ಜೈಲಿಗೆ ಹೋಗಿಬಂದ ಯಡಿಯೂರಪ್ಪ ಮನೆಗೆ ಅಮಿತ್ ಶಾ ತಿಂಡಿಗೆ ಹೋಗಿಲ್ವಾ? – ಹೆಚ್. ವಿಶ್ವನಾಥ್ ಪ್ರಶ್ನೆ

Public TV
2 Min Read

– ರಾಹುಲ್ ಗಾಂಧಿಯನ್ನ ಬಿಜೆಪಿ ಅವರು ಜೈಲಿಗೂ ಹಾಕಿಸಬಹುದು
– ಸಿ.ಟಿ ರವಿ, ಈಶ್ವರಪ್ಪ ಅವ್ರನ್ನ ಎಷ್ಟು ಬಾರಿ ಜೈಲಿಗೆ ಹಾಕಬೇಕಿತ್ತು? ಹೆಚ್‌ವಿ ಕಿಡಿ

ಮೈಸೂರು: ಬಿಜೆಪಿ (BJP) ಜನತಂತ್ರ ವ್ಯವಸ್ಥೆಯನ್ನೇ ಮುಗಿಸುವ ಹುನ್ನಾರ ನಡೆಸಿದೆ. ರಾಹುಲ್ ಗಾಂಧಿಯ (Rahul Gandhi) ಜನಪ್ರಿಯತೆ ಸಹಿಸದೇ ಅವರ ವ್ಯಕ್ತಿತ್ವ ದಮನ ಮಾಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H Vishwanath) ಕಿಡಿ ಕಾರಿದ್ದಾರೆ.

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 2018 ರಲ್ಲಿ ರಾಹುಲ್ ಗಾಂಧಿ ಕೋಲಾರದಲ್ಲಿ ಮೋದಿ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಬಿಜೆಪಿಯವರು ತಮಗೆ ಬೇಕಾದಂತಹ ಜಡ್ಜ್, ಕೋರ್ಟ್ ಇರುವ ಜಾಗಕ್ಕೆ ಈ ಕೇಸ್ ತೆಗೆದುಕೊಂಡು ಹೋಗಿ ಶಿಕ್ಷೆ ಕೊಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿಯನ್ನ ಬಿಜೆಪಿಯವರು ಜೈಲಿಗೂ ಹಾಕಿಸಬಹುದು. ಇದು ಜನತಂತ್ರ ವ್ಯವಸ್ಥೆಯನ್ನೇ ಮುಗಿಸುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ಸಾವರ್ಕರ್ ಅಲ್ಲ, ಕ್ಷಮೆ ಕೇಳುವುದಿಲ್ಲ: ಅನರ್ಹತೆ ಕುರಿತು ರಾಹುಲ್ ಗಾಂಧಿ

ಬಿಜೆಪಿಯಿಂದ ದೇಷದ ಸಾಧನೆ:
ಶೇ.54ರಷ್ಟು ಸಂಸದರ ಮೇಲೆ ಕ್ರಿಮಿನಲ್ ರೆಕಾರ್ಡ್ ಇದೆ. ಹೀಗಿದ್ದರೂ ಬಿಜೆಪಿ ದುರುದ್ದೇಶದಿಂದ ಈ ಕೆಲಸ ಮಾಡಿದೆ. ದ್ವೇಷದ ಸಾಧನೆಯನ್ನು ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಕೋಲಾರ ಕೂಡ ಕೇಳಿದ್ದೇನೆ- ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಮೇಲೆ ಕೊಡಗಿನಲ್ಲಿ ಅಕ್ರಮಣ ಮಾಡಿದರು ಅದು ಏನಾಯ್ತು? ಸಿದ್ದರಾಮಯ್ಯರನ್ನ ಮುಗಿಸಿ ಅಂತಾ ಹೇಳಿದ ಸಚಿವನ ಮೇಲೆ ಕೇಸ್ ದಾಖಲಾಯ್ತಾ? ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಮನೆಗೆ ಅಮಿತ್ ಶಾ ತಿಂಡಿಗೆ ಹೋಗಿಲ್ವಾ? ಜೈಲಿಗೆ ಹೋಗಿ ಬಂದವರ ಮನೆಗೆ ಈ ದೇಶದ ಗೃಹ ಸಚಿವರು ಹೇಗೆ ತಿಂಡಿಗೆ ಹೋದ್ರು? ಎಂದು ಪ್ರಶ್ನಿಸಿದ್ದಾರೆ.

ಮೋದಿ ಪ್ರೀತಿಸುವವರು ದೇಶಪ್ರೇಮಿ:
ಸಿ.ಟಿ ರವಿ (CT Ravi), ಈಶ್ವರಪ್ಪ ಹೇಗೆಲ್ಲಾ ಮಾತಾಡಿದ್ದಾರೆ ಅವರನ್ನೆಲ್ಲಾ ಎಷ್ಟು ಬಾರಿ ಜೈಲಿಗೆ ಹಾಕಬೇಕಿತ್ತು? ಈ ದೇಶದಲ್ಲಿ ಬಿಜೆಪಿಯವರಿಗೇ ಒಂದು ಕಾನೂನು. ಬಿಜೆಪಿಯೇತರರಿಗೆ ಒಂದು ಕಾನೂನು ಇದೆಯಾ? ಯಾರು ಮೋದಿಯನ್ನು ಪ್ರೀತಿಸುತ್ತಾರೋ ಅವರು ದೇಶಪ್ರೇಮಿ, ಯಾರು ಮೋದಿಯನ್ನು ಟೀಕಿಸುತ್ತಾರೋ ಅವರು ದೇಶ ದ್ರೋಹಿ. ಇದೇ ಸ್ಥಿತಿ ಈ ದೇಶದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *