ಮಕ್ಕಳು ಕುಡಿಯೋ ಹಾಲಿಗೂ ಬೆಲೆ ಜಾಸ್ತಿ, ಕೂಲಿ ಮಾಡಿ ಕುಡಿಯಲು ಹೋದ್ರೂ ಬೆಲೆ ಜಾಸ್ತಿ: ಆರ್.ಅಶೋಕ್ ಕಿಡಿ

Public TV
1 Min Read

ಕೋಲಾರ: ಮಕ್ಕಳಿಗೆ ಹಾಲು (Nandini Milk Price Hike) ಕುಡಿಸಲು ಹೋದ್ರೂ ಬೆಲೆ ಜಾಸ್ತಿಯಾಗಿದೆ. ಸಂಜೆ ಕೂಲಿ ಕೆಲಸ ಮಾಡಿ ಆಯಾಸವಾಗಿದೆ ಎಂದು ಕುಡಿಯಲು ಹೋದ್ರೂ ಅದರ ಬೆಲೆ ಸಹ ಜಾಸ್ತಿ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ (Kolar) ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಮಾತನಾಡಿದರು. ಈ ವೇಳೆ ಸಾಹುಕಾರರು ಕುಡಿಯುವ ಎಣ್ಣೆ ಬೆಲೆ ಕಡಿಮೆ ಮಾಡಿದ್ದಾರೆ. ಬಡವರಿಗೆ ನಿಮ್ಮ ಮನೆಯವರಿಗೆ 2000 ರೂ. ಹಣ ಕೊಟ್ಟು, ಎಣ್ಣೆ ಕಡೆಯಿಂದ ಕಿತ್ತು ಕೊಳ್ಳುತ್ತಿದ್ದಾರೆ. ಏನಾದ್ರೂ ಕೇಳಿದ್ರೆ ಹಣ ಕೊಡ್ತಾ ಇಲ್ವಾ ಎನ್ನುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆವರು ಸುರಿಸದೇ ಜೀವನ ಮಾಡುವವರು ಸ್ವಾಮೀಜಿಗಳು: ರಾಜಣ್ಣ ಕಿಡಿ

ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್ (D.K Shivakumar) ಅವರು ಜೋಡೆತ್ತುಗಳು ಎಂದು ಕುಮಾರಣ್ಣ ಅವರ ಕೈ ಎತ್ತಿದ್ದರು. ಈಗ ಸಿದ್ದರಾಮಯ್ಯ (Siddaramaiah) ಅವರ ಕೈ ಎತ್ತಿದ್ದಾರೆ. ಅವರನ್ನು ಮುಗಿಸುತ್ತಾರೆ. ಈಗಾಗಲೇ ಸ್ವಾಮೀಜಿ ಹೇಳಿದ್ದಾರೆ. ಹೀಗೆ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್‍ನವರು ಅಭಿವೃದ್ಧಿ ಎಂದು ಹೇಳುತ್ತಾರೆ, ಯಾರ ಅಭಿವೃದ್ಧಿ ರಾಹುಲ್ ಗಾಂಧಿ ಅಭಿವೃದ್ಧಿನಾ? ಇನ್ನೂ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅವರು ಅಮಾಯಕರು ಜೇನು ಕಿತ್ತವನು ಕೈ ನೆಕ್ಕಿದ್ದಾನೆ. ಅದರಲ್ಲಿ ಮುಖ್ಯವಾಗಿ ಹಣ ತಿಂದಿರುವುದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಬಳಿ ಇತ್ತಂತೆ 15 ಸಿಮ್- ಸಂತ್ರಸ್ತೆಯರಿಗೆ ನಗ್ನರಾಗುವಂತೆ ಬೆದರಿಕೆ!

Share This Article