ಬಿಜೆಪಿಯವರು ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ: ಸಿದ್ದರಾಮಯ್ಯ

Public TV
2 Min Read

ಬೆಳಗಾವಿ: ಬಿಜೆಪಿಯವರು (BJP) ಹತಾಶರಾಗಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆರ್ ಅಶೋಕ್ ಅವರ ಬಿನ್ ಲಾಡೆನ್ ಸರ್ಕಾರ ಎಂಬ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಸ್ಥರು ನ್ಯಾಯ ಸಿಕ್ಕಿಲ್ಲ, ಸಿಐಡಿ ತನಿಖೆ ಮಾಡಬೇಕು ಎಂದು ಮನವಿ ಕೊಟ್ಟಿದ್ದಾರೆ. ಕಾನೂನು ಇಲಾಖೆ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಪೊಲೀಸರಿಂದ ಅಂಗವಿಕಲನ ಮೇಲೆ ಹಲ್ಲೆ ವಿಚಾರಕ್ಕೆ ಪಿಎಸ್‌ಐ ಮೇಲೆ ಡಿಪಾರ್ಟ್‌ಮೆಂಟ್‌ಗೆ ತನಿಖೆ ಮಾಡಲು ಸೂಚಿಸುತ್ತೇವೆ. ಹಲ್ಲೆ ಮಾಡಿರೋದು ತಪ್ಪು. ತಪ್ಪು ಮಾಡಿದವರ ಮೇಲೆ ಶಿಸ್ತಿನ ಕ್ರಮ ವಹಿಸುತ್ತೇವೆ ಎಂದರು.

ಗುತ್ತಿಗೆದಾರ ಬಾಕಿ ಬಿಲ್ ಪಾವತಿಗೆ ಕೆಂಪಣ್ಣ ಒತ್ತಾಯ ವಿಚಾರಕ್ಕೆ, ಹಣ ಬಾಕಿ ಉಳಿದಿರೋದು ಯಾರ ಕಾಲದಲ್ಲಿ ಆಗಿರೋ ಕೆಲಸ? ಬಾಕಿ ಉಳಿಸಿ ಹೋಗಿರೋದು ಹಿಂದಿನ ಸರ್ಕಾರದವರು. ಹಿಂದಿನ ಸರ್ಕಾರದ 2-3 ವರ್ಷ ಬಿಲ್ ಕೊಟ್ಟಿಲ್ಲ. ನಾವು ಬಂದು ಇನ್ನೂ 3 ತಿಂಗಳು ಆಗಿಲ್ಲ. ಬಿಲ್ ಕೊಡಬೇಕು ಅದರ ಬಗ್ಗೆ ಏನಿಲ್ಲ. ನಾವು 40% ಕಮಿಷನ್ ದಂಧೆಯ ಬಗ್ಗೆ ಮಾತನಾಡಿದ್ದೇವೆ. ಈ ಬಗ್ಗೆ ತನಿಖೆ ಮಾಡಬೇಕು ಎಂದರು. ಇದನ್ನೂ ಓದಿ: 4 ವರ್ಷದ ಹಳೆಯ ಕಾಮಗಾರಿಗಳ ಎಸ್‌ಐಟಿ ತನಿಖೆ ಬೇಡ: ಕೆಂಪಣ್ಣ

ಗುಣಮಟ್ಟದ ಕೆಲಸ ಆಗಿದೆಯಾ ಇಲ್ಲವಾ ಎಂದು ತನಿಖೆ ಆಗಬೇಕು. ತನಿಖೆ ಮಾಡಿಸಿ ಒಳ್ಳೆಯ ಕೆಲಸ ಮಾಡಿರುವವರಿಗೆ ತೊಂದರೆ ಕೊಡಲ್ಲ. ಕಳಪೆ ಕಾಮಗಾರಿ ಕೆಲಸ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ರಾಜ್ಯವನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ಆರ್ಥಿಕವಾಗಿ, ಭ್ರಷ್ಟಾಚಾರ, ಧರ್ಮ ರಾಜಕಾರಣ ಮಾಡಿದ್ದಾರೆ. ನಾವು 135 ಸ್ಥಾನ ಗೆದ್ದಿದ್ದು ಬಿಜೆಪಿಯವರಿಗೆ ಭಯ ಆರಂಭ ಆಗಿದೆ. ಎಷ್ಟೇ ದುಡ್ಡು ಖರ್ಚು ಮಾಡಿದರೂ ಗೆಲ್ಲಲಿಲ್ಲ ಎಂದರು.

ಲೋಕಸಭಾ ಚುನಾವಣೆಯಲ್ಲಿ 20 ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದೇವೆ, ಗೆಲ್ಲುತ್ತೇವೆ. 3 ವರ್ಷಗಳಿಂದ ಬಿಲ್ ಕೊಟ್ಟಿಲ್ಲ. ಯಾಕೆ ಕೊಡಲಿಲ್ಲ? ಯಾಕೆ ಬಿಟ್ಟು ಹೋದರು?ನಾವು ಯಾರಿಗೆ ತೊಂದರೆ ಕೊಡಲ್ಲ. 3 ವರ್ಷ ಬಿಲ್ ಕೊಡದೇ ಇರುವವರು ಈಗ ಏನು ಹೋರಾಟ ಮಾಡುತ್ತಾರೆ? ಅವರಿಗೆ ಏನು ನೈತಿಕತೆ ಇದೆ? ಸುಮ್ಮನೆ ಇರಲಾಗದೆ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಹೊಟ್ಟೆ ಉರಿ ಶುರುವಾಗಿದೆ. ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಚಲುವರಾಯಸ್ವಾಮಿ, ಡಿಕೆಶಿ ಮೇಲೆ ಎಲ್ಲಿ ಆರೋಪ ಬಂದಿದೆ? ಇವತ್ತು ಕೆಂಪಣ್ಣ ಯಾವ ಆರೋಪ ಮಾಡಿದ್ದಾರೆ? ಯಾವುದೇ ಭ್ರಷ್ಟಾಚಾರದ ಆರೋಪ ಮಾಡಿಲ್ಲ ಎಂದು ಸಿಎಂ ಹೇಳಿದ್ದಾರೆ. ಇದನ್ನೂ ಓದಿ: ಕಮಿಷನ್ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಡಿ.ಕೆ ಶಿವಕುಮಾರ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್