ಬೀದರ್: ಜಿಲ್ಲೆಯ ಬಿಜೆಪಿ ಮುಖಂಡರು ಬೀದರ್‌ನಾದ್ಯಂತ ಸಂಚರಿಸಿ ಅತೀವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿಯನ್ನು ವೀಕ್ಷಿಸಿದರು. ಈ ವೇಳೆ ಶಾಸಕ ಪ್ರಭು ಚವ್ಹಾಣ್ (Prabhu Chauhan) ಬೆಳೆ ಹಾನಿಯ ಬಗ್ಗೆ ವಿವರಣೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ನೇತೃತ್ವದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಯಿತು. ಕೌಠಾ(ಬಿ) ಗ್ರಾಮದಲ್ಲಿ ಹಾನಿಯಾದ ಕೃಷಿಭೂಮಿಗಳಿಗೆ ಟ್ರಾಕ್ಟರ್ ಮೂಲಕ ತೆರಳಿ ಹಾನಿಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಬೆಳೆಹಾನಿಯ ಬಗ್ಗೆ ಶಾಸಕ ಪ್ರಭು ಚವ್ಹಾಣ್ ಅವರು, ಔರಾದ(ಬಿ) ಕ್ಷೇತ್ರದಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ಸಾವಿರಾರು ಎಕರೆಯಷ್ಟು ಬೆಳೆ ಹಾನಿಯಾಗಿದೆ. ಇಲ್ಲಿನ ಬಹುತೇಕ ರೈತರು ಉಪಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಬೆಳೆದು ನಿಂತಿದ್ದ ಉದ್ದು, ಹೆಸರು, ಸೋಯಾಬೀನ್, ತೊಗರಿ, ಹತ್ತಿ, ಕಬ್ಬು ಸೇರಿದಂತೆ ಎಲ್ಲ ಬೆಳೆಗಳು ಮುಳುಗಡೆಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಟ್ರಂಪ್ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ
ನಮ್ಮೂರಿನ ಎಲ್ಲ ಕಡೆಗಳಲ್ಲಿ ಬೆಳೆ ನಷ್ಟವಾಗಿದೆ. ನದಿ ತೀರದಲ್ಲಿ ಅತೀ ಹೆಚ್ಚು ಹಾಳಾಗಿದ್ದು, ಎಲ್ಲ ಹೊಲಗಳು ಸಂಪೂರ್ಣ ಮುಳುಗಡೆಯಾಗಿವೆ. ಮಳೆಗಾಲದ ಆರಂಭದಲ್ಲಿ ಎಲ್ಲ ಬೆಳೆಗಳು ಚೆನ್ನಾಗಿದ್ದವು. ಹಾಗಾಗಿ ರೈತರು ಈ ಬಾರೀ ಹೆಚ್ಚಿನ ಲಾಭ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಅನಿರೀಕ್ಷಿತವಾಗಿ ಸುರಿದ ಧಾರಾಕಾರ ಮಳೆಗೆ ಎಲ್ಲ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಬೇಗ ಪರಿಹಾರ ಕೊಡಲು ತಾವು ಸಹಕರಿಸಬೇಕು ಎಂದು ಮನವಿ ಮಾಡಿದರು.