ಅಮಿತ್ ಶಾ ಧ್ವಜಾರೋಹಣದ ವೇಳೆ ಕೆಳಗೆ ಬಿತ್ತು ಧ್ವಜ!

Public TV
1 Min Read

– ದೇಶದ ಧ್ವಜ ಹಾರಿಸಲು ಆಗದವರು ಹೇಗೆ ದೇಶವನ್ನ ನಿಭಾಯಿಸ್ತಾರೆ? ಕಾಂಗ್ರೆಸ್ ವ್ಯಂಗ್ಯ

ನವದೆಹಲಿ: ದೇಶಾದ್ಯಂತ 72ನೇ ಸ್ವಾತಂತ್ರ್ಯ ದಿನಾಚರಣೆಯನನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಧ್ವಜಾರೋಹಣ ನಡೆಸುವ ವೇಳೆ ಎಡವಟ್ಟಾಗಿದೆ.

ಅಮಿತ್ ಶಾ ನೂತನ ಕಚೇರಿಯಲ್ಲಿ ಧ್ವಜಾರೋಹಣದಲ್ಲಿ ಮಾಡುತ್ತಿರುವಾಗ ಮೇಲೆರುತ್ತಿದ್ದ ಬಾವುಟ ದಿಢೀರ್ ಅಂತ ಕೆಳಗಿ ಬಿದ್ದಿದೆ. ಕೂಡಲೇ ಅಮಿತ್ ಶಾ ಧ್ವಜದ ದಾರ ಎಳೆದು ಪುನಃ ಧ್ವಜಾರೋಹಣ ಮಾಡಿದ್ದಾರೆ. ಇದೇ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು ವ್ಯಂಗ್ಯ ಮಾಡಿದೆ.

ಕಾಂಗ್ರೆಸ್ ವ್ಯಂಗ್ಯ:
ದೇಶದ ಧ್ವಜವನ್ನು ನಿಭಾಯಿಸಲು ಬಾರದವರು ದೇಶವನ್ನ ಹೇಗೆ ನಿಭಾಯಿಸುತ್ತಾರೆ. 50 ವರ್ಷಗಳಿಂದ ದೇಶದ ಬಾವುಟವನ್ನು ತಿರಸ್ಕಾರ ಮಾಡಿದ್ದವರು ಇಂದು ಧ್ವಜ ಹಾರಿಸದೇ ಇದ್ದಿದ್ದರೆ, ಇಂದು ನಮ್ಮ ರಾಷ್ಟ್ರ ಧ್ವಜಕ್ಕೆ ಈ ರೀತಿಯ ಅಪಮಾನ ಆಗುತ್ತಿರಲಿಲ್ಲ. ಬೇರೆಯವರಿಗೆ ದೇಶಭಕ್ತಿಯ ಸರ್ಟಿಫಿಕೇಟ್ ನೀಡೋರಿಗೆ ರಾಷ್ಟ್ರಗೀತೆಯ ನಿಯಮಗಳ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *