‘ಕೈ’ ಪಡೆಯಿಂದಲೇ ಕಾಂಗ್ರೆಸ್ ಹಣಿಯಲು ಬಿಜೆಪಿ ಸಿದ್ಧತೆ!

Public TV
1 Min Read

-‘ಗಣಿ’ ಕೋಟೆ ವಶಕ್ಕೆ ಬಿಜೆಪಿ ರಣತಂತ್ರ…!

ಬಳ್ಳಾರಿ: ಕಾಂಗ್ರೆಸ್ ಸಂಸದ ಉಗ್ರಪ್ಪರಿಗೆ ಬ್ರೇಕ್ ಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಮುಳ್ಳನ್ನ ಮುಳ್ಳನಿಂದಲೇ ತಗೆಯುವ ಹಾಗೆ ಕಾಂಗ್ರೆಸ್ನವರನ್ನ ಕಾಂಗ್ರೆಸನವಂರಿದಲೇ ಸೋಲಿಸಲು ಬಿಜೆಪಿ ಬಲೆ ಹೆಣಿದಿದೆಯಂತೆ. ಇದಕ್ಕಾಗಿ ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾದವರನ್ನೇ ಕಣಕ್ಕೆ ಇಳಿಸಿ ಕೈ ಸಂಸದರನ್ನ ಸೋಲಿಸಲು ಬಿಜೆಪಿ ಇದೀಗ ಮುಂದಾಗಿದೆ ಎಂಬ ಮಾತುಗಳು ಗಣಿ ನಾಡಿನಲ್ಲಿ ಕೇಳಿ ಬರುತ್ತಿವೆ.

2008ರಲ್ಲಿ ಜನಾರ್ದನ ರೆಡ್ಡಿ – ಶ್ರೀರಾಮುಲು ಕಾಂಗ್ರೆಸ್ ಕೋಟೆ ಕೆಡವಿ ಬಳ್ಳಾರಿಯಲ್ಲಿ ಬಿಜೆಪಿ ಕೋಟೆಯನ್ನು ಭದ್ರಗೊಳಿಸಿದ್ದರು. ಉಪ ಚುನಾವಣೆಯಲ್ಲಿಯೂ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ರಾಜಕೀಯ ತಂತ್ರದಿಂದ ಕಾಂಗ್ರೆಸ್‍ನ ಉಗ್ರಪ್ಪ ಸ್ಪರ್ಧಿಸಿ ಭರ್ಜರಿ ಗೆಲುವಿನೊಂದಿಗೆ ತನ್ನ ಕೋಟೆಯನ್ನು ಮರು ವಶಕ್ಕೆ ಪಡೆಯಿತು. ಇದೀಗ ಬಿಜೆಪಿ ಮತ್ತೆ ಬಳ್ಳಾರಿ ಕೋಟೆಗೆ ಲಗ್ಗೆ ಇಡಲು ಕಾಂಗ್ರೆಸ್‍ನವರ ಮೂಲಕವೇ ಕಾಂಗ್ರೆಸ್ ಸಂಸದರನ್ನು ಸೋಲಿಸಲು ರಣತಂತ್ರ ರೂಪಿಸಿದೆ. ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಗಳಾಗಿದ್ದ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಹಾಗೂ ಜಾರಕಿಹೊಳಿ ಸಂಬಂಧಿ ದೇವೇಂದ್ರಪ್ಪರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ ಹಾಕಲು ಮುಂದಾಗಿದೆ.

ಸಚಿವ ಡಿ.ಕೆ ಶಿವಕುಮಾರ್ ಅವರ ಪರಮ ವೈರಿಯಾಗಿರುವ ಜಾರಕಿಹೊಳಿ ಸಹೋದರರ ಬೀಗರನ್ನ ಬಿಜೆಪಿ ಅಭ್ಯರ್ಥಿಯಾಗಿಸಲು ಬಿಜೆಪಿ ಮುಂದಾಗಿದೆ. ಸಚಿವ ಸತೀಶ್ ಜಾರಕಿಹೊಳಿಯ ಸಹೋದರಿಯ ಮಾವನಾದ ದೇವೇಂದ್ರಪ್ಪ ಸಹ ಬಿಜೆಪಿ ಟಿಕೆಟ್ ಆಕ್ಷಾಂಕಿಯಾಗಿರುವುದು ಕೈ ನಾಯಕರಿಗೆ ಬಿಸಿ ತುಪ್ಪವಾಗಿದೆ.

ಗಣಿ ಕೋಟೆ ಬಳ್ಳಾರಿಯನ್ನು ಮತ್ತೆ ತಮ್ಮ ವಶಕ್ಕೆ ಪಡೆಯಲು ಕಾಂಗ್ರೆಸ್ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಇಲ್ಲವೇ ಜಾರಕಿಹೊಳಿ ಬೀಗರಾದ ದೇವೇಂದ್ರಪ್ಪರಿಗೆ ಟಿಕೆಟ್ ಕೊಟ್ಟು ಅಖಾಡಕ್ಕಿಳಿಸುವುದೇ ಸೂಕ್ತ ಎನ್ನುವುದು ಬಿಜೆಪಿ ವಾದವಾಗಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ವಿಚಾರ ಫೈನಲ್ ಆಗಲಿದೆ. ಅಧಿಕಾರದ ದಾಹಕ್ಕೆ ಪಕ್ಷ ಪ್ರೇಮವನ್ನೇ ಮರೆತು ರಾಜಕೀಯ ಶತ್ರುಗಳೆಲ್ಲಾ ಮಿತ್ರರಾಗೋದು ಅಚ್ಚರಿ ಏನಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *