ದಾವಣಗೆರೆ: ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ (Srinivas Das Kariyappa) ಇಂದು ನಾಮಪತ್ರ ಸಲ್ಲಿಕೆ ಮಾಡಿದರು.
ಮೆರವಣಿಗೆ ಮುನ್ನವೇ ಶ್ರೀನಿವಾಸ್ ಕರಿಯಪ್ಪ ಅವರು ಪತ್ನಿ ಹಾಗೂ ಬಿಜೆಪಿ ಮುಖಂಡರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದರು. ನಂತರ ದುರ್ಗಾಂಬಿಕಾ ದೇವಸ್ಥಾನದಿಂದ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ದಾವಣಗೆರೆ ಉಪಸಮರಕ್ಕೂ ಮುನ್ನವೇ ಭುಗಿಲೆದ್ದ ಬಂಡಾಯ; 20ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಬಿಜೆಪಿ ಸೇರ್ಪಡೆ
ನಾಮಪತ್ರ ಸಲ್ಲಿಸಿ ಹೇಳಿಕೆ ನೀಡಿದ ಬಿಜೆಪಿ ಅಭ್ಯರ್ಥಿ, ಈ ಸಲ ದಾವಣಗೆರೆ ದಕ್ಷಿಣ ಕ್ಷೇತ್ರದ ಬದಲಾವಣೆ ಖಚಿತ. ಹಮಾಲಿ ಒಬ್ಬನ ಮಗ ರಾಜ್ಯದ ವಿಧಾನಸಭೆ ಪ್ರವೇಶ ಮಾಡೋದು ಖಚಿತ. ನನ್ನ ಪತಿಸ್ಪರ್ಧಿ ಕಾಂಗ್ರೆಸ್ ವಿನಃ ಯಾವುದೇ ಇಲ್ಲ. ಈ ಬಾರಿ ಭರವಸೆ ಇದೆ. ಬಿಜೆಪಿ ಗೆಲ್ಲಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಬಿಜೆಪಿಗೆ ಮತದಾನ ಮಾಡಲು ಕಾರ್ಯಕರ್ತರು, ಜನರು ಕಾತುರದಿಂದ ಕಾಯುತ್ತಿದ್ದಾರೆ. ಕಾಂಗ್ರೆಸ್ ಒಳಜಗಳದ ಬಗ್ಗೆ ನಾನೇನು ಮಾತಾಡೋದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದಾವಣಗೆರೆಯಲ್ಲಿ ʻಕೈʼಗೆ ಬಂಡಾಯದ ಬಿಸಿ – ಸಾಮೂಹಿಕ ನಾಮಪತ್ರ ಸಲ್ಲಿಕೆಗೆ ಮುಸ್ಲಿಂ ಮುಖಂಡರ ನಿರ್ಧಾರ

