ಪಾಕ್‌ಗೆ ಜೈ ಎಂದವರ ಕೃತ್ಯ ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸರಿಂದ ಕಿರುಕುಳ: ಸುನಿಲ್ ಕುಮಾರ್ ಆಕ್ರೋಶ

Public TV
1 Min Read

ಉಡುಪಿ: ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ಕೃತ್ಯ ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ (Sunil Kumar) ಆರೋಪಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಭಾರತದ ವಿರುದ್ಧ ಪಾಕಿಸ್ತಾನ ಯುದ್ಧದ ಬೆದರಿಕೆ ಹಾಕುತ್ತಿದೆ. ದೇಶದೊಳಗಿನ ಶತ್ರುಗಳು ಇದಕ್ಕಿಂತ ಹೆಚ್ಚು ಅಪಾಯಕಾರಿ. ಈ ದೇಶದ ಉಪ್ಪು ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಈ ಮನಃಸ್ಥಿತಿ ಬಾಹ್ಯ ಶತ್ರುಗಳಿಗಿಂತ ಕೆಟ್ಟದು ಎಂದು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈಕಾರ ಹಾಕೋರಿಗೆ ಚಪ್ಪಲಿಯಿಂದ ಹೊಡೆಯಿರಿ – ಯತ್ನಾಳ್

ಮಸೀದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಿಸಿದ್ದಾಯ್ತು. ವಿಧಾನಸೌಧದಲ್ಲೂ ಪಾಕ್ ಪರ ಘೋಷಣೆಯಾಯ್ತು. ಈಗ ಕ್ರಿಕೆಟ್ ಅಂಗಳದಲ್ಲೂ ಪಾಕ್ ಪ್ರೇಮ. ಇಂತಹ ದೇಶ ವಿರೋಧಿಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಖಂಡಿಸಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ಪಾಕ್‌ಗೆ ಜೈ ಎಂದವರ ಕೃತ್ಯ ಖಂಡಿಸಲಾಗಿದೆ. ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸ್ ಕಿರುಕುಳವನ್ನು ಸಮಾಜ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ಕಾನ್ಸ್‌ಟೇಬಲ್ ತಾಯಿ ಗಡೀಪಾರಿಲ್ಲ

Share This Article