ಬಿಜೆಪಿ ಉದ್ದೇಶಪೂರ್ವಕವಾಗಿ ನಿಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ: ಪ್ರಿಯಾಂಕಾ ಗಾಂಧಿ

Public TV
2 Min Read

ಲಕ್ನೋ: ಬಿಜೆಪಿ ಉದ್ದೇಶಪೂರ್ವಕವಾಗಿ ಜನರನ್ನು ಬಡವರನ್ನಾಗಿ ಮತ್ತು ಉಚಿತ ಪಡಿತರ ಮೇಲೆ ಅವಲಂಬಿತರನ್ನಾಗಿ ಮಾಡಿದೆ. ಆದರೆ ಅಭಿವೃದ್ಧಿ ಮತ್ತು ನಿರುದ್ಯೋಗದ ಬಗ್ಗೆ ಯಾರು ಮಾತನಾಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುವ ಸರ್ಕಾರವನ್ನು ಆರಿಸಬೇಕೆಂದು ಜನರನ್ನು ಒತ್ತಾಯಿಸಿದ್ದಾರೆ. ಬಿಜೆಪಿಯವರು ಪಡಿತರ ಮೂಟೆ ಕೊಟ್ಟಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಬಿಜೆಪಿಯವರು ಬ್ಯಾಂಕ್ ಖಾತೆಗಳನ್ನು ತೆರೆದು ಸ್ವಲ್ಪ ಹಣವನ್ನು ಕಳುಹಿಸಿದ್ದಾರೆ. ಐದು ವರ್ಷಗಳಲ್ಲಿ ಬಿಜೆಪಿ ಎಷ್ಟೋ ಕೆಲಸಗಳನ್ನು ಮಾಡಿದೆ ಎನ್ನುತ್ತಾರೆ. ಆದರೆ ಬಿಜೆಪಿ ಸಾರ್ವಜನಿಕರನ್ನು ಪಡಿತರ ಮೇಲೆ ಅವಲಂಬಿತರಾಗುವಂತೆ ಮಾಡಿದೆ. ಉದ್ದೇಶಪೂರ್ವಕವಾಗಿ ಜನರನ್ನು ಬಡವರನ್ನಾಗಿ ಮಾಡಿದೆ. ನಿಮಗೆ ಕೆಲಸ ಸಿಗುತ್ತಿಲ್ಲ ಎಂಬುವುದಕ್ಕೆ ಉದ್ಯೋಗವಿಲ್ಲ ಎಂದರ್ಥವಲ್ಲ. ನಿಮಗೆ ಕೆಲಸ ಸಿಗದೇ ನಿರುದ್ಯೋಗಿಯಾಗಿ ಉಳಿದುಕೊಂಡರೆ, ನೀವಿನ್ನು ಚಿಕ್ಕವರಾಗಿರುವುದರಿಂದ ನಿಮಗೆ ಶಕ್ತಿಯಿದೆ. ನೀವು ಬೇಗ ಕೋಪಗೊಳ್ಳುತ್ತೀರಾ, ನೀವು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತೀರಾ, ಆಗ ಅವರು ನಿಮ್ಮನ್ನು ಕೆಣಕಲು ಸುಲಭವಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ.

ಹಾಗಾಗಿ ನಿಮ್ಮ ಮುಂದೆ ಧರ್ಮ ಮತ್ತು ಜಾತಿಯ ಸಮಸ್ಯೆಯನ್ನು ಎತ್ತಿದಾಗ, ನೀವು ಆ ಸಾಲಿನಲ್ಲಿ ಮತ ಚಲಾಯಿಸುತ್ತೀರಾ. ಆದರೆ ನೀವು ಯಾವಾಗ ಓದಿ ಅಧಿಕಾರವನ್ನು ಪಡೆದು ಹಣ ಸಂಪಾದಿಸಿ ಮನೆಗೆ ತಂದು ನಿಮ್ಮ ಹೆತ್ತವರನ್ನು ನೋಡಿಕೊಳ್ಳುತ್ತೀರಾ, ಆಗ ಯಾರು ನಿಮ್ಮನ್ನು ನಂಬಿಸಿ ಮೋಸ ಮಾಡುತ್ತಾರೆ ಅವರ ಅಭಿವೃದ್ಧಿ, ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನಿಸುತ್ತೀರಾ ಎಂದು ಹೇಳಿದ್ದಾರೆ ಮತ್ತು ಕೇಂದ್ರ ಸರ್ಕಾರ ಎಲ್ಲಾ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾರಾಟ ಮಾಡುವ ಮೂಲಕ ಉದ್ಯೋಗ ಸೃಷ್ಟಿಯನ್ನು ನಾಶಪಡಿಸಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ರಕ್ಷಣೆ ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

ಇಂದು ಹಣದುಬ್ಬರ ದೊಡ್ಡ ಸಮಸ್ಯೆಯಾಗಿದೆ. ನೀವು ಅಂಗಡಿಗೆ ಹೋದರೆ, ನೀವು ಹೆಚ್ಚಿನ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹಣದುಬ್ಬರ ಹೆಚ್ಚಾಗಿದೆ, ನಿರುದ್ಯೋಗ ಹೆಚ್ಚಾಗುತ್ತಿದೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ, ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಜಿಎಸ್‍ಟಿಯಿಂದ ಸಣ್ಣ ಅಂಗಡಿ ನಡೆಸುವವರ ಮೇಲೆ ಪರಿಣಾಮ ಬೀರಿದೆ. ಸಣ್ಣ ಉದ್ಯಮಗಳು ಮತ್ತು ನೇಕಾರ ಸಮುದಾಯಕ್ಕೆ ಸರ್ಕಾರ ಯಾವುದೇ ಪರಿಹಾರವನ್ನು ನೀಡಲಿಲ್ಲ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಸಾಲ, ಕೋವಿಡ್ ಅವಧಿಗೆ ಅಂಗಡಿಕಾರರ ವಿದ್ಯುತ್ ಬಾಕಿಗಳನ್ನು ಮನ್ನಾ ಮಾಡಲಾಗುವುದು ಮತ್ತು ಎಲ್ಲರಿಗೂ ವಿದ್ಯುತ್ ಬಿಲ್‍ಗಳನ್ನು ಅರ್ಧಕ್ಕೆ ಇಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *