ರಾಜ್ಯ ಬಿಜೆಪಿ ಐಸಿಯುನಲ್ಲಿದೆ, ಹೀಗೆ ಬಿಟ್ರೆ ಕೋಮಾಗೆ ಹೋಗುತ್ತೆ: ರಾಜುಗೌಡ

Public TV
1 Min Read

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ (BJP) ಐಸಿಯುನಲ್ಲಿದೆ. ಹೀಗೆ ಬಿಟ್ಟರೆ ಕೋಮಾ ಸ್ಥಿತಿ ತಲುಪುತ್ತದೆ ಎಂದು ಬಿಜೆಪಿ ನಾಯಕ ರಾಜುಗೌಡ (Rajugowda) ಹೇಳಿದ್ದಾರೆ.

ದಾವಣಗೆರೆಯ ವಾಲ್ಮೀಕಿ ಮಠದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಮ್ಮಲ್ಲಿ ಬಣ ಇರೋದು ಸ್ಪಷ್ಟ, ನಾವು ಬಣ ಇಲ್ಲ ಎಂದು ಹೇಳೋಕೆ ಆಗೊಲ್ಲ. ಎಷ್ಟೋ ಮಹನೀಯರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಇದೇ ರೀತಿ ಕಿತ್ತಾಟ ಮುಂದುವರೆದರೆ ಪಕ್ಷ ಹೀನಾಯ ಸ್ಥಿತಿಗೆ ಹೋಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಸ್ಕೂಟರ್‌ಗೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ – ಪತಿ, ಪತ್ನಿ ಸ್ಥಳದಲ್ಲೇ ಸಾವು

ಹೈಕಮಾಂಡ್ ಮಧ್ಯಪ್ರವೇಶಿಸಿ ಆದಷ್ಟು ಬೇಗ ತಿಳಿಗೊಳಿಸಬೇಕು. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ. ಯಾರು ಹೈಕಮಾಂಡ್ ಮುಂದೆ ದೊಡ್ಡವರಲ್ಲ. ಹೈಕಮಾಂಡ್ ಮಧ್ಯ ಪ್ರವೇಶಿಸಬೇಕು. ಜೆಪಿ ನಡ್ಡಾ, ಅಮಿತ್‌ ಶಾ ಆದಷ್ಟು ಬೇಗ ಎಂಟ್ರಿಯಾಗಿ ಪರಿಸ್ಥಿತಿ ತಿಳಿಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿಗೆ ಉಳಿಗಾಲ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಡಿಕೇರಿಯಲ್ಲಿ 2 ಲೀಟರ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ನಿಷೇಧ

Share This Article