ಬಿಜೆಪಿಯವರು ಧರ್ಮಸ್ಥಳವನ್ನ ಅಶುದ್ಧ ಮಾಡ್ತಿದ್ದಾರೆ: ಡಿಕೆಶಿ

Public TV
1 Min Read

ಬೆಂಗಳೂರು: ಬಿಜೆಪಿಯವರು (BJP) ಧರ್ಮಸ್ಥಳವನ್ನ (Dharmasthala) ಅಶುದ್ಧ ಮಾಡ್ತಿದ್ದಾರೆ. ಇವರ ರಾಜಕೀಯ ಕುತಂತ್ರಕ್ಕೆ ಧರ್ಮಸ್ಥಳ ಬಲಿ ಆಗಬಾರದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅವರು ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಬಿಜೆಪಿಯವರ ಆರೋಪ ಹಾಗೂ ಧರ್ಮಸ್ಥಳ ರ‍್ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಾನು ಹೆಗಡೆ ಅವರಿಗೆ ಮನವಿ ಮಾಡ್ತೀನಿ. ಈ ಕ್ಷೇತ್ರ ದುರ್ಬಳಕೆ ಮಾಡಿಕೊಳ್ಳೋಕೆ ಬಿಡಬಾರದು. ಧರ್ಮಸ್ಥಳದ ಈ ಕೇಸ್ ಬಿಜೆಪಿಯ ಎರಡು ಗುಂಪಿನ ಇಂಟ್ರನಲ್ ಫೈಟ್‌ನಿಂದ ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ತಿಮರೋಡಿ ಮನೆಯಿಂದ ಸಿಸಿಟಿವಿ ಹಾರ್ಡ್‌ ಡಿಸ್ಕ್‌, ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್‌ ವಶ

ನಾನು ಆನ್ ರೆಕಾರ್ಡ್ ಹೇಳ್ತಾ ಇದ್ದೀನಿ. ಈಗ ಯಾರು ಅರೆಸ್ಟ್ ಆಗಿದ್ದಾರೆ. ಅರೆಸ್ಟ್ ಆಗಿರೋರು ಏನು ಹೇಳಿದ್ರು. ಬಿಜೆಪಿಯ ಎರಡು ಗುಂಪಿಗಳ ಮತ್ತು ಅದರ ಸಂಘಟನೆಗಳಿಂದ ಆಗ್ತಿದೆ. ಬಿಜೆಪಿ ಪಾರ್ಟಿ ಅವರೇ ಧರ್ಮಸ್ಥಳದ ಮೇಲೆ ಮಸಿ ಬಳಿಯೋಕೆ ಕೆಲಸ ಮಾಡ್ತಿದ್ದಾರೆ. ಈಗ ಅದನ್ನು ಮುಚ್ಚಿ ಹಾಕೋಕೆ ಪ್ರಯತ್ನವನ್ನು ಅವರೇ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್‌.ಅಶೋಕ್ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು NIA ಗೆ ಕೊಡಬೇಕು ಎಂದು ಆಗ್ರಹಿಸಿದ್ದರು. ಇನ್ನೂ ಬಿಜೆಪಿಗರು ಬೆಂಗಳೂರಿನಿಂದ – ಧರ್ಮಸ್ಥಳಕ್ಕೆ ರ‍್ಯಾಲಿಯನ್ನೂ ಸಹ ಮಾಡಿದ್ದರು. ಈ ಮೂಲಕ ಕ್ಷೇತ್ರದ ಜೊತೆ ನಿಲ್ಲುವುದಾಗಿ ನೈತಿಕ ಬೆಂಬಲ ಸೂಚಿಸಿದ್ದರು. ಇದನ್ನೂ ಓದಿ: ಬುರುಡೆ ಗ್ಯಾಂಗ್‌ ಷಡ್ಯಂತ್ರ ಬಯಲು | ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಸತ್ಯ ಹೇಳ್ತೀನಿ – ಚಿನ್ನಯ್ಯ ಕಣ್ಣೀರು

Share This Article