ಕಾಂಗ್ರೆಸ್‍ಗೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುವ ನೈತಕತೆ ಇಲ್ಲ: ಸಿ.ಟಿ.ರವಿ

Public TV
1 Min Read

ಕಲಬುರಗಿ: ಕಾಂಗ್ರೆಸ್‍ಗೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುವ ನೈತಿಕತೆ ಇಲ್ಲ ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಸಿ.ಟಿ.ರವಿ, ರಾಜ್ಯದ ಮೂರು ಮಹಾನಗರಪಾಲಿಕೆಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ಚುನಾವಣೆಗಳು ಬಂದಾಗ ಸಿದ್ಧರಾಮಯ್ಯನವರು ರೆಸ್ಟ್ ಮಾಡಲು ಹೋಗುವುದಲ್ಲದೇ ಅಲ್ಲಿಂದ ಕೆಲವು ಸಂದೇಶಗಳನ್ನು ಕೊಡುತ್ತಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಗೆಲ್ಲಬಾರದು ಎಂದು ಈಗ ಸದ್ಯ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದು, ಈಗ ಮತ್ತೆ ಅವರು ಇದನ್ನೇ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಪ. ಜಾತಿ, ಪಂಗಡದವರ ಮೇಲಿನ ದೌರ್ಜನ್ಯ – ಬಾಕಿ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ ವಹಿಸಲು ಸಿಎಂ ಸೂಚನೆ

ಕೆಲವೊಮ್ಮೆ ಸಿದ್ಧರಾಮಯ್ಯನವರೇ ನೇರವಾಗಿ ಸಂದೇಶ ಕೊಡ್ತಾರೆ. ಕೆಲವೊಮ್ಮೆ ಹಿಂಬಾಲಕರ ಮೂಲಕ ಸಂದೇಶ ರವಾನಿಸುತ್ತಾರೆ. ಆದರೆ ಈ ಬಾರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಗೆಲ್ಲಬಾರದೆಂಬ ಸಂದೇಶ ನೀಡಿದ್ದಾರೆ ಎಂದು ಹೇಳಿದರು. ಕಳೆದ 20 ವರ್ಷದಿಂದ ಕಾಂಗ್ರೆಸ್ ಪಕ್ಷ ಹೊಸ ಅಧ್ಯಕ್ಷರ ಹುಡುಕಾಟದಲ್ಲಿ ನಿರತವಾಗಿದೆ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಿಗೆ ಇನ್ನೂ ಕೂಡ ತಂಡ ಕಟ್ಟಿಕೊಳ್ಳೋಕೆ ಆಗ್ತಿಲ್ಲ, ಪಕ್ಷದ ತಂಡವನ್ನೇ ಕಟ್ಟಿಕೊಳ್ಳೊಕ್ಕೆ ಆಗದಿರೋರು ಅಧಿಕಾರಕ್ಕೆ ಬರಲು ಹಗಲುಗನಸು ಕಾಣುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಭಾರತದಲ್ಲಿರೋದು ಬ್ರಿಟಿಷರ ಗುಲಾಮಗಿರಿ ಎಜುಕೇಶನ್ ಸಿಸ್ಟಮ್: ರಿಷಬ್ ಶೆಟ್ಟಿ ಆಕ್ರೋಶ

Share This Article
Leave a Comment

Leave a Reply

Your email address will not be published. Required fields are marked *