1 ಲಕ್ಷದ 25 ಸಾವಿರ ರೂ. ನೀಡಿ ಯುವಕನ ನೋವಿಗೆ ನೆರವಾದ ಆನಂದ್ ಸಿಂಗ್

Public TV
0 Min Read

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರ ನಿವಾಸಿಗೆ ವಿಜಯ ನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಸಹಾಯ ಹಸ್ತ ಚಾಚಿದ್ದಾರೆ.

ಪ್ಯಾಂಕ್ರೀಸ್ ಕಾಯಿಲೆಯಿಂದ ಯುವಕ ಬಳಲುತಿದ್ದನು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕ ನಾಗೇಶ್ ತುರ್ತು ಚಿಕಿತ್ಸೆಗಾಗಿ 1 ಲಕ್ಷ 25 ಸಾವಿರ ಹಣವನ್ನು ಶಾಸಕರು ನೀಡಿ ಮಾನವೀಯತೆ ಮೆರೆದಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ದುಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದ ನಾಗೇಶ್ ಕುಟುಂಬ ಹಣದ ಕೊರತೆಯಿಂದ ಚಿಕಿತ್ಸೆ ಪಡೆಯಲಾಗದೆ ಕಣ್ಣೀರು ಹಾಕುತ್ತಿತ್ತು. ಈ ವಿಚಾರ ಶಾಸಕರ ಗಮನಕ್ಕೆ ಬಂದಿದ್ದು, ಯುವಕನ ಸಂಕಷ್ಟಕ್ಕೆ ಸಹಾಯ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *