ಕೈ ನಾಯಕರಿಗೆ ರಾಮನ ಮೇಲಿನ ಭಕ್ತಿಗಿಂತ, ಹೈಕಮಾಂಡ್ ಮೇಲಿನ ಭಯವೇ ಜಾಸ್ತಿ: ಅಶೋಕ್‌ ವ್ಯಂಗ್ಯ

By
1 Min Read

ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದ ನಾಯಕರಿಗೆ ರಾಮನ (Rama) ಮೇಲಿನ ಭಕ್ತಿಗಿಂತ ಹೈಕಮಾಂಡ್ (High Command) ಮೇಲಿನ ಭಯವೇ ಜಾಸ್ತಿ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ (R Ashok) ಹೇಳಿದ್ದಾರೆ.

ಹೈಕಮಾಂಡ್ ಹೇಳಿದರೆ ಮಾತ್ರ ರಾಮ ಮಂದಿರಕ್ಕೆ ಹೋಗುತ್ತೇವೆ ಎಂಬ ಗೃಹ ಸಚಿವ ಪರಮೇಶ್ವರ್‌ (Paraneshwar) ಹೇಳಿಕೆಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು ರಾಮಮಂದಿರದ ಬಗ್ಗೆ ಒಳ್ಳೆಯ ಮಾತನಾಡದಿದ್ದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುವ ಭಯ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್‌ ಜೋಶಿ

ರಾಮಮಂದಿರದ ಬಗ್ಗೆ ಒಳ್ಳೆಯ ಮಾತಾಡಿದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಕುರ್ಚಿಗೆ ಕುತ್ತು ಬರುವ ಭಯ. ಒಟ್ಟಿನಲ್ಲಿ ಎಡಬಿಡಂಗಿ ಕಾಂಗ್ರೆಸ್‌ ನಾಯಕರ ಪಾಡು ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್‌

 

ಪರಮೇಶ್ವರ್‌ ಹೇಳಿದ್ದೇನು?
ಹೈಕಮಾಂಡ್ ಈಗಾಗಲೇ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ನಿಲುವು ತೆಗೆದುಕೊಂಡಿದೆ. ಒಂದು ವೇಳೆ ಜನವರಿ 22 ನಂತರ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾವು ಹೋಗುತ್ತೇವೆ.

ಎಲ್ಲವನ್ನೂ ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯಬೇಕು. ಅವರು ಹೋಗುವುದು ಬೇಡ ಎಂದು ಹೇಳಿದಾಗ ನಾವು ಅದರ ವಿರುದ್ದ ನಿಲುವು ‌ತೆಗೆದುಕೊಳ್ಳಲು ಆಗುವುದಿಲ್ಲ. ಹೈಕಮಾಂಡ್ ಹೇಳಿದರೆ ಮಾತ್ರ ಹೋಗುತ್ತೇವೆ ಎಂದು ಹೇಳಿದ್ದರು.

 

Share This Article