ಲಂಡನ್‌, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ

Public TV
1 Min Read

ಪಣಜಿ: ದಕ್ಷಿಣ ಗೋವಾದ ಬಿಜೆಪಿ ಮೊದಲ ಮಹಿಳಾ ಅಭ್ಯರ್ಥಿ ಪಲ್ಲವಿ ಡೆಂಪೊ (Pallavi Dempo) ಮತ್ತು ಅವರ ಪತಿ ಶ್ರೀನಿವಾಸ್‌ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಬರೋಬ್ಬರಿ 1,400 ಕೋಟಿ ರೂ. ಆಸ್ತಿ ಒಡತಿಯಾಗಿದ್ದಾರೆ.

ಪಲ್ಲವಿ ಅವರು 255.4 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದರೆ, ಡೆಂಪೋ ಗ್ರೂಪ್ ಅಧ್ಯಕ್ಷರಾಗಿರುವ ಅವರ ಪತಿ ಒಡೆತನದ ಆಸ್ತಿ 994.8 ಕೋಟಿ ರೂ. ಬಿಜೆಪಿ ಲೋಕಸಭಾ ಅಭ್ಯರ್ಥಿಯ ಸ್ಥಿರಾಸ್ತಿ ಮೌಲ್ಯ 28.2 ಕೋಟಿ ರೂ. ಇದೆ. ಇದನ್ನೂ ಓದಿ: ಅಂದು ಸುಮಲತಾ, ಇಂದು ಸ್ಟಾರ್ ಚಂದ್ರು ಪರ ದರ್ಶನ್ ಅಬ್ಬರದ ಪ್ರಚಾರ

ಪಲ್ಲವಿ ಮತ್ತು ಶ್ರೀನಿವಾಸ್‌ ಡೆಂಪೊ ದಂಪತಿ ದುಬೈನಲ್ಲಿ 2.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಲಂಡನ್‌ನಲ್ಲಿ 10 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಜೊತೆಗೆ ಗೋವಾ ಮತ್ತು ಭಾರತದ ಇತರ ಸ್ಥಳಗಳಲ್ಲಿ ಆಸ್ತಿ ಹೊಂದಿದ್ದಾರೆ.

5.7 ಕೋಟಿ ಮೌಲ್ಯದ ಚಿನ್ನವನ್ನು ಹೊಂದಿರುವ ಪಲ್ಲವಿ, 2023 ರ ಆರ್ಥಿಕ ವರ್ಷದಲ್ಲಿ 10 ಕೋಟಿ ರೂ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದಾರೆ. ಅವರ ಪತಿ 11 ಕೋಟಿ ರೂ. ರಿಟರ್ನ್ಸ್ ಸಲ್ಲಿಸಿದ್ದಾರೆ. ಪಲ್ಲವಿ ಅವರು ಡೆಂಪೊ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಡೆಂಪೊ ಚಾರಿಟೀಸ್ ಟ್ರಸ್ಟ್‌ನಲ್ಲಿ ಟ್ರಸ್ಟಿಯಾಗಿದ್ದಾರೆ. ಇದನ್ನೂ ಓದಿ: ಪ್ರೆಸಿಡೆಂಟ್ ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್- ಚರ್ಚೆಗೆ ಗ್ರಾಸವಾಯ್ತು ರಾಗಾ ಭಾಷಣ

ಪಲ್ಲವಿ ರಾಜಕೀಯಕ್ಕೆ ಹೊಸಬರಾಗಿದ್ದರೂ, ಡೆಂಪೊ ಕುಟುಂಬ ಆರು ದಶಕಗಳ ಹಿಂದೆ ರಾಜಕೀಯಕ್ಕೆ ಕಾಲಿಟ್ಟಿತು. ಶ್ರೀನಿವಾಸ್ ಅವರ ದೊಡ್ಡಪ್ಪ ವೈಕುಂಠರಾವ್ ಸಿನಾಯ್ ಡೆಂಪೊ ಅವರು 1963 ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

Share This Article