ಪಶುಸಂಗೋಪನಾ ಇಲಾಖೆಯ 2 ಎಕರೆ ಜಮೀನು ಅಲ್ಪಸಂಖ್ಯಾತರಿಗೆ – ಸರ್ಕಾರದ ನಡೆಗೆ ವಿರೋಧ

Public TV
2 Min Read

ಬೆಂಗಳೂರು: ಚಾಮರಾಜಪೇಟೆಯಲ್ಲಿ ಪಶುಸಂಗೋಪನಾ ಇಲಾಖೆಯ 2 ಎಕರೆ ಜಮೀನನ್ನು ಅಲ್ಪಸಂಖ್ಯಾತರಿಗೆ ನೀಡಿದ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಜ್ಯ ವಕ್ಫ್‌ ಬೋರ್ಡ್‌ನ ನೂರಾರು ಎಕರೆ ಜಮೀನು ಬೆಂಗಳೂರಿನಲ್ಲಿ ಇದೆ. ಆದರೂ ಪಶುಸಂಗೋಪನಾ ಇಲಾಖೆಯ ಜಮೀನನ್ನು ಅಲ್ಪಸಂಖ್ಯಾತರಿಗೆ ನೀಡಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಹಿಂದೂಪರ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.

ಚಾಮರಾಜಪೇಟೆಯ 2 ಎಕರೆ ಪಶುಸಂಗೋಪನೆ ಇಲಾಖೆಯ ಜಮೀನು ಅಲ್ಪಸಂಖ್ಯಾತ ಇಲಾಖೆಯ ಅಲ್ಪಸಂಖ್ಯಾತ ಶಾಲೆ ನಿರ್ಮಾಣ ಮಾಡಲು ನೀಡುವುದು ಖಂಡನೀಯವಾಗಿದೆ. ಇದು ಒಂದು ರೀತಿಯ land jihad. ನಾಗರಿಕರು ಜಾಗೃತರಾಗಿ. ನಗರದಲ್ಲಿ ಬಿಡಾಡಿ ದನಗಳ ಚಿಕಿತ್ಸೆಗೆ ಯೋಗ್ಯ‌ ಚಿಕಿತ್ಸಾಲಯ ಇಲ್ಲ. ಪಶು ಇಲಾಖೆಯ ಚಿಕಿತ್ಸಾಲಯ ಉಳಿಸಿ, ಒಂದೇ ಸಮುದಾಯದ ಶಾಲೆಯನ್ನು ವಿರೋಧಿಸಿ ಎಂದು ಹಿಂದೂ ಸಂಘಟನೆಯ ಮೋಹನ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಆರೋಪ; ಪೊಲೀಸರಿಂದ ನಾಸೀರ್‌ ಹುಸೇನ್‌ ಬೆಂಬಲಿಗನ ವಿಚಾರಣೆ

ಸರ್ಕಾರದ ನಡೆಗೆ ವಿಪಕ್ಷಗಳು ಸಹ ವಿರೋಧ ವ್ಯಕ್ತಪಡಿಸಿವೆ. ಈ ಕುರಿತು ಮಾತನಾಡಿರುವ ವಿಪಕ್ಷ ನಾಯಕ ಆರ್‌.ಅಶೋಕ್‌, ಛಲವಾದಿ ಪಾಳ್ಯದ 2 ಎಕರೆ ಭೂಮಿ ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾವಣೆ ಪ್ರಕರಣವು ಅಲ್ಪಸಂಖ್ಯಾತರ ಓಲೈಕೆಯನ್ನು ಸರ್ಕಾರ ಮುಂದುವರಿಸಿದೆ. ಸರ್ಕಾರದ ಬೇರೆ ಬೇರೆ ಇಲಾಖೆಗಳ ಜಾಗವನ್ನು ಅಲ್ಪಸಂಖ್ಯಾತರಿಗೆ ಸರ್ಕಾರ ಕೊಡುತ್ತಿದೆ. ಸರ್ಕಾರ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಹೋರಾಟದ ಎಚ್ಚರಿಕೆ
500 ಕೋಟಿ ಬೆಲೆ ಬಾಳುವ ಭೂಮಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ಕೊಟ್ಟಿದೆ. ಪಶುಸಂಗೋಪನಾ ಇಲಾಖೆ ಆಸ್ತಿ ಇದು. ಅಲ್ಪಸಂಖ್ಯಾತರ ಇಲಾಖೆಗೆ ಗತಿ ಇಲ್ವಾ? ವಕ್ಫ್ ಮಂಡಳಿ ಮೂಲಕ ಕೋಟ್ಯಂತರ ಆಸ್ತಿ ಲಪಟಾಯಿಸಲಾಗಿದೆ. ಅದು ಸಾಲದು ಅಂತಾ ಈಗ ಪಶುಸಂಗೋಪನಾ ಇಲಾಖೆ ಆಸ್ತಿ ಮೇಲೂ ಕಣ್ಣು ಹಾಕಿದ್ದಾರೆ. ದೇವಾಲಯಗಳ ಹುಂಡಿಗಳ ಮೇಲೆ ಕಣ್ಣು ಹಾಕಿದ್ದಾಯ್ತು. ಎಲ್ಲ ಆಸ್ತಿಯನ್ನೂ ಅಲ್ಪಸಂಖ್ಯಾತರಿಗೇ ಬರೆದುಕೊಟ್ಬಿಡಿ. ಅಲ್ಪಸಂಖ್ಯಾತರ ಜನಸಂಖ್ಯೆ ಜಾಸ್ತಿ ಇದೆ ಅಂತ ಎಲ್ಲವನ್ನೂ ಕೊಟ್ಬಿಡ್ತೀರಾ? ಅಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ ಇದೆ, ಅದನ್ನೂ ಕೊಟ್ಬಿಡ್ತೀರಾ? ಈ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟ ಮಾಡಲಿದೆ. ನಾವು ಇದನ್ನ ಇಲ್ಲಿಗೇ ಬಿಡೋದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರು ಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಚಾಲನೆ

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಶಾಸಕ ಸುನೀಲ್‌ ಕುಮಾರ್‌, ಗೋಹತ್ಯೆ ನಿಷೇಧ ಕಾಯಿದೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿಕೆ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದ ಪಶುಸಂಗೋಪನಾ ಸಚಿವರು, ಪಶುಚಿಕಿತ್ಸಾಲಯದ ಜಾಗವನ್ನು ಮುಸಲ್ಮಾನರ ಶ್ರೇಯೋಭಿವೃದ್ಧಿಗೆ ದಾನ ಮಾಡಿದ್ದಾರೆ. ಜಾಗ ಕೇಳಿದ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್‌ಗೂ ದಾನ ಮಾಡಲು ಒಪ್ಪಿದ ಪಶುಸಂಗೋಪನಾ ಖಾತೆ ಸಚಿವರಿಗೂ ಯಾವ ಪ್ರಶಸ್ತಿ ಕೊಡಬೇಕು? ಪಾಕಿಸ್ತಾನ್ ಜಿಂದಾಬಾದ್ ಎಂದವರ ನಡಮುರಿಯುವ ತಾಕತ್ ಇಲ್ಲದ ಈ ಸರ್ಕಾರಕ್ಕೆ ಇಷ್ಟು ಬಹಿರಂಗವಾಗಿ ಮುಸ್ಲಿಂ ಓಲೈಕೆ ಮಾಡಲು ಲಜ್ಜೆ ಕಾಡುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Share This Article