ರಾಮನಗರ: ಬಿಜೆಪಿ-ಜೆಡಿಎಸ್ (BJP-JDS) ಶಾಸಕರಿಗೂ ಅನುದಾನ ಸಿಗುತ್ತದೆ, ತಾಳ್ಮೆಯಿಂದ ಇರಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಪ್ರತಿಕ್ರಿಯಿಸಿದರು.
ಶಾಸಕರಿಗೆ ಸಿಎಂ ಸಿದ್ದರಾಮಯ್ಯ 50 ಕೋಟಿ ಅನುದಾನ ನೀಡಿದ ವಿಚಾರ ಕುರಿತು ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಇದು ಬಜೆಟ್‌ನಲ್ಲೇ ತೀರ್ಮಾನ ಮಾಡಲಾಗಿತ್ತು. ಇದಕ್ಕಾಗಿ 8 ಸಾವಿರ ಕೋಟಿಯನ್ನ ಮೀಸಲಿಟ್ಟಿದ್ದೆವು. ಪಿಡಬ್ಲ್ಯೂಡಿ ಇಲಾಖೆಯ ರಸ್ತೆ, ಸೇತುವೆ ಹಾಗೂ ಶಾಸಕರ ವಿವೇಚನೆಗೆ ಅನುಗುಣವಾಗಿ ಬಳಸಲು ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅರಂತೋಡು ಘನತ್ಯಾಜ್ಯ ಘಟಕ ಮರುಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ನೆರವು – 5 ಲಕ್ಷ ಅನುದಾನ ಮಂಜೂರು
ಬಿಜೆಪಿ-ಜೆಡಿಎಸ್‌ನವರು ತಾಳ್ಮೆಯಿಂದ ಇರಬೇಕು, ನಿಮಗೂ ಅನುದಾನ ಸಿಗುತ್ತೆ. ಈಗ ಟೀಕೆ ಮಾಡುವ ಮೊದಲು ನೀವು ಕೊಟ್ಟಿರೋದೇನು ಮೊದಲು ಹೇಳಿ. ನನಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜು ಕಿತ್ತುಕೊಳ್ಳಲಿಲ್ವಾ? ಅದನ್ನ ಮರೆತುಬಿಟ್ಟಿದ್ದೀರಾ? ಆದರೆ, ನಾವು ಆ ಕೆಲಸ ಮಾಡಲ್ಲ. ಈಗ ಪ್ರಾರಂಭ ಆಗಿದೆ. ಎಲ್ಲರಿಗೂ ಅನುದಾನ ಕೊಡ್ತೀವಿ ಎಂದರು.
ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ವಿಚಾರವಾಗಿ ಮಾತನಾಡಿ, ಆ ರೀತಿ ಯಾವುದೇ ಬಾಂಬ್ ಬೆದರಿಕೆ ಇಲ್ಲ. ಎಲ್ಲರೂ ಮುನ್ನೆಚ್ಚರಿಕೆಯಿಂದ ಇರಬೇಕು. ನಮ್ಮ ಪೊಲೀಸ್ ಅಧಿಕಾರಿಗಳು ಅದನ್ನ ನೋಡಿಕೊಳ್ತಾರೆ ಎಂದರು. ಸಣ್ಣಪುಟ್ಟ ಅಂಗಡಿಗಳಿಗೆ ಜಿಎಸ್ಟಿ ತೆರಿಗೆ ಹಾಕ್ತಿರೋ ಬಗ್ಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಪರಿಶೀಲನೆ ನಡೆಸುತ್ತಿದ್ದು, ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸುರ್ಜೇವಾಲಾ ನನ್ನನ್ನು ಕರೆದಿಲ್ಲ, ಸಂಪುಟದಿಂದ ಕೈ ಬಿಡ್ತಾರೆ ಅಂತನೂ ಹೇಳಿಲ್ಲ – ಆರ್.ಬಿ.ತಿಮ್ಮಾಪುರ್