ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕಾರ ನೀಡಿ, ಅಕ್ರಮ ಮತದಾನ ತಡೆಗಟ್ಟಿ: ಸಂಸದ ಸುಧಾಕರ್‌ ಕರೆ

2 Min Read

ಚಿಕ್ಕಬಳ್ಳಾಪುರ: ಬಿಜೆಪಿಯ (BJP( ಬೂತ್‌ ಮಟ್ಟದ ಏಜೆಂಟ್‌ಗಳು ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಅಕ್ರಮ ಮತದಾನ ತಡೆಗಟ್ಟಲು ಶ್ರಮಿಸಬೇಕು. ಮುಂದಿನ ಯಾವುದೇ ಚುನಾವಣೆಗಳಲ್ಲಿ ಪಾರದರ್ಶಕ ಮತದಾನ ನಡೆಯುವಂತೆ ಎಚ್ಚರ ವಹಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ (Dr. K Sudhakar) ಕರೆ ನೀಡಿದರು.

ದೇವನಹಳ್ಳಿ (Devanahalli) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬೂತ್ ಮಟ್ಟದ ಏಜೆಂಟ್-2 ಕಾರ್ಯಗಾರದಲ್ಲಿ ಅವರು ಪಾಲ್ಗೊಂಡು ಹೊಸದಾಗಿ ನೇಮಕಗೊಂಡ ಬಿಎಲ್ಎ-2 ಕಾರ್ಯಕರ್ತರಿಗೆ ಶುಭ ಕೋರಿದರು. ನಂತರ ಮಾತನಾಡಿದ ಅವರು, ಬೂತ್‌ ಮಟ್ಟದ ಏಜೆಂಟ್‌ಗಳು ಪಕ್ಷದ ಆಧಾರಸ್ತಂಭವಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಮತಗಟ್ಟೆಯಲ್ಲಿ ಪಾರದರ್ಶಕ ಮತದಾನ ನಡೆಯುವಂತೆ ಎಚ್ಚರ ವಹಿಸಬೇಕು. ಕಳ್ಳ ಮತದಾನ ಮತ್ತು ಬೇರೆ ಊರಿನವರು ಬಂದು ಅಕ್ರಮವಾಗಿ ಮತದಾನ ಮಾಡುವುದನ್ನು ತಡೆಗಟ್ಟಬೇಕು. ಮತದಾರರನ್ನು ಮುಂಚಿತವಾಗಿಯೇ ಮತದಾನ ಕೇಂದ್ರ ತರುವುದು ಏಜೆಂಟ್‌ಗಳ ಮುಖ್ಯ ಪಾತ್ರ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಆವರಣದಲ್ಲಿ ನಮಾಜ್‌ಗೆ ಯತ್ನ – ಕಾಶ್ಮೀರ ಮೂಲದ ವ್ಯಕ್ತಿ ಪೊಲೀಸ್ ವಶಕ್ಕೆ

ಜೊತೆಗೆ ಮುಂದಿನ ಚುನಾವಣೆಗಳ (Assembly Elections 2028) ಸಿದ್ಧತೆಯ ವೇಳೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕಾರ ನೀಡಬೇಕಿದೆ. ಅದಕ್ಕಾಗಿ ಕಾರ್ಯಕರ್ತರು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಹಕಾರ ನೀಡಬೇಕು. ದೀರ್ಘಕಾಲದಿಂದ ದೇವನಹಳ್ಳಿ ಕ್ಷೇತ್ರದಿಂದ ಹೊರಗೆ ಬೆಂಗಳೂರು, ಮಂಗಳೂರು ಅಥವಾ ವಿದೇಶದಲ್ಲಿ ನೆಲೆಸಿರುವವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲು ಚುನಾವಣಾಧಿಕಾರಿಗಳಿಗೆ ಮನವಿ ಮಾಡಬೇಕು. ಹತ್ತು ವರ್ಷದ ಹಿಂದೆ ಮೃತಪಟ್ಟವರ ಹೆಸರು ಕೂಡ ಮತದಾರರ ಪಟ್ಟಿಯಲ್ಲಿದ್ದು, ಅಂತಹವರ ಹೆಸರು ತೆಗೆದುಹಾಕುವಂತೆ ಚುನಾವಣಾಧಿಕಾರಿಗಳಿಗೆ ಹೇಳಬೇಕಿದೆ ಎಂದರು.

ರಾಜಕೀಯ ಸವಾಲು
ಇದೇ ವೇಳೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ದೇವನಹಳ್ಳಿ ಮತ್ತು ವಿಜಯಪುರ ಪುರಸಭೆ ಚುನಾವಣೆಗಳಿಗೆ ಪಕ್ಷದ ಸಿದ್ಧತೆ ಕುರಿತು ಚರ್ಚಿಸಲಾಯಿತು. ಇದನ್ನೂ ಓದಿ: ಕೇರಳದಲ್ಲಿ ಕನ್ನಡ ಭಾಷೆಗೆ ಧಕ್ಕೆ, ಇದು ಮೊದಲೇ ಆಗಿರುವ ಮ್ಯಾಚ್‌ ಫಿಕ್ಸಿಂಗ್‌: ಆರ್‌.ಅಶೋಕ್‌

ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದ ವಿರೋಧಿ ಅಲೆ ಇದೆ. ಇಂತಹ ಸಮಯದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿರೋಧ ಪಕ್ಷದವರಾಗಿ ಸಮರ್ಥವಾಗಿ ಕೆಲಸ ಮಾಡಬೇಕಿದೆ. ಸ್ಥಳೀಯ ಮುಖಂಡರೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು. ದೇವನಹಳ್ಳಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ ಹಾಗೂ ಆಡಳಿತದ ಲಾಭವನ್ನು ಮನದಟ್ಟು ಮಾಡಿಕೊಡಬೇಕಿದೆ. ಕಾರ್ಯಕರ್ತರು ಸ್ಥಳೀಯ ಸಮಸ್ಯೆಗಳನ್ನು ಹಿರಿಯ ಮುಖಂಡರ ಗಮನಕ್ಕೆ ತಂದು ಬಗೆಹರಿಸುವ ಮೂಲಕ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮತ ನೀಡಲು ಇಚ್ಛಿಸುವವರನ್ನ ಪಕ್ಷಕ್ಕೆ ಸೇರಿಸುವ ಮೂಲಕ ಸಂಘಟನೆಯ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು. ಇದನ್ನೂ ಓದಿ: BMRCLನಿಂದ ಗುಡ್‌ನ್ಯೂಸ್ – ಶೀಘ್ರವೇ ಟ್ರ್ಯಾಕಿಗಿಳಿಯಲಿದೆ ಪಿಂಕ್ ಲೈನ್ ಮೆಟ್ರೋ, ನಾಳೆ ರೋಲಿಂಗ್ ಸ್ಟಾಕ್ ಟೆಸ್ಟ್ ಆರಂಭ

Share This Article