– ನಮ್ಮ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ
ಬೆಂಗಳೂರು: ಬಿಜೆಪಿ (BJP) ನಾಯಕರು ರಾಜ್ಯದಲ್ಲಿ ಬೊಗಳೋದು ಬಿಟ್ಟು ದೆಹಲಿಗೆ (Delhi) ಹೋಗಿ ಬೊಗಳಲಿ ಎಂದು ಸಚಿವ ಎನ್‌ಎಸ್ ಬೋಸರಾಜು (NS Boseraju) ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾತಿಗಣತಿಗೆ ದಸರಾ ರಜೆ ವಿಸ್ತರಣೆ ಮಾಡಿರೋದಕ್ಕೆ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಕಾಂಪಿಟೇಷನ್ ಮೇಲೆ ಟೀಕೆ ಮಾಡುತ್ತಿದ್ದಾರೆ. ಜನರು ಸಂತೋಷದಿಂದ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿಯವರು ಮಾತ್ರ ಸಮೀಕ್ಷೆ ವಿರೋಧಿಸುತ್ತಿದ್ದಾರೆ. ರಾಜ್ಯದಲ್ಲಿ ನೆರೆ ಬಂದಿದೆ. ಕೇಂದ್ರ ಪರಿಹಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ಸಿಎಂ ವೈಮಾನಿಕ ಸಮೀಕ್ಷೆ ಮಾಡಿದ್ರೂ ವಿರೋಧ ಮಾಡುತ್ತಾರೆ. ಪ್ರವಾಹ ಬಂದಾಗ ರಸ್ತೆ ಮೂಲಕ ಸಮೀಕ್ಷೆ ಮಾಡಲು ಆಗುತ್ತಾ? ಮೋದಿ ಏನು ರಸ್ತೆ ಮೂಲಕ ನೆರೆ ಸಮೀಕ್ಷೆ ಮಾಡ್ತಾನಾ? ಅಂತ ಮೋದಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು. ಇದನ್ನೂ ಓದಿ: ಸಮೀಕ್ಷೆಗಾಗಿ ದಸರಾ ರಜೆ ವಿಸ್ತರಣೆ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟ: ನಿಖಿಲ್
ಬಿಜೆಪಿಯವರು ಇಲ್ಲಿ ಬೊಗಳೋದು ಬಿಟ್ಟು ದೆಹಲಿಗೆ ಹೋಗಿ ಬೊಗಳಬೇಕು. ಇವರಿಗೆ ಏನಾದ್ರೂ ನೀತಿ ನಿಯಮ ಇದೆಯಾ? ಬಿಜೆಪಿಯವರು ಬರೀ ಡ್ರಾಮ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 6 ಮಂದಿ ಸಜೀವ ದಹನ
ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲಾ ಸೃಷ್ಟಿ ಮಾಡುವವರು ಬಿಜೆಪಿಯವರು. ಸತೀಶ್ ಜಾರಕಿಹೊಳಿಯವರ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಯತ್ನಾಳ್ ಅವರು ವಿಜಯೇಂದ್ರ ಕಳ್ಳ ಎಂದು ಹೇಳಿದ್ದಾರೆ. ನಮ್ಮಲ್ಲಿ ಹೈಕಮಾಂಡ್ ಏನು ಹೇಳುತ್ತೋ ಅದೇ ಆಗುತ್ತೆ. ಸಿಎಂ, ಡಿಸಿಎಂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸಿಎಂ ಬದಲಾವಣೆ ಅಂತಾ ನೂರು ಸಾರಿ ಬಿಜೆಪಿಯವರು ಬೊಗಳುತ್ತಾರೆ. ಡೇಟ್ ಮೇಲೆ ಡೇಟ್ ಕೊಟ್ಟು ಬಿಜೆಪಿಯವರೇ ಹೇಳುತ್ತಿದ್ದಾರೆ. ದಸರಾ ಉದ್ಘಾಟನೆ ಮಾಡಲ್ಲ ಅಂತಾ ಬಿಜೆಪಿಯವರೇ ಹೇಳಿದ್ರು. ಬಿಜೆಪಿಯವರಿಗೇನು ನೀತಿನಿಯಮ ಇದೆಯಾ ಎಂದು ಕಿಡಿಕಾರಿದರು. ಇದನ್ನೂ ಓದಿ: ದಾವಣಗೆರೆ | ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ
ವಿಜಯೇಂದ್ರ ಲೂಟಿ ಮಾಡಿ ಸಾವಿರ ಕೋಟಿ ಇಟ್ಕೊಂಡು ಸರ್ಕಾರ ಬೀಳಿಸ್ತಾನೆ ಅಂತಾ ಯತ್ನಾಳ್ ಹೇಳಿದ್ದಾರೆ. ಮೊದಲು ಬಿಜೆಪಿಯವರು ಅವರ ಮನೆ ಸರಿಪಡಿಸಿಕೊಳ್ಳಲಿ. ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕವಿದೆ ಎಂದು ಗುಡುಗಿದರು. ಇದನ್ನೂ ಓದಿ: Bengaluru| ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಮಿನಿ ಟ್ರಕ್