ಬಿಜೆಪಿ-ಜೆಡಿಎಸ್ ಮೈತ್ರಿ ಅನೈತಿಕ ಸಂಬಂಧ: ಕೆಹೆಚ್ ಮುನಿಯಪ್ಪ

Public TV
2 Min Read

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಅನೈತಿಕ ಸಂಬಂಧ. ಬಿಜೆಪಿ-ಜೆಡಿಎಸ್ ಎಷ್ಟೇ ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ (Congress) 20+ ಸೀಟು ಗೆಲ್ಲುತ್ತದೆ ಎಂದು ಸಚಿವ ಮುನಿಯಪ್ಪ (KH Muniyappa) ಟೀಕೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೈತ್ರಿಯಿಂದ ಅಸಮಾಧಾನವಾಗಿ ಜೆಡಿಎಸ್‌ನಿಂದ ಅನೇಕ ಜನ ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ದೇವೇಗೌಡರು ಜಾತ್ಯತೀತ ನಿಲುವಿನಿಂದ ಈಗ ಆಚೆ ಬಂದಿದ್ದಾರೆ. ಹೀಗಾಗಿ ಅನೇಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಇದೊಂದು ಅನೈತಿಕ ಸಂಬಂಧ ಆಗುತ್ತಿದೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ತುಂಬಾ ಮುಂದೆ ಹೋಗುತ್ತಿದ್ದಾರೆ. ಜಾತ್ಯತೀತವಾಗಿ ನಡೆದುಕೊಂಡು ಬಂದ ಮೇಲೆ ಹಾಗೇ ಇರಬೇಕು. ಆದರೆ ಅವರು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಆದರೂ ಅದು ಅವರ ಪಕ್ಷದ ನಿರ್ಧಾರ. ಆದರೆ ಜಾತ್ಯತೀತ ನಿಲುವು ಇರೋ ಕಾರ್ಯಕರ್ತರು, ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಇನ್ನೂ ಬರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೀದರ್ ಏರ್‌ಬೇಸ್‌ಗೆ ಆಗಮಿಸಿದ ಪ್ರಧಾನಿ ಮೋದಿ

ಬಿಜೆಪಿ-ಜೆಡಿಎಸ್ ಒಂದಾದರೂ ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ಪಕ್ಷಗಳು ಒಂದಾಗುತ್ತಿವೆ. ಮೋದಿ ಆಡಳಿತದಿಂದ ಯಾವ ವರ್ಗವೂ ನೆಮ್ಮದಿಯಿಂದ ಇಲ್ಲ. ಎಲ್ಲಾ ವರ್ಗಗಳಲ್ಲೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ ಬರ ಬಂತು ಎಂದು ಸಿಎಂ ಪತ್ರ ಬರೆದಿದ್ದಾರೆ. ಆದರೆ ಮೋದಿ ಇದುವರೆಗೂ ಒಂದು ತಂಡವನ್ನು ಕಳುಹಿಸಿ ಸಮೀಕ್ಷೆ ಮಾಡುವ ಕೆಲಸ ಮಾಡಿಲ್ಲ. ಇದು ಜನರ ಮೇಲೆ ಮೋದಿ ಸರ್ಕಾರಕ್ಕೆ ಇರುವ ಆಸಕ್ತಿ ಎಂದು ಕಿಡಿಕಾರಿದರು.

ರಾಜ್ಯದ ಕಷ್ಟ ಸುಖಕ್ಕಿಂತ ಮತ್ತೆ ಅಧಿಕಾರಕ್ಕೆ ಬರೋ ಕಡೆ ಮೋದಿ ಯೋಚನೆ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಬಿಜೆಪಿ ಹೊರತುಪಡಿಸಿ ಸರ್ಕಾರ ಮಾಡಬೇಕು ಅಂತ ಹೋರಾಟ ನಡೆಯುತ್ತಿದೆ. ಬಿಜೆಪಿ ಕೋಮು ಗಲಭೆ ಮಾಡುತ್ತಾರೆ. ಅಭಿವೃದ್ಧಿ ಕಡೆ ಗಮನ ಕೊಡಲ್ಲ. ರೈತರನ್ನು ನೋಡಲ್ಲ. ಮನಮೋಹನ್ ಸಿಂಗ್ ಸರ್ಕಾರ 70 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ಈ ಮೋದಿ ಸರ್ಕಾರ ಒಂದು ರೂ. ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಕಷ್ಟಕ್ಕೆ ಬೆಲೆ ಕೊಡಲಿಲ್ಲ. ರೈತರ ಕಷ್ಟಕ್ಕೆ ಬಂದಿಲ್ಲ. ಮೋದಿ ಅವರಿಗೆ ಅಧಿಕಾರ ಹಿಡಿಯೋದು ಮಾತ್ರ ಮುಖ್ಯ. 2024ರಲ್ಲಿ ಬಿಜೆಪಿ ಹೊರತಾದ ಸರ್ಕಾರ ದೇಶದಲ್ಲಿ ಬರಲಿದೆ ಎಂದು ಭವಿಷ್ಯ ನುಡಿದರು.

ಸಿಎಂ ಇಬ್ರಾಹಿಂ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ಇದನ್ನೂ ಓದಿ: ಉಳ್ಳಾಲ ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ ಮೆರೆದ ಯುವಕರಿಗೆ ನೋಟಿಸ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್