ಸಂಸದ ಜೋಶಿ ವಿರುದ್ಧ ಬಿಜೆಪಿ ಮಾಜಿ ಶಾಸಕನ ಮಗಳ ಫೇಸ್‍ಬುಕ್ ವಾರ್!

Public TV
2 Min Read

ಹುಬ್ಬಳ್ಳಿ: ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಕುಂದಗೋಳ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಎಸ್.ಐ ಚಿಕ್ಕನಗೌಡರ ಪುತ್ರಿ ಫೇಸ್‍ಬುಕ್ ನಲ್ಲಿ ವಾರ್ ಆರಂಭಿಸಿದ್ದಾರೆ.

ನನ್ನ ತಂದೆಯ ಸೋಲಿಗೆ ಕಾರಣರಾದ ಮಹೇಶ್ ಗೌಡ ಜೊತೆಗೆ ನೀವು ಹೊಂದಾಣಿಕೆ ಮಾಡಿದ್ದು ಎಷ್ಟು ಸರಿ? ಆ ದ್ರೋಹಿಗಳನ್ನು ಪಕ್ಷದಿಂದ ಕಿತ್ತೊಗೆಯೋವರೆಗೂ ನಮಗೆ ಸಮಾಧಾನ ಇಲ್ಲ ಎಂದು ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಮಾನ್ಯ ಸಂಸದರೇ ಏನಿದು? ನಿಮ್ಮ ಪಕ್ಷವಾದ ಬಿಜೆಪಿಗೆ ಮೋಸ ಮಾಡಿ ಪಕ್ಷಕ್ಕೆ ದ್ರೋಹ ಮಾಡಿದವರನ್ನು ಮುಂದೆ ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡ್ತೀರಿ. ನಾವು ಪ್ರೂಫ್ ಸಮೇತ ಕೆಲವು ಮುಖಂಡರು ಕಾಂಗ್ರೆಸ್‍ಗೆ ಬೆಂಬಲಿಸುವಂತೆ ಪ್ರಚಾರ ಮಾಡಿದ್ದನ್ನು ಸಿಡಿಯಲ್ಲಿ ಹಾಗೂ ಲಿಖಿತದ ಮೂಲಕ ಅವರೆಲ್ಲರನ್ನು ಪಕ್ಷದಿಂದ ವಜಾ ಮಾಡುವಂತೆ ಕೇಳಿಕೊಂಡಿದ್ದೇವು. ಆದರೆ ಅದನ್ನು ಮಾಡುವುದು ಬಿಟ್ಟು ನೀವು ಅದೇ ಮೋಸಗಾರರ ಗ್ಯಾಂಗ್ ಕಟ್ಟಿಕೊಂಡು ಕಾರ್ಯಕ್ರಮಗಳನ್ನ ಮಾಡಿದ್ದೀರಿ.

 

ಇಂತಹ ಜನರ ವಿರುದ್ಧ ನೀವು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ನನ್ನ ಪ್ರಶ್ನೆಗೆ ಉತ್ತರಿಸಿ. ಹಾಗೆಯೇ ಬಿಜೆಪಿಯ ನಿಜವಾದ ಕಾರ್ಯಕರ್ತರು ಹಾಗೂ ಮತದಾರರಿಗೆ ಬೆಲೆ ಇಲ್ಲವೇ? ನಿಮ್ಮ ಮೇಲೆ ನನಗೆ ತುಂಬಾ ಗೌರವವಿದೆ. ಚಿಕ್ಕ ವಯಸ್ಸಿನಿಂದ ನಿಮ್ಮನ್ನು ನೋಡುತ್ತಿದ್ದೇನೆ. ಆದರೆ ಯಾವುದೋ ಗುಂಪಿನ ಹಿತಾಸಕ್ತಿಗೆ ಕುಂದಗೋಳದಲ್ಲಿ ಬಿಜೆಪಿ ಸೋಲುವ ಹಾಗೆ ಮಾಡಿದ್ದು ವಿಪರ್ಯಾಸ. ಅದೇನೆ ಆಗಲಿ, ಪಕ್ಷ ಎಂದ ಮೇಲೆ ನಾವೆಲ್ಲ ಒಂದೇ ಎನ್ನಬೇಕಲ್ಲವೇ? ಅಧಿಕಾರ ಶಾಶ್ವತವಲ್ಲ. ಆದರೆ ನಿಮಗೂ ಅದೇ ರೀತಿ ಆದರೆ ಹೇಗೆ ಇರುತ್ತಾ ಯೋಚನೆ ಮಾಡಿ. ಆ ದ್ರೋಹಿಗಳನ್ನು ಪಕ್ಷದಿಂದ ಕಿತ್ತೊಗೆಯೋವರೆಗೂ ನಮಗೆ ಸಮಾಧಾನ ಇಲ್ಲ. ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇನೆ.

ನಂದಾ ಅವರ ಪೋಸ್ಟ್‍ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಂದಾ ಅವರು, ನಾನು ಯಾರಿಗೂ ವಾರ್ನಿಂಗ್ ಕೊಟ್ಟಿಲ್ಲ. ಕೊಡುವಷ್ಟು ದೊಡ್ಡವಳು ಅಲ್ಲ. ಅನ್ಯಾಯವನ್ನು ಪ್ರಶ್ನಿಸಿದ್ದೇನೆ ಅಷ್ಟೇ. ಜೈ ಬಿಜೆಪಿ, ಜೈ ಮೋದಿಜಿ ಎಂದು ಹೇಳಿಕೊಂಡಿದ್ದಾರೆ

https://www.facebook.com/nanda.chikkanagoudar/posts/2324053347605526

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *