ಜೈಲಿಂದ ಬಿಡುಗಡೆಯಾದ ಚಂದ್ರು ಲಮಾಣಿ – ದೇವಸ್ಥಾನದಲ್ಲಿ ಈಡುಗಾಯಿ ಹೊಡೆದ ಶಾಸಕ

1 Min Read

ಬೆಂಗಳೂರು: 5 ಲಕ್ಷ ಲಂಚ (Bribe) ಪಡೆದ ಆರೋಪದಡಿ ಜೈಲು ಸೇರಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ (Chandru Lamani) ಜಾಮೀನು (Bail) ಸಿಕ್ಕ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ (Parappana Agrahara) ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಶಿರಹಟ್ಟಿ ಶಾಸಕರಾಗಿರುವ ಚಂದ್ರು ಲಮಾಣಿ ಕಳೆದ 15 ದಿನದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬುಧವಾರ ಜನಪ್ರತಿನಿಧಿಗಳ ನ್ಯಾಯಾಲಯ ಚಂದ್ರು ಲಮಾಣಿಗೆ 2 ಲಕ್ಷ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿತ್ತು. ಇಂದು ಎಲ್ಲ ಪ್ರೊಸೀಜರ್ ಮುಗಿಸಿ ಬಿಡುಗಡೆಗೊಂಡಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನಕ್ಕೆ ತೆರೆ

ನೆಚ್ಚಿನ ಶಾಸಕನ ಬಿಡುಗಡೆಯಿಂದ ಚಂದ್ರು ಲಮಾಣಿ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಚಂದ್ರು ಲಮಾಣಿ ಕ್ಷೇತ್ರದಿಂದ ಅಭಿಮಾನಿಗಳು ಆಗಮಿಸಿದ್ದರು. ಬಿಡುಗಡೆಯಾಗುತ್ತಿದ್ದಂತೆ ಚಂದ್ರು ಲಮಾಣಿ ಚೆಕ್ ಪೋಸ್ಟ್ ಬಳಿಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದಿದ್ದಾರೆ. ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕೊಲೆಗೆ ಯತ್ನ

Share This Article