ಶಿವರಾಮೇಗೌಡ ಎಡಬಿಡಂಗಿ, ಈಗ ಕಾಂಗ್ರೆಸ್ ಸೇರಿದ್ದಾರೆ: ಅಶ್ವಥ್ ನಾರಾಯಣ್

By
1 Min Read

ಬೆಂಗಳೂರು: ಶಿವರಾಮೇಗೌಡ (Shivaramegowda) ಎಡಬಿಡಂಗಿಯಾಗಿ ಡಿ.ಕೆ ಶಿವಕುಮಾರ್ (D.K Shivakumar) ಮತ್ತು ದೇವರಾಜೇಗೌಡ ಮಧ್ಯೆ ಕೂತಿದ್ದಾರೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್‍ನಾರಾಯಣ್ (Ashwath Narayan) ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಜಿ ಸಂಸದ ಶಿವರಾಮೇಗೌಡರನ್ನು ಪೆನ್‍ಡ್ರೈವ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರ ಬಳಿ ಸಂಧಾನಕ್ಕೆ ಕಳಿಸಿದ್ದರು ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ, ಶಿವರಾಮೇಗೌಡ ಎಡಬಿಡಂಗಿಯಾಗಿ ಡಿಕೆಶಿ ಹಾಗೂ ದೇವರಾಜೇಗೌಡರ ಮಧ್ಯೆ ಕುಳಿತಿದ್ದಾರೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿಸಿಎಂ ಡಿಕೆಶಿಯನ್ನು ಕೂಡಲೇ ಕ್ಯಾಬಿನೆಟ್‌ನಿಂದ ಕೈಬಿಡಬೇಕು : ಹೆಚ್‌ಡಿಕೆ ಆಗ್ರಹ

ಶಿವರಾಮೇಗೌಡ ಅವರು ಈಗ ಬಿಜೆಪಿ ತೊರೆದಿದ್ದಾರೆ. ಮೊದಲ ಹಂತದ ಲೋಕಸಭಾ ಚುನಾವಣೆ ವೇಳೆ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರ ಮಗ ಚೇತನ್ ಗೌಡ ಬಿಜೆಪಿಯಲ್ಲೇ ಇದ್ದಾರೆ ಎಂದರು.

ಕಳೆದ ವರ್ಷದ ಏಪ್ರಿಲ್‍ನಲ್ಲಿ ಶಿವರಾಮೇಗೌಡ ಅವರು ಜೆಡಿಎಸ್ (JDS) ತೊರೆದು ಬಿಜೆಪಿ (BJP) ಸೇರಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಶಿವರಾಮೇಗೌಡ ಅವರ ಪತ್ನಿ ಸುಧಾ ಅವರಿಗೆ ಟಿಕೆಟ್ ನೀಡಿತ್ತು.

ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದ ವಕೀಲ ದೇವರಾಜೇಗೌಡ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಪಾತ್ರವಿದೆ ಎಂದು ಆರೋಪಿಸಿದ್ದರು. ಸರ್ಕಾರ ಪೆನ್‍ಡ್ರೈವ್‍ನಲ್ಲಿರುವ ವೀಡಿಯೋಗಳು ವೈರಲ್ ಆಗುತ್ತಿದ್ದರು ಸುಮ್ಮನಿದೆ. ಈ ಪ್ರಕರಣದಲ್ಲಿ ಸಿಎಂ (Siddaramaiah) ಎಸ್‍ಐಟಿ ಅಧಿಕಾರಿಗಳೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ. ಅಲ್ಲದೇ ಈ ವಿಚಾರವಾಗಿ ನನಗೆ ಡಿಸಿಎಂ ಕರೆ ಮಾಡಿದ್ದರು ಎಂದು ಆಡಿಯೋ ಬಿಡುಗಡೆ ಮಾಡಿದ್ದರು. ಇದನ್ನೂ ಓದಿ: ಪೆನ್‌ಡ್ರೈವ್‌ ಕೇಸ್‌ – ರಾಹುಲ್‌ ಗಾಂಧಿಗೆ ಯಾಕೆ ಇನ್ನೂ ನೋಟಿಸ್‌ ನೀಡಿಲ್ಲ : ಎಸ್‌ಐಟಿಗೆ ಹೆಚ್‌ಡಿಕೆ ಪ್ರಶ್ನೆ

Share This Article