ಬಿಜೆಪಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ: ಸಂತೋಷ್ ಲಾಡ್

Public TV
3 Min Read

ಧಾರವಾಡ: 2004 ರಿಂದ 2025 ರವರೆಗೆ ಎಷ್ಟು ಟೆಕ್ನಾಲಾಜಿ ಚೇಂಜ್ ಆಗಿದೆ. ಆದರೆ ಇವತ್ತಿಗೂ ಬಿಜೆಪಿಯವರಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ. ಏನೋ ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ದಿನ ಬೆಳಗಾದರೆ ಬಿಜೆಪಿಯವರು ಇದನ್ನೇ ಹೇಳುತ್ತಾರೆ ಎಂದು ಸಚಿವ ಸಂತೋಷ್ ಲಾಡ್ (Santosh Lad) ಕಿಡಿಕಾರಿದ್ದಾರೆ.

ಧಾರವಾಡದಲ್ಲಿ (Dharwad) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಗಳ್ಳತನದ ಪ್ರಕರಣ ಸುಪ್ರೀಂಕೋರ್ಟ್ಗೆ ಹೋಗಿದೆ. 65 ಲಕ್ಷ ಮತಗಳು ಬಿಹಾರನಲ್ಲಿ (Bihar) ಎಸ್‌ಐಆರ್ ಮುಖಾಂತರ ಡಿಲಿಟ್ ಆಗಿವೆ. ಬಿಹಾರದಲ್ಲಿ 8 ಕೋಟಿ ಜನಸಂಖ್ಯೆ ಇದೆ. ಅಲ್ಲಿ 65 ಲಕ್ಷ ಮತ ಡಿಲೀಟ್ ಮಾಡಿದ್ದಾರೆ. ನಾವು ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದೇವೆ. ರಾಹುಲ್ ಗಾಂಧಿ ಪ್ರತಿಯೊಬ್ಬ ಭಾರತೀಯರ ಹಕ್ಕಿಗಾಗಿ ಮಾತನಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿ ಅವರು ಬಂದು ಮಾತನಾಡೋದು ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್ ಹತ್ತಾರು ಎಕ್ರೆ ಪ್ರದೇಶದಲ್ಲಿ ರೆಸಾರ್ಟ್‌ ಮಾಡಿದ್ದಾನೆ – ಬ್ರಾಹ್ಮಣ ಪುರೋಹಿತ ಪರಿಷತ್‌ ಆರೋಪ

ನಮ್ಮ ಕಾಲದಲ್ಲಿ 25 ದಿನಗಳಲ್ಲಿ ಚುನಾವಣೆ ಮುಗಿಸುತ್ತಿದ್ದೆವು. ಇವರ ಕಾಲದಲ್ಲಿ 90 ದಿನಗಳವರೆಗೆ ಚುನಾವಣೆ ನಡೆಯುತ್ತಿವೆ. 2004 ರಿಂದ 2025 ರಲ್ಲಿ ಎಷ್ಟು ಟೆಕ್ನಾಲಾಜಿ ಚೇಂಜ್ ಆಗಿದೆ. ಆದರೆ ಇವತ್ತಿಗೂ ಬಿಜೆಪಿಯವರಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ. ಏನೋ ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ದಿನ ಬೆಳಗಾದರೆ ಬಿಜೆಪಿಯವರು ಇದನ್ನೇ ಹೇಳುತ್ತಾರೆ. ಒಂದು ಡಿಜಿಟಲ್ ಫಾರ್ಮೆಟ್‌ನಲ್ಲಿ ಮತದಾರರ ಪಟ್ಟಿ ಸಿದ್ಧ ಮಾಡಲು ಆಗುತ್ತಿಲ್ಲ. ಪ್ರಚಾರ ಗಿಟ್ಟಿಸಿಕೊಳ್ಳೋದು, ತಪ್ಪುಗಳನ್ಮು ಮುಚ್ಚಿ ಹಾಕಿಕೊಳ್ಳೋದು ಬಿಜೆಪಿಯವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ 85% ರಷ್ಟು ಬಿಎ ಪದವೀಧರ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಯಾವುದೋ ಒಂದು ಮಹಿಳೆಗೆ 35 ವಯಸ್ಸಿಗೆ, ಇವರು ಮತದಾರ ಪಟ್ಟಿಯಲ್ಲಿ 124 ವಯಸ್ಸು ತೋರಿಸಿದ್ದಾರೆ. ನಾವು ಚುಣಾವಣೆ ಆಯೋಗದ ಕಡೆ ಬೆರಳು ಮಾಡಿ ತೋರಿಸಿದ್ರೆ ಬಿಜೆಪಿಯವರು ಯಾಕೆ ಮಧ್ಯೆ ಬರುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಜಪಿಸಲು VHP ಕರೆ
ಚುನಾವಣಾ ಆಯೋಗ (Election Commission) ತಪ್ಪು ಮಾಡಿದೆ ಎಂದು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ದಾಖಲಾತಿಗಳನ್ನು ನೀಡಬೇಕು. ರಾಹುಲ್ ಗಾಂಧಿ ಅವರು ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಟೀಕೆ ಮಾಡಿದ್ರೆ, ಅದನ್ನೇ ಇವರು ಟೀಕೆ ಮಾಡುತ್ತಾರೆ. ಸುಪ್ರೀಂಕೋರ್ಟ್ಗೆ ಹೋಗಿ ಚುನಾವಣಾ ಆಯೋಗದವರು 65 ಲಕ್ಷ ವೋಟ್ ಡಿಲೀಟ್ ಆಗಿರುವ ಮಾಹಿತಿಯನ್ನು ನಿಮಗೂ ಕೊಡೋದಿಲ್ಲ ಎನ್ನುವಷ್ಟರ ಮಟ್ಟಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಇವತ್ತು ಸುಪ್ರೀಂಕೋರ್ಟ್ 65 ಲಕ್ಷ ಮತ ಡಿಲೀಟ್ ಆದ ಮಾಹಿತಿ 15 ದಿನಗಳೊಳಗಾಗಿ ಕೊಡಿ ಎಂದು ಕೇಳಿದೆ. ಇದು ಭಾರತ ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿ ಗೆದ್ದಿರುವ ಮಾರ್ಜಿನ್ ನೋಡಿದ್ರೆ ಲಕ್ಷ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ಚುನಾವಣಾ ಆಯೋಗಕ್ಕೆ ಮಾಹಿತಿ ಕೇಳಿದ್ದಾರೆ. ಇದಕ್ಕೆ ಬಿಜೆಪಿ ಅವರೇ ಉತ್ತರ ಕೊಡಬೇಕು ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಹೆಸರು ಕೆಡಿಸಲು ಕಮ್ಯುನಿಸ್ಟರು, ಬುದ್ಧಿಜೀವಿಗಳು, ಕಾಂಗ್ರೆಸ್‌ನ ಕೆಲ ಹಿಂದೂ ವಿರೋಧಿಗಳಿಂದ ಷಡ್ಯಂತ್ರ: ಯತ್ನಾಳ್

