ಬಿಜೆಪಿಯಿಂದ ದೆಹಲಿಯಲ್ಲಿ ಮೂಲಸೌಕರ್ಯ ಸುಧಾರಿಸಿದೆ: ಅಮಿತ್ ಶಾ

Public TV
1 Min Read

ನವದೆಹಲಿ: ದೆಹಲಿಯಲ್ಲಿ ಬಿಜೆಪಿಯಿಂದ ಮೂಲಸೌಕರ್ಯ ಸುಧಾರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಪಂಜಾಬಿ ಭಾಗ್‌ನಲ್ಲಿ ಭಾರತ್ ದರ್ಶನ್ ಪಾರ್ಕ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಧಾನಿಯಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವಲ್ಲಿ ಕೇಂದ್ರ ಮತ್ತು ಬಿಜೆಪಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರವು 31 ಖಾಲಿ ನಿವೇಶನಗಳನ್ನು ಉದ್ಯಾನಗಳಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಿದೆ. 27 ಒಳಚರಂಡಿ ಘಟಕಗಳನ್ನು ಅಭಿವೃದ್ಧಿ ಮಾಡಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ನೀವು 13,000 ಕೋಟಿ ರೂ. ಅನುದಾನ ನೀಡುತ್ತಿದ್ದರೆ, ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಬೇಕಿತ್ತು ಎಂದು ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಬರ್‌ನ ಆಕ್ರಮಣ ಭಾರತಕ್ಕೆ ಒಡ್ಡಿದ ಅಪಾಯವನ್ನು ಗುರುನಾನಕ್‌ ಅರಿತಿದ್ದರು: ಮೋದಿ

ಇಲ್ಲಿ ಎರಡು ರೀತಿಯ ಕೆಲಸದ ಸಂಸ್ಕೃತಿಗಳಿವೆ. ಒಂದು ವಾಸ್ತವಿಕವಾಗಿಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಮತ್ತು ಭರವಸೆಗಳನ್ನು ಈಡೇರಿಸುವುದು. ಇನ್ನೊಂದು ಬಾಯಿ ಮಾತಿಗಷ್ಟೇ ಅಭಿವೃದ್ಧಿ ಬಗ್ಗೆ ಹೇಳಿವುದು ಎಂದು ಕೇಜ್ರಿವಾಲ್ ಅವರನ್ನು ಪರೋಕ್ಷವಾಗಿ ಕುಟುಕಿದ್ದಾರೆ.

ರಾಜಧಾನಿಯಲ್ಲಿರುವ ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಬಿಜೆಪಿ ಸರ್ಕಾರವು ವಿವಿಧ ರೀತಿಯ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಈಗಾಗಲೇ 1,731 ಕಾಲೋನಿಗಳನ್ನು ಸರಿಪಡಿಸುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇದರಿಂದ 40 ಲಕ್ಷ ಜನರಿಗೆ ಪ್ರಯೋಜನ ಆಗಲಿದೆ. ಸ್ಲಂ ಪುನರ್ವಸತಿ ಯೋಜನೆಯ ಅಡಿಯಲ್ಲಿ ಮನೆಗಳನ್ನು ಒದಗಿಸುವ ಮೂಲಕ ಸಾವಿರಾರು ಸ್ಲಂ ನಿವಾಸಿಗಳಿಗೆ ಸೂರನ್ನು ಒದಗಿಸಲಾಗುತ್ತಿದೆ. ಕತ್‌ಪುಟ್ಲಿ ಕಾಲೋನಿ, ಕಲ್ಕಾಜಿ ಮತ್ತು ಜೈಲೋರ್‌ವಾಲಾ ಬಾಗ್‌ನಲ್ಲಿರುವ 85,000 ಜನರಿಗೆ ಇದರಿಂದ ಸಾಕಷ್ಟು ಪ್ರಯೋಜವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಸಂದರ್ಭದಲ್ಲಿ ಜನರು ಬಿಜೆಪಿಯನ್ನು ಅಪಹಾಸ್ಯ ಮಾಡುತ್ತಿದ್ದರು. ಆದರೇ ಜನ ಈಗ ದರ್ಶನಕ್ಕೆ ಹೋಗುತ್ತಿದ್ದಾರೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಗೋವು ಮಾತೆ ಅಲ್ಲ, ಗೋಮಾಂಸ ಸೇವನೆ ತಪ್ಪಲ್ಲ ಎಂದಿದ್ರು ಸಾವರ್ಕರ್‌: ದಿಗ್ವಿಜಯ್‌ ಸಿಂಗ್‌

 

Share This Article
Leave a Comment

Leave a Reply

Your email address will not be published. Required fields are marked *