-ಕರ್ನಾಟಕ ಭವನ ಖಾಲಿ ಮಾಡುವಂತೆ ಶಾಸಕರಿಗೆ ಹೈಕಮಾಂಡ್ ಸೂಚನೆ
ಬೆಂಗಳೂರು: ಕರ್ನಾಟಕದ ದೋಸ್ತಿ ಸರ್ಕಾರಕ್ಕೆ ಕಂಟಕ ಎದುರಾಗಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿದೆ. ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಮುಂದಾಗುತ್ತಿದೆಯಾ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಆರಂಭಗೊಂಡಿವೆ. ಕರ್ನಾಟಕ ಭವನದಲ್ಲಿರುವ ಎಲ್ಲ ಬಿಜೆಪಿ ಶಾಸಕರಿಗೆ ಭಾನುವಾರ ಮತ್ತು ಸೋಮವಾರ ದೆಹಲಿಯಲ್ಲಿರುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕರ್ನಾಟಕ ಭವನ ಖಾಲಿ ಮಾಡಲಿರುವ ಬಿಜೆಪಿ ಶಾಸಕರಿಗೆ ದೆಹಲಿಯಲ್ಲಿ ಹೋಟೆಲ್ ಬುಕ್ ಮಾಡಲಾಗಿದೆಯಂತೆ. ಭಾನುವಾರ ಮತ್ತು ಸೋಮವಾರ ದೆಹಲಿಯಲ್ಲಿ ಉಳಿಯುವ ಶಾಸಕರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಹಸ್ಯ ಸಭೆ ನಡೆಸಲಿದ್ದಾರಂತೆ. ಇತ್ತ ಶಾಸಕರು ಸಹ ಗೊಂದಲಕ್ಕೊಳಗಾದಂತೆ ಕಾಣುತ್ತಿದ್ದು, ಹೈಕಮಾಂಡ್ ದಿಢೀರ್ ನಿರ್ಧಾರ ಏನು ಎಂಬುದರ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದೆ.
ಮೇಲ್ನೋಟಕ್ಕೆ ಲೋಕಸಭಾ ಚುನಾವಣೆಗೆ ಸಿದ್ಧತೆ ಕುರಿತು ಮಾತನಾಡಲು ಅಮಿತ್ ಶಾ ಸಭೆ ಕರೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಯಾವ ಶಾಸಕರು ಪ್ರತಿಕ್ರಿಯೆಗಳನ್ನು ನೀಡಲು ಮುಂದಾಗುತ್ತಿಲ್ಲ. ಎಲ್ಲರೂ ಹೈಕಮಾಂಡ್ ಸೂಚನೆಯಂತೆ ದೆಹಲಿಯತ್ತ ಪ್ರಯಾಣ ಬೆಳೆಸಲು ಸಿದ್ಧರಾಗುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv