BJP ಹಿಂದೂ-ಮುಸ್ಲಿಂ, ದಲಿತ-ಬ್ರಾಹ್ಮಣರ ನಡುವೆ ಜಗಳ ತಂದಿಡುತ್ತಿದೆ: ಸುರ್ಜೇವಾಲಾ ಕಿಡಿ

Public TV
2 Min Read

ದಾವಣಗೆರೆ: ಬಿಜೆಪಿ (BJP) ಹಿಂದೂ-ಮುಸ್ಲಿಂ, ದಲಿತ-ಬ್ರಾಹ್ಮಣ ಸೇರಿದಂತೆ ಎಲ್ಲ ವರ್ಗದ ಜನರ ನಡುವೆ ಜಗಳ ತಂದಿಡುತ್ತಿದೆ. ಜನರ ಭಾವನೆಗಳನ್ನು ಮುರಿಯುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಂತೆ ಬಿಜೆಪಿ ಸರ್ಕಾರ (BJP Government) ಆಡಳಿತ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿಯವರು ಕಾಂಗ್ರೆಸ್ (Congress) ವಿರುದ್ಧ ಮಾಡಿದ ಎಲ್ಲಾ ಅಪಪ್ರಚಾರಗಳು ಬಿದ್ದು ಹೋಗಿವೆ. 75 ವರ್ಷಗಳ ಇತಿಹಾಸದಲ್ಲಿ ಯಾರೊಬ್ಬರೂ 3,570 ಕಿ.ಮೀ ಪಾದಯಾತ್ರೆ ಮಾಡಿರಲಿಲ್ಲ, ಆದರೆ ರಾಹುಲ್ ಗಾಂಧಿ (Rahul Gandhi) ಮಾಡುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟು, ನಿರುದ್ಯೋಗ, ಭ್ರಷ್ಟಾಚಾರ, ಕೋಮು ಗಲಭೆಗಳ ವಿರುದ್ಧ ರಾಹುಲ್ ಗಾಂಧಿ ಅವರು ಈ ಪಾದಯಾತ್ರೆ ಮಾಡುತ್ತಿದ್ದಾರೆ. ಯಾತ್ರೆ (Bharat Jodo Yatra) ವೇಳೆ ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಈವರೆಗೆ 3 ಕೋಟಿ ಜನ ಪಾಲ್ಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಮಧ್ಯಮ ವರ್ಗದ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ಬಿಜೆಪಿ ದೇಶದ ಶೇ.54 ರಷ್ಟು ಆಸ್ತಿಯನ್ನ ಕೇವಲ 9 ಜನರ ಕೈಗೆ ಕೊಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅ.22 ರಿಂದ 2 ದಿನಗಳ ಹೊಯ್ಸಳ ಸಾಹಿತ್ಯೋತ್ಸವ – ಎಸ್.ಎಲ್.ಭೈರಪ್ಪರಿಂದ ಉದ್ಘಾಟನೆ

ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಕಾಂಗ್ರೆಸ್ ಪಕ್ಷ ಅಂದ್ರೆ ಏನು ಅನ್ನೋದು ಬಿಜೆಪಿಗೆ ಮನವರಿಕೆಯಾಗಿದೆ. ಈಗ ರಾಜ್ಯದಲ್ಲಿ ಪಿಎಸ್‌ಐ (PSI) ಹಗರಣದಿಂದಾಗಿ ಡಿಜಿಪಿ ಜೈಲಿನಲ್ಲಿದ್ದಾರೆ. ಪಿಎಸ್‌ಐ ಹಗರಣ ನಡೆದಾಗ ಇದೇ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಗೃಹಮಂತ್ರಿಯಾಗಿದ್ದರು. ಕೆಪಿಎಸ್‌ಸಿ (KPSC) ಸಹ ಭ್ರಷ್ಟಾಚಾರದಲ್ಲಿದೆ. ಡಿಡಿಸಿ ಬ್ಯಾಂಕ್‌ನಲ್ಲಿ (DCC Bank) ಉದ್ಯೋಗ ಹಣಕ್ಕಾಗಿ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ದ್ವಿಗುಣವಾಗಿದ್ದರೂ ಯೋಚನೆ ಮಾಡದ ಬಿಜೆಪಿಯವರು ಭ್ರಷ್ಟಾಚಾರವನ್ನೇ ಲೀಗಲ್ ಮಾಡಿಕೊಂಡಿದ್ದಾರೆ. ಅದರಲ್ಲೂ ಇಡೀ ದೇಶದಲ್ಲೇ ಕರ್ನಾಟಕ ಸಿಎಂ ಅತಿ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ಗಲಭೆಗಳನ್ನು ಸೃಷ್ಠಿ ಮಾಡುತ್ತಾರೆ, ಈ ಗಲಭೆಗಳಿಂದ ಯುವಕರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಜಾತಿ-ಧರ್ಮಗಳ ನಡುವೆ ಕಾಂಟ್ರವರ್ಸಿ ಮಾಡುತ್ತಿದ್ದು, ಕರ್ನಾಟಕದಲ್ಲಿರುವ ಕಂಪನಿಗಳು ಹೈದರಾಬಾದ್‌ಗೆ ಎತ್ತಂಗಡಿ ಆಗುತ್ತಿವೆ. ಇದರಿಂದ ಬಂಡವಾಳದ ಹರಿವು ಕಡಿಮೆಯಾಗಲಿದೆ. ಈ ಎಲ್ಲದರ ವಿರುದ್ಧವಾಗಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *