ಸೂ.. ಮಕ್ಕಳಾ ಅಂತ ಕಾಂಗ್ರೆಸ್ ಪಕ್ಷದವರನ್ನ ನಿಂದಿಸಿದ ಬಿಜೆಪಿ ಸಂಸದ

Public TV
1 Min Read

ಚಿಕ್ಕೋಡಿ(ಬೆಳಗಾವಿ): ಸೂ.. ಮಕ್ಕಳಾ ಎಂದು ಕಾಂಗ್ರೆಸ್ ಪಕ್ಷದವರನ್ನು ಅವಾಚ್ಯ ಶಬ್ದಗಳಿಂದ ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಗಣಿ ನಿಂದಿಸಿರುವ ಘಟನೆ ನಡೆದಿದೆ.

ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವನ ಸಂಸದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರ್‌ಎಸ್‍ಎಸ್ ಸಂಘಟನೆಯಿಂದ ಜಿಗಜಿಣಗಿ ಅವರು ದೂರ ಇದ್ದೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ನಿಂದನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಜನತಾ ಪರಿವಾರದ ಮುಖಂಡರ ಸಹವಾಸದಿಂದ ಬೆಳೆದಿದ್ದೇವೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನಿಧನದ ನಂತರ ಕಾಂಗ್ರೆಸ್ ಪಕ್ಷಕ್ಕೆ ಬಾ ಎಂದು ಕರೆದಿದ್ದರು ಎಂದರು. ಇದನ್ನೂ ಓದಿ: ಸರ್ಕಾರ ಮೊಂಡಾಟ ಮಾಡಿದ್ರೆ ಜನ ತಕ್ಕ ಪಾಠ ಕಲಿಸುತ್ತಾರೆ: ಸಿದ್ದರಾಮಯ್ಯ

Congress

ಕಾಂಗ್ರೆಸ್‍ನವರು ಸೂ.. ಮಕ್ಕಳಾ ಮನೆ ಹಾಳ ಮಾಡಿದ್ದೀರೆ. ಬಾಬಾಸಾಹೇಬ್‌ ಅಂಬೇಡ್ಕರ್ ಅವರನ್ನು ಕೊಲೆ ಮಾಡಿದ್ದಾರೆ. ಅವರ ಮರಣದ ನಂತರ ದೆಹಲಿಯಲ್ಲಿ ಮಣ್ಣು ಮಾಡಲು ಸ್ಥಳವನ್ನು ನೀಡಲಿಲ್ಲ. ನಿಮ್ಮಂಥ ಮನೆಹಾಳ ಪಕ್ಷ ಸೇರುವುದಿಲ್ಲ. ಏನೇ ಆಗಲಿ ಎಂದು ವಿರೋಧದ ನಡುವೆಯೂ ಬಿಜೆಪಿ ಸೇರಿದ್ದೇನೆ. ಜನತಾದಳದವನಾಗಿದ್ದರೂ ಸಂಘ ಪರಿವಾರ ಹಾಗೂ ಬಿಜೆಪಿಯ ಬಗ್ಗೆ ಗೌರವ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಬಸವರಾಜ ಹೊರಟ್ಟಿ ಬಗ್ಗೆ ಪಿಹೆಚ್‍ಡಿ ಮಾಡಬೇಕು: ಬೊಮ್ಮಾಯಿ

Share This Article
Leave a Comment

Leave a Reply

Your email address will not be published. Required fields are marked *