ನಾಯಕತ್ವ, ಸಂಘಟನೆ ಒಟ್ಟಿಗೆ ಹೋದ್ರೆ ಮಾತ್ರ ಯಶಸ್ಸು ಸಾಧ್ಯ- ಈಶ್ವರಪ್ಪ

Public TV
1 Min Read

ಬೆಳಗಾವಿ: ನಾಯಕತ್ವ ಹಾಗೂ ಸಂಘಟನೆ ಎರಡೂ ಒಟ್ಟಿಗೆ ಮಾತ್ರ ನಾವು ಯಶಸ್ಸು ಕಾಣಲು ಸಾಧ್ಯ ಎಂದು ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ 5 ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಮತ್ತು ಸಂಘಟನೆ ಕುರಿತು ಎಲ್ಲಾ ರಾಜ್ಯಗಳಲ್ಲೂ ಕೂಡ ಒಟ್ಟಿಗೆ ಕೂತು ಅಭ್ಯರ್ಥಿ ಆಯ್ಕೆ ಹಾಗೂ ಪ್ರಚಾರದ ವೈಖರಿ ಕುರಿತು ಎಲ್ಲಾ ಜಾತಿ ವರ್ಗಗಳನ್ನು ಜೊತೆ ಜೋಡಿಸಿಕೊಂಡು ಚರ್ಚೆ ಮಾಡಬೇಕಾಗಿದೆ. ಇಂದಿನ ಫಲಿತಾಂಶ ನೋಡಿದ್ರೆ ಈ ಎಲ್ಲಾ ವಿಚಾರದಲ್ಲಿಯೂ ಸ್ವಲ್ಪ ಹಿಂದೆ ಬಿದ್ವಾ ಅನ್ನೋ ಅನುಮಾನ ಮೂಡುತ್ತಿದೆ ಅಂದ್ರು.

ಒಟ್ಟಾರೆ ನಾಯಕತ್ವ ಮತ್ತು ಸಂಘಟನೆ ಎರಡೂ ಒಟ್ಟಿಗೆ ಸರಿಯಾಗಿ ಹೋದಾಗ ಖಂಡಿತ ನಮಗೆ ಅನುಕೂಲ ಆಗುತ್ತದೆ. ಬರೀ ನಾಯಕತ್ವ ಅಥವಾ ಬರೀ ಸಂಘಟನೆ. ಎರಡೂ ಕೂಡ ಉಪಯೋಗವಾಗಲ್ಲ. ನಾಯಕತ್ವ ಮತ್ತು ಸಂಘಟನೆ ಎರಡೂ ಒಟ್ಟಾಗಿ ಹೋದ್ರೆ ಮಾತ್ರ ಚುನಾವಣೆಗಳು ಯಶಸ್ಸು ಆಗುತ್ತೆ ಅಂತ ಈ ಫಲಿತಾಂಶ ನೋಡಿ ಅರಿವಿಗೆ ಬಂದಿದೆ ಎಂದು ತಿಳಿಸಿದ್ರು.

ಇದು ಮೋದಿ ಹಾಗೂ ಅಮಿತ್ ಶಾ ಹಿನ್ನಡೆ ಅಲ್ಲ. ಎಲ್ಲಾ ವಿಚಾರಗಳಲ್ಲೂ ಕೂಡ ಒಟ್ಟಿಗೆ ಕೂತು ಚರ್ಚೆ ಮಾಡಿ, ಸಂಘಟನೆ ಬೆಳೆಸುತ್ತಾ ಬೆಳೆಸುತ್ತಾ ಅಭ್ಯರ್ಥಿಗಳ ಆಯ್ಕೆಯ ಜೊತೆ ಜೊತೆಗೆ ಎಲ್ಲಾ ವರ್ಗದ ಜನರನ್ನು ಜೊತೆಗೆ ತೆಗೆದುಕೊಂಡು ಹೋಗುವುದರಲ್ಲಿ ಎಲ್ಲೋ ಎಡವಿದ್ದೇವೆ ಅನಿಸುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡು ಹಿಡಿಯುತ್ತೇವೆ ಅಂತ ಹೇಳಿದ್ರು.

ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ತೆಲಂಗಾಣ ಹಾಗೂ ಛತ್ತೀಸ್‍ಗಢ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ರಾಜಸ್ಥಾನ ಮತ್ತು ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಇದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *