ಬಿಜೆಪಿ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ

Public TV
1 Min Read

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ (Muniratna) ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬಿಡುಗಡೆಯಾದರು.

20 ಕ್ಕೂ ಹೆಚ್ಚು ದಿನಗಳಿಂದ ಜೈಲಿನಲ್ಲಿದ್ದ ಶಾಸಕರು ಬುಧವಾರ ಬಿಡುಗಡೆಯಾಗಿ, ಜೈಲಿನಿಂದ ನೇರವಾಗಿ ತಮ್ಮ ನಿವಾಸದ ಕಡೆ ತೆರಳಿದರು. ಇದನ್ನೂ ಓದಿ: ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೆ ಕಳಿಸೋಕಾಗಲ್ಲ – ಬಿಜೆಪಿ ಟೀಕೆಗೆ ಪರಮೇಶ್ವರ್ ತಿರುಗೇಟು

ಜೈಲಿನಿಂದ ಶಾಸಕರ ಬಿಡುಗಡೆ ಹಿನ್ನೆಲೆ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ನಿವಾಸದೆದುರು ಬೆಂಬಲಿಗರು ಸಂಭ್ರಮಿಸಿದರು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮುನಿರತ್ನ ಅವರಿಗೆ ಮಂಗಳವಾರ ಶರತ್ತುಬದ್ಧ ಜಾಮೀನು ನೀಡಿತ್ತು. 1 ಲಕ್ಷ ರೂ. ಪರ್ಸನಲ್ ಬಾಂಡ್ ಮತ್ತು ಇಬ್ಬರ ಶೂರಿಟಿ ನೀಡುವಂತೆ ಷರತ್ತು ವಿಧಿಸಿತ್ತು. ಇದನ್ನೂ ಓದಿ: ತಮಿಳುನಾಡಿನಲ್ಲಿ ಮಳೆ ಆರ್ಭಟ – ಕರ್ನಾಟಕದ ಕೆಲ ರೈಲುಗಳ ಸಂಚಾರ ರದ್ದು

Share This Article