ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ

Public TV
1 Min Read

ಬೆಂಗಳೂರು: ಬಿಜೆಪಿ (BJP) ಸರ್ಕಾರದಲ್ಲಿ ವಿದ್ಯುತ್ ದರ (Electricity Bill)  ಏರಿಕೆ ಮಾಡಿಲ್ಲ ಅಂತ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ (Congress) ಸಚಿವರ ಆರೋಪಕ್ಕೆ ವಿಧಾನಸೌಧದಲ್ಲಿ ಮಾತನಾಡಿದ ಅವರು ತಿರುಗೇಟು ನೀಡಿದರು.

ಪ್ರತಿ ಯುನಿಟ್‍ಗೆ 70 ಪೈಸೆ ದರ ಹೆಚ್ಚಳ ಮಾಡಿದ್ದೀರಿ. ಕೈಗಾರಿಕೆಗಳು ನಿಲ್ಲಿಸೋ ಬಗ್ಗೆ ಸಂಘದವರು ಮಾತಾಡಿದ್ದಾರೆ. ಇದನ್ನ ಸರಿ ಮಾಡೋ ಕೆಲಸ ಸರ್ಕಾರ ಮಾಡಬೇಕು ಅಂತ ಆಗ್ರಹ ಮಾಡಿದರು.  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಅವರು ಪ್ರತಿ ವರ್ಷ ದರ ಏರಿಕೆಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ನಮ್ಮ ಸರ್ಕಾರ ಅದನ್ನ ಒಪ್ಪಿರಲಿಲ್ಲ. ಈಗ ಹೆಚ್ಚಳ ಮಾಡಿರೋ ವಿದ್ಯುತ್ ದರ ಏರಿಕೆ ಕಡಿಮೆ ಮಾಡಿ ಅಂತ ಒತ್ತಾಯ ಮಾಡಿದ್ರು.

ಜನವರಿಯಲ್ಲಿ ಸಹಜವಾಗಿ ಕೆಇಆರ್ ಸಿ ಬೆಲೆ ಏರಿಕೆ ಪ್ರಸ್ತಾಪ ಇಡುತ್ತೆ. ಆದರೆ ನನ್ನ ಮಾಹಿತಿ ಪ್ರಕಾರ ನಮ್ಮ ಸರ್ಕಾರ ಹೆಚ್ಚಳ ಮಾಡಿಲ್ಲ. ಒಂದು ವೇಳೆ ಹೆಚ್ಚಳ ಆಗಿದ್ರು ಈಗ ನೀವು ವಾಪಸ್ ಪಡೆದುಕೊಳ್ಳಬೇಕು. ಕೆಇಆರ್ ಸಿ  ಏನು ಸುಪ್ರೀಂಕೋರ್ಟ್ (Supremecourt) ಅಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಬಾರದು ಅಂತ ಕೋಟಾ ಆಗ್ರಹಿಸಿದರು.

Share This Article