ಮಹಾರಾಷ್ಟ್ರದಲ್ಲಿ (Maharashtra) ಲೋಕಸಭಾ ಚುನಾವಣೆ ವೇಳೆ 32 ಲಕ್ಷ ಮತ ಸೇರ್ಪಡೆ ಆದವು, ವಿಧಾನಸಭೆಯಲ್ಲಿ 42 ಲಕ್ಷ ಮತ ಸೇರ್ಪಡೆ ಆದವು. 6 ತಿಂಗಳಲ್ಲಿ 42 ಲಕ್ಷ ಮತ ಹೆಚ್ಚಾದವು. ಇವರ ಲೆಕ್ಕದ ಪ್ರಕಾರ 5 ವರ್ಷದಲ್ಲಿ 2 ಕೋಟಿ ಮತ ಹೆಚ್ಚಾಗಬೇಕು. ಬಿಹಾರದಲ್ಲಿ ಇದನ್ನೇ ಡಿಲೀಟ್ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಮತ ಹೆಚ್ಚಳ ಮಾಡಿಲ್ಲ ಎಂದು ಹೇಳಿದ್ದಾರೆ.

ಮೋದಿ ಅವರು ನಾವು ಅದನ್ನ ಮಾಡುತ್ತೇವೆ ಇದನ್ನ ಮಾಡುತ್ತೇವೆ ಎಂದು ಹೇಳುತ್ತಾರೆ. ನಾವು ಹೋಗೋಕಿಂತ ಮುಂಚೆ ಡ್ರೋಣ್ ಹೋಗುತ್ತೆ ಅಂತಾರೆ. ಮೆ ಕಬಿ ನಹಿ ಜಾವೂಂಗಾ, ಮೆ ಜಾನೆಸೆ ಪೆಹಲೆ ಡ್ರೋಣ್ ಜಾಕೆ ಆಯೇಗಾ ಅಂತಾರೆ. ಸ್ಯಾಟ್‌ಲೈಟ್ ಟೆಕ್ನಾಲಾಜಿ ಬಳಸಿ ರಸ್ತೆ ಮಾಡುತ್ತೇವೆ ಎಂದಿದ್ದರು. ಮೊದಲು ಡಿಜಿಟಲ್ ಆಗಿ ಒಂದು ವೋಟರ್ ಲಿಸ್ಟ್ ಕೊಡಿ ಸಾಕು. ನಮಗೂ ನಿಮ್ಮ ಆಟ ನೋಡಿ ಸಾಕಾಗಿದೆ ಎಂದಿದ್ದಾರೆ.

Share This Article