯಬೇಕಾಗುತ್ತೆ: ಮುತಾಲಿಕ್

ಪ್ರತಿಪಕ್ಷದ ನಾಯಕ ಹಾಗೂ ಅಧ್ಯಕ್ಷರ ಬಗ್ಗೆ ನಾನು ಮಾತನಾಡುವುದೇ ಬೇಡ. ಎಂದು ವ್ಯಂಗ್ಯವಾಡಿದ ಶ್ರೀನಿವಾಸಪ್ರಸಾದ್, ನೀವು ಮತ್ತು ನಿಮ್ಮ ಅಧ್ಯಕ್ಷರು ಬನ್ನಿ ಚರ್ಚೆಗೆ. ನಮ್ಮ ಪಕ್ಷದಿಂದ ಕಟೀಲ್ ಮತ್ತು ಬೊಮ್ಮಾಯಿ ಬರುತ್ತಾರೆ ಎಂದು ಸವಾಲು ಹಾಕಿದರು.

ಒಬ್ಬ ಸಂಭವೀತ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾರೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಅತ್ಯತ್ತುಮವಾದ ಆಡಳಿತ ಕೊಡುತ್ತಿದ್ದಾರೆ. ಈಗಾಗಲೇ ವರಿಷ್ಟರು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ತಾಲಿಬಾನ್‍ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಆರಗ ಜ್ಞಾನೇಂದ್ರ ತಿರುಗೇಟು

Share This Article
Leave a Comment

Leave a Reply

Your email address will not be published. Required fields are marked *