ಬ್ರಿಜ್ ಭೂಷಣ್ ವಿರುದ್ಧದ ಕುಸ್ತಿಪಟುಗಳ ಹೋರಾಟಕ್ಕೆ ಬಿಜೆಪಿ ಸಂಸದೆ ಬೆಂಬಲ

Public TV
2 Min Read
Pritam Munde

ನವದೆಹಲಿ: ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಬಂಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಕುಸ್ತಿಪಟುಗಳ (Wrestlers) ಹೋರಾಟಕ್ಕೆ ಮಹಾರಾಷ್ಟ್ರ (Maharashtra) ಬಿಜೆಪಿ ಸಂಸದೆ ಪ್ರೀತಮ್ ಮುಂಡೆ (Pritam Munde) ಬೆಂಬಲ ಸೂಚಿಸಿದ್ದಾರೆ.

ದೂರಿನ ಪರಿಶೀಲನೆಯ ನಂತರ ಅಧಿಕಾರಿಗಳು ಇದು ಸರಿಯಾಗಿದೆಯೇ? ಇಲ್ಲವೆ ಎಂಬುದನ್ನು ನಿರ್ಧರಿಸಬೇಕು. ನಾನು ಈ ಸರ್ಕಾರದ ಭಾಗವಾಗಿದ್ದೇನೆ. ಆದರೂ ಕುಸ್ತಿಪಟುಗಳೊಂದಿಗೆ ಸರ್ಕಾರ ಸಂವಹನ ನಡೆಸಬೇಕಾದ ರೀತಿಯಲ್ಲಿ ನಡೆದುಕೊಂಡಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಯಾರೇ ದೂರು ನೀಡಿದರೂ ಕ್ರಮ ತೆಗೆದುಕೊಳ್ಳಬೇಕು. ಪ್ರಸ್ತುತ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರೀತಮ್ ಮುಂಡೆ ಹೇಳಿದ್ದಾರೆ. ಇದನ್ನೂ ಓದಿ: 180 ದಿನಗಳಾದರೂ ಕೆಲಸ ಸಿಗದ ನಿರುದ್ಯೋಗಿಗಳಿಗೆ ಯುವ ನಿಧಿ

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಬಿಜೆಪಿ ಮೌನ ವಹಿಸಿದೆ. ಇದರ ನಡವೆ ಪ್ರೀತಮ್ ಮುಂಡೆ ಹಾಗೂ ಹರಿಯಾಣದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಪ್ರತಿಭಟನಕಾರರ ಪರ ದ್ವನಿ ಎತ್ತಿದ್ದಾರೆ.

Wrestlers

ಇತ್ತೀಚೆಗೆ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ (Ganga River) ಎಸೆಯುವುದಾಗಿ ಘೋಷಿಸಿದ್ದರು. ಈ ವೇಳೆ ಹರಿಯಾಣದ (Haryana) ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಪ್ರತಿಭಟನೆ ಹೃದಯವಿದ್ರಾವಕವಾಗಿದೆ ಎಂದು ಹೇಳಿದ್ದರು. ರೈತ ಸಂಘದ ಮುಖಂಡ ನರೇಶ್ ಟಿಕಾಯತ್ ಅವರು ಎಸೆಯದಂತೆ ತಡೆದಿದ್ದರು.

ನಮ್ಮ ಕುಸ್ತಿಪಟುಗಳ ನೋವು ಮತ್ತು ಅಸಹಾಯಕತೆಯ ನೊವಿನಲ್ಲಿ ನಾನು ಭಾಗಿಯಾಗುತ್ತೇನೆ. ಅವರ ಜೀವಮಾನದ ಕಠಿಣ ಪರಿಶ್ರಮವನ್ನು ನದಿಗೆ ಎಸೆಯುವ ಅಂಚಿಗೆ ಅವರು ತಲುಪಿದ್ದಾರೆ. ಇದು ಹೃದಯ ಹಿಂಡುವ ಘಟನೆಯಾಗಿ ಕಾಣುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಭಾರತೀಯ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ನಡೆಸಿಕೊಂಡ ರೀತಿ ಗೊಂದಲಕ್ಕೆ ಕಾರಣವಾಗಿದೆ. ಕುಸ್ತಿಪಟುಗಳ ಆರೋಪಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಹೇಳಿದೆ.

ತನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೂ ನೇಣು ಹಾಕಿಕೊಳ್ಳುವುದಾಗಿ ಬ್ರಿಜ್ ಭೂಷಣ್ ಸಿಂಗ್ ಇತ್ತೀಚೆಗೆ ಹೇಳಿದ್ದಾರೆ. ಇದನ್ನೂ ಓದಿ: ಲಗೇಜ್‍ಗೆ ಹೆಚ್ಚುವರಿ ಹಣ ಪಾವತಿಸಿ ಎಂದಿದ್ದಕ್ಕೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಅಂತ ಏರ್‌ಪೋರ್ಟ್‌ನಲ್ಲಿ ಮಹಿಳೆ ಡ್ರಾಮಾ

Share This Article