ಬಿಜೆಪಿ ಸರ್ಕಾರದ ಜನ್ಮವೇ ಭ್ರಷ್ಟಾಚಾರದ್ದು: ಡಿಕೆಶಿ

Public TV
1 Min Read

ಚಿಕ್ಕಮಗಳೂರು: ಬಿಜೆಪಿ ಸರ್ಕಾರದ ಜನ್ಮವೇ ಭ್ರಷ್ಟಾಚಾರದ್ದು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಮತ್ತು ಯೋಗೀಶ್ವರ್ ನಮ್ಮ ಮನೆಗೆ ಹಣ ತಂದು ಕೊಟ್ರು ಎಂದು ಶಾಸಕರೇ ಅಸೆಂಬ್ಲಿಯಲ್ಲಿ ಹೇಳಿದ್ದಾರೆ. ಭ್ರಷ್ಟಾಚಾರದ ಈ ಸರ್ಕಾರದ ಜನ್ಮ ದಿನ ನಡೆಯುತ್ತಿದೆ. ಕಮಿಷನರ್ ಆಗಿದ್ದವರು ಆಪ್ ಪಾರ್ಟಿ ಸೇರಿದ್ದಾರೆ. ಒಂದು ಕೆಲಸಕ್ಕೆ ಇಷ್ಟು ಹಣ ಫಿಕ್ಸ್ ಅಂತ ಕಮಿಷನರ್ ಹೇಳಿದ್ದಾರೆ. ಸರ್ಕಾರ ಕ್ರಮ ಕೈಗೊಳ್ಳಬೇಕು ಇಲ್ಲ ಒಪ್ಪಿಕೊಳ್ಳಬೇಕು. ದೇಶದಲ್ಲಿ ಯುವಕರಿಗೆ, ರೈತರಿಗೆ, ವ್ಯಾಪಾರಸ್ಥರಿಗೆ ಅನ್ಯಾಯ ಆಗಿದೆ ಅಂದ್ರೆ ಅದು ಕರ್ನಾಟಕದಲ್ಲಿ ಹೆಚ್ಚು. ರಾಜ್ಯದ ಬಿಜೆಪಿ ಸರ್ಕಾರದಿಂದಾಗಿ ನಮಗೆ ತಲೆ ತಗ್ಗಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್- ಬಿಜೆಪಿ ಎರಡೇ ಆಯ್ಕೆ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಪ್ರೀತಂಗೌಡ

ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ಕುರಿತಾಗಿ ಮಾತನಾಡಿ, ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಕಾಂಗ್ರೆಸ್ಸಿಗೂ ಇದಕ್ಕೂ ಏನ್ ಸಂಬಂಧ? ಈ ಹಗರಣವನ್ನು ಹೊರಗಡೆ ತಂದಿದ್ದೇ ಕಾಂಗ್ರೆಸ್. ಕಾನೂನಲ್ಲಿ ಯಾರು ಏನು ತಪ್ಪು ಮಾಡಿದ್ದಾರೆ ತನಿಖೆ ಆಗಬೇಕು. ಗನ್ ಮ್ಯಾನ್ ಇದ್ದ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇದ್ದ, ಮತ್ತೊಬ್ಬ ಇದ್ದ ಅದೆಲ್ಲಾ ಅಲ್ಲ. ನಿಮ್ಮ ಸರ್ಕಾರದ ಆಡಳಿತದ ವೈಫಲ್ಯಗಳು ಹೊರಬರ್ತಿದೆ. ಕಾನ್ಸಟೇಬಲ್ ಇರ್ಲಿ, ಯಾರೇ ಇರ್ಲಿ, ಕಾಂಗ್ರೆಸ್ ಅಧಿಕಾರದಲ್ಲಿದ್ಯಾ? ಅಧಿಕಾರ ನಡೆಸುತ್ತಿರುವುದು ನೀವು, ನಿಮ್ಮ ಆಫೀಸರ್‌ಗಳು ನೂರಾರು ಯುವಕರಿಗೆ ಈ ರೀತಿ ಮೋಸ ಮಾಡಿದ್ದೀರಿ ಎಂದು ಕೆಂಡಕಾರಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ

40% ಕಮಿಷನ್ ಅದು ಜಗಜ್ಜಾಹೀರಾಗಿದೆ. ಉದ್ಯೋಗ ಕೊಡುವುದರಲ್ಲೂ ಇಂತಹ ಕೆಲಸಕ್ಕೆ ಹೊರಟಿದ್ದಾರೆ. ಹಿಂದೆಯೂ ಇತ್ತು, ಈಗಲೂ ಇದೆ. ಅಸೆಂಬ್ಲಿಯಲ್ಲಿ ಹೋಂ ಮಿನಿಸ್ಟರ್ ನಾನೇನು ಮಾಡಿಲ್ಲ ಅಂತ ಯಾಕೆ ಹೇಳಿದ್ರು ಮತ್ತೆ ಏಕೆ ಸಿಓಡಿ ತನಿಖೆಗೆ ಮುಂದಾದರು. ಇದಕ್ಕೆ ಹೋಂ ಮಿನಿಸ್ಟರ್ ಅವರೇ ಜವಾಬ್ದಾರಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *