– ಮೋದಿ ನನ್ನ ಸಂಬಂಧ ಬದಲಾವಣೆ ಮಾಡೋಕೆ ಆಗಲ್ಲ
ಬೆಂಗಳೂರು: ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance) ಮುಂದುವರೆಯಲಿದೆ ಅಂತ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು (H.D Deve Gowda) ಸ್ಪಷ್ಟಪಡಿಸಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದರು. ಈ ವೇಳೆ, ಜಿಬಿಎ ಚುನಾವಣೆಯಲ್ಲಿ (Elections) ಬಿಜೆಪಿ ಜೊತೆ ಮೈತ್ರಿ ಆಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಯಾವುದೇ ಕಾರಣದಿಂದ ಆತಂಕ ಆಗುವುದಿಲ್ಲ. ಬಿಜೆಪಿ ಜೊತೆ ಮೈತ್ರಿ ಮುಂದುವರೆಯುತ್ತದೆ. ಜಿಲ್ಲಾ, ತಾಲೂಕು, ಜಿಬಿಎ, ವಿಧಾನಸಭೆ ಚುನಾವಣೆ ಸೇರಿ ಎಲ್ಲಾ ಚುನಾವಣೆಗಳಿಗೂ ಈ ಮೈತ್ರಿ ಮುಂದುವರೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನವೆಂಬರ್-ಡಿಸೆಂಬರ್ ಒಳಗೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್.ಅಶೋಕ್ ಭವಿಷ್ಯ
ಬಿಜೆಪಿ-ಜೆಡಿಎಸ್ ಮೈತ್ರಿಗೆ ಎಂದೂ ಆತಂಕ ಇಲ್ಲ. ಮೋದಿ ನನ್ನ ಸಂಬಂಧ ಯಾವುದೇ ಕಾರಣಕ್ಕೂ ಯಾರು ಬದಲಾವಣೆ ಮಾಡೋಕೆ ಆಗೊಲ್ಲ. ನಮ್ಮ ಅವರ ಸಂಬಂಧ 10 ವರ್ಷದಿಂದ ಉತ್ತಮವಾಗಿದೆ. ನಾನು ಕಳೆದ 10 ವರ್ಷಗಳಲ್ಲಿ ಮೋದಿ ಬಗ್ಗೆ ಲಘುವಾಗಿ ಮಾತಾಡಿಲ್ಲ. ಇದ್ದರೆ ತೋರಿಸಿ ಎನ್ನುವ ಮೂಲಕ ನನ್ನ ಮೋದಿ ಸಂಬಂಧ ಉತ್ತಮವಾಗಿದ್ದು, ಇದೇ ಮೈತ್ರಿಗೆ ಅಡಿಪಾಯ ಅಂತ ತಿಳಿಸಿದರು.
ಕುಮಾರಸ್ವಾಮಿಯವರು 4 ತಿಂಗಳಿಂದ ನಮ್ಮ ರಾಜ್ಯದಲ್ಲಿ ಪ್ರವಾಸ ಮಾಡಿರಲಿಲ್ಲ. ಸ್ವಲ್ಪ ಆರೋಗ್ಯ ಸುಧಾರಣೆ ಆಗಬೇಕಿತ್ತು. ಆರೋಗ್ಯ ಸರಿಯಾಗಿದೆ, ಯಾವುದೇ ಸಮಸ್ಯೆ ಇಲ್ಲ. ಹೊರ ದೇಶದಿಂದ ಬಂದ ಡಾಕ್ಟರ್ ಪರಿಶೀಲನೆ ಮಾಡಿ ಯಾವುದೇ ಸಮಸ್ಯೆ ಇಲ್ಲ. ಅವರು ಎಷ್ಟು ಬೇಕಾದ್ರು ರಾಜಕೀಯದಲ್ಲಿ ಹೋರಾಟ ಮಾಡೋಕೆ ತೊಂದರೆ ಇಲ್ಲ ಎಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರು ರಾಜ್ಯ ಪ್ರವಾಸ ಮಾಡ್ತಾರೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಎಂಎಂ ಹಿಲ್ಸ್ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